ಎಕ್ಸಿಟ್ ಪೋಲ್ ಬಳಿಕ ಬಿಜೆಪಿಗೆ ಶುರುವಾಯ್ತು ನಡುಕ: ಅಧಿಕಾರದ ಚುಕ್ಕಾಣಿಗಾಗಿ ಕಮಲಕಲಿಗಳಿಂದ ಆಪರೇಷನ್ ತಂತ್ರ!?
ಬೆಂಗಳೂರು,ಮೇ 11: 2023 ರ ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ತೆರೆ ಬೀಳುತ್ತಿದ್ದಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳ ಭರಾಟೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನ ನಡೆಸಿದ್ದ ಬಿಜೆಪಿಗೆ ನಡುಕ ಶುರುವಾಗಿದ್ದು, ಮೇ 13 ರಂದು ಪ್ರಕಟಗೊಳ್ಳುಜವ ಫಲಿತಾಂಶ ಕುರಿತು ಸಾಕಷ್ಟು ಚರ್ಚೆಗಳು ಕಮಲ ಪಾಳಯವನ್ನ ನಿದ್ದೆಗೆಡಿಸಿದೆ ಎಲ್ಲಾಗಿದೆ.
ಹೌದು, ರಾಜ್ಯ ಬಿಜೆಪಿ ನಾಯಕರು ಈ ಬಾರಿಯೂ ಅಧಿಕಾರದ ಗದ್ದುಗೆ ಏರಲು ಹಲವು ತಂತ್ರ, ಪ್ರತಿತಂತ್ರ ಹಾಗೂ ಮೋದಿ, ಅಮಿತ್ ಶಾ ಮೂಲಕ ನಡೆಸಿದ ಹಲವು ತಂತ್ರಗಳು ಫಲಕೊಡದಂತೆ ಕಾಣುತ್ತಿಲ್ಲ. ಇನ್ನೂ ಸರ್ಕಾರ ರಚನೆಯ ವಿಶ್ವಾಸದಲ್ಲಿರುವ ಬಿಜೆಪಿ ನಾಯಕರು ಮತ್ತೆ ಆಪರೇಷನ್ ಕಮಲ ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಎಕ್ಸಿಟ್ ಪೋಲ್ ಸಮೀಕ್ಷೆಯಂತೆ ಬಿಜೆಪಿಗೆ ಸಂಖ್ಯಾಬಲ ಸಿಕ್ಕದಿದ್ದರೆ ಅಂತಹ ಕಾರ್ಯಾರಚಣೆಗೆ ಬಿಜೆಪಿ ಮುಂದಾಗುವ ಸಾಧ್ಯತೆಗಳು ಇವೆ. ಹಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮೊದಲ ಸ್ಥಾನವನ್ನ ಪಡೆದಿದ್ದಾರೆ. ಆಡಳಿತರೂಢ ಬಿಜೆಪಿ ಎರಡನೇ ಸ್ಥಾನದಲ್ಲಿದ್ದು, ಜೆಡಿಎಸ್ಮೂರನೇ ಸ್ಥಾನದಲ್ಲಿದೆ. ಅಲ್ಲದೇ ಸಮೀಕ್ಷೆಯಲ್ಲಿನ ಅಂಕಿ ಅಂಶಗಳನ್ನ ಗಮನಿಸಿದರೇ ಬಿಜೆಪಿಗೆ ಪೂರ್ಣ ಬಹುಮತ ಸಿಗುವುದು ಅನುಮಾನ ಎಂಬ ವಾತಾವರಣ ಇದೆ. ಹೈಕಮಾಂಡ್ ಈವರೆಗೆ ನಡೆಸಿರುವ ಸಮೀಕ್ಷೆಗಳಲ್ಲಿ ಯಾವುದರಲ್ಲೂ ಪಕ್ಷ ಬಹುಮತ ಗಳಿಸುವ ಸೂಚನೆಗಳು ಕಂಡು ಬಂದಿಲ್ಲ. ಬದಲಾಗಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಕಂಡು ಬಂದಿದೆ.
