SSLC Preparatory Exam 2026: ಆನ್‌ಲೈನ್‌ನಲ್ಲಿ ಪ್ರಶ್ನೆ ಪತ್ರಿಕೆ ನೀಡುವ ವ್ಯವಸ್ಥೆ ಜಾರಿ, ಗ್ರಾಮೀಣ ಶಾಲೆಗಳಿಗೆ ಸಮಸ್ಯೆ
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ 10ನೇ ತರಗತಿ (SSLC Exam 2026) ವಿದ್ಯಾರ್ಥಿಗಳಿಗೆ ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು (SSLC Preparatory Exam 2026) ನಡೆಸುತ್ತಿದೆ. ಸೋಮವಾರದಿಂದ (ಜನವರಿ 5) ಪರೀಕ್ಷೆಗಳು ಶುರುವಾಗಿವೆ. ಪರೀಕ್ಷಾ ದಿನದಂದು ಪ್ರಶ್ನೆ ಪತ್ರಿಕೆಗಳನ್ನು ಆನ್‌ಲೈನ್ ಮೂಲಕ ಒದಗಿಸುವ ಶಿಕ್ಷಣ ಇಲಾಖೆಯ ಈ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯವಾಗಿ ಈ ಕ್ರಮದಿಂದ ಗ್ರಾಮೀಣ ಭಾಗದಲ್ಲಿ ಒಂದಷ್ಟು ತೊಂದರೆ ಎದುರಿಸಬೇಕಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಗಳ ದಿನದಂದೇ ಶಿಕ್ಷಣ ಇಲಾಖೆಯು ಆಯಾ ಶಾಲೆಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಆನ್‌ಲೈನ್‌ನಲ್ಲಿ ಮೂಲಕ ಒದಗಿಸುವ ನೀತಿ ಜಾರಿಗೆ ತರಲಾಗಿದೆ. ಈ ನೀತಿ ಕುರಿತು ಶಿಕ್ಷಕರುಗಳೇ ಒಮ್ಮತ ಅಭಿಪ್ರಾಯ ಹೊಂದಿದೆ. ಇಲಾಖೆಯು ಪೋರ್ಟ್‌ಲ್‌ನಲ್ಲಿ ಅಪ್ಲೋಡ್ ಮಾಡುತ್ತದೆ. ಅದನ್ನು ಆಯಾ ಶಾಲೆಗಳು ಡೌನ್‌ಲೋಡ್ ಮಾಡಿಕೊಂಡು ಪ್ರತಿ ಝರಾಕ್ಸ್ ಪಡೆದು ಪರೀಕ್ಷಾರ್ಥಿಗಳಿಗೆ ವಿತರಿಸಬೇಕೆಂಬುದು ಈ ನೀತಿಯ ಉದ್ದೇಶವಾಗಿದೆ ಎಂದು TNIE ವರದಿ ಮಾಡಿದೆ.

ಒಂದಷ್ಟು ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಶ್ನೆ ಪತ್ರಿಕೆಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಇದೇ ಮೊದಲು. ಅದನ್ನು ಆಯಾ ಶಾಲಾ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರಿಗೆ ವೀಕ್ಷಣೆಗೆ ಮಾತ್ರವೇ ಅವಕಾಶ ಇರುತ್ತದೆ. ಅವರ ಮೊಬೈಲ್ ಸಂಖ್ಯೆಗಳಿಗೆ ಕಳುಹಿಸಲಾದ ಲಾಗಿನ್ ವಿವರ ಮತ್ತು ಒಂದು ಬಾರಿಯ ಪಾಸ್‌ವರ್ಡ್ (ಒಟಿಪಿ) ನಮೂದಿಸಿದ ಪೋರ್ಟಲ್ ಪ್ರವೇಶಿಸಬಹುದು. ವೆಚ್ಚ ಕಡಿಮೆ ಮಾಡಲು ಈ ರೀತಿಯ ಡಿಜಿಟಲ್ ಗೆ ಬದಲಾಯಿಸಿದ ಕ್ರಮವನ್ನು ಕೆಲವರು ಸ್ವಾಗತಿಸಿದ್ದಾರೆ. ಆದರೆ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಆಗಲಿದೆ ಎಂಬುದನ್ನು ಮರೆಯುವಂತಿಲ್ಲ.
ಶಿಕ್ಷಣ ಇಲಾಖೆಯು ಹಳ್ಳಿ ಭಾಗದ ಶಾಲೆಗಳನ್ನು ಗಮನದಲ್ಲಿಕೊಂಡು ಈ ನಿರ್ಧಾರ ಕೈಗೊಳ್ಳಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಗ್ರಾಮೀಣ ಭಾಗಗಳಲ್ಲಿ ಶಾಲೆಗಳ ಅಕ್ಕಪಕ್ಕ ಝರಾಕ್ಸ್ ಪ್ರಿಂಟಿಂಗ್ ಶಾಪ್‌ಗಳು ಇರುವುದಿಲ್ಲ. ಅಲ್ಲದೇ ಒಂದು ಶಾಲೆಯಲ್ಲಿ ಸುಮಾರು 40-50 ಮಕಳಿದ್ದರೆ ಅವರಿಗಾಗಿ ಪ್ರಶ್ನೆ ಪತ್ರಿಕೆ ನೂರಾರು ನಕಲು ಪ್ರತಿಗಳನ್ನು ಪಡೆಯಬೇಕಾಗುತ್ತದೆ. ಅದಕ್ಕೆ ಗಂಟೆಗಳ ಸಮಯ ಹಿಡಿಯುತ್ತದೆ. ಅಲ್ಲದೇ, ವಿದ್ಯುತ್, ಝರಾಕ್ಸ್ ಯಂತ್ರ ಕೈ ಕೊಡುವುದು ಸೇರಿ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಇದರಿಂದ ಪರೀಕ್ಷೆ ವೇಳೆ ತೊಂದರೆ ಅಗಲೂಬಹುದು.
ಬೆಳಗ್ಗೆ 6.30ಕ್ಕೆ ಶಾಲೆಗಳಿಗೆ ಬಂದ ಶಿಕ್ಷಕರು
ಸರ್ಕಾರಿ ಶಾಲೆಯೊಂದರ ಶಿಕ್ಷಕರು ಈ ಬಗ್ಗೆ ಮಾತನಾಡಿ, ಶಿಕ್ಷಣ ಇಲಾಖೆ ನಿರ್ಧಾರ ಸ್ವಾಗತಿಸಿದರು. "ನಮ್ಮ ಶಾಲೆಯ ಎಸ್‌ಎಸ್‌ಎಲ್‌ಸಿ 45 ವಿದ್ಯಾರ್ಥಿಗಳಿದ್ದಾರೆ. ಬೆಳಗ್ಗೆ 7 ಗಂಟೆಗೆ ಪೋರ್ಟಲ್‌ನಲ್ಲಿ ಪ್ರಶ್ನೆ ಪತ್ರಿಕೆ ಅಪ್ಲೋಡ್ ಆದರೆ ನಾವು 6.30ಕ್ಕೆ ಶಾಲೆಗಳಿಗೆ ಬಂದೆವು. ಅಷ್ಟೂ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಝರಾಕ್ಸ