ಈ ಮುನ್ಸೂಚನೆ ಅರಿತ ಪಕ್ಷದ ರಾಷ್ಟ್ರೀಯ ನಾಯಕರು ಶತಾಯ ಗತಾಯ ಅಧಿಕಾರ ಹಿಡಿಯಲು ಎಲ್ಲ ರಾಜಕೀಯ ತಂತ್ರಗಳ ಮೊರೆ ಹೋಗುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರಲ್ಲಿ ಜೆಡಿಎಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವ ಸಾಧಕ ಬಾಧಕಗಳ ಬಗ್ಗೆಯೂ ಚರ್ಚೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೊಂದು ಕಡೆ ಜೆಡಿಎಸ್ ನ ನಾಲ್ಕೈದು ಜನ ಗೆಲ್ಲುವ ನಾಯಕರನ್ನ ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಇತ್ತೀಚೆಗೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಾವುದೇ ಕಾರ್ಯ ತಂತ್ರಕ್ಕೂ ಸಿದ್ಧರಾಗಿರಬೇಕೆಂದು ಪಕ್ಷದ ಮುಖಂಡರಿಗೆ ಸೂಚನೆ ಕೊಟ್ಟಿರುವುದರ ಅರ್ಥವೂ ಇದೇ ಎಂಬುದನ್ನು ಬಿಜೆಪಿ ಮೂಲಗಳೇ ಒಪ್ಪಿಕೊಳ್ಳುತ್ತವೆ.
ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ, ಇದೀಗ ಕರ್ನಾಟಕದಲ್ಲೂ ಅಧಿಕಾರ ಕಳೆದುಕೊಂಡರೇ ಕಷ್ಟ ಆಗಲಿದೆ ಎಂಬ ಚರ್ಚೆ ಹೈಕಮಾಂಡ್ ನಾಯಕರ ಮಟ್ಟದಲ್ಲಿ ಶುರುವಾಗಿದೆ. ಕಳೆದ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿದರೂ ಅಧಿಕಾರಕ್ಕೆ ಏರಲು ಆಪರೇಷನ್ ಕಮಲ ಕಾರ್ಯಾಚರಣೆಯ ಮೊರೆ ಹೋಗಬೇಕಾಯಿತು. ಆದರೆ, ಈ ಬಾರಿ ಪರಿಸ್ಥಿತಿ ಹಿಂದಿಗಿಂತ ಭಿನ್ನವಾಗಿದೆ. ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಕಾಂಗ್ರೆಸ್ ಪ್ರಬಲವಾಗಿದ್ದು ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನ ಗಳಿಸುತ್ತದೆ ಎಂಬ ಸಮೀಕ್ಷಾ ವರದಿಗಳು ಬಿಜೆಪಿಯ ನಾಯಕತ್ವವನ್ನು ಕಂಗೆಡಿಸಿದೆ.
ಹೀಗಾಗಿ ರಾಜ್ಯದಲ್ಲ ಕಾಂಗ್ರೆಸ್ ನ್ನು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲು ಬಿಡಬಾರದು ಎಂಬ ಸಂದೇಶ ರಾಷ್ಟ್ರೀಯ ನಾಯಕರಿಂದ ಬಂದಿದೆ ಎನ್ನಲಾಗಿದ್ದು, ಬಿಜೆಪಿ ಬಿಟ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದ ನಾಯಕರನ್ನ ಮತ್ತೆ ಪಕ್ಷಕ್ಕೆ ಕರೆತರಲು ಬಿಜೆಪಿ ಕಣ್ಣೀಟ್ಟಿದೆ. ಅಲ್ಲದೇ ಹಲವು ನಾಯಕರಿಗೆ ಕೆಲ ಆಫರ್ ಗಳನ್ನ ನೀಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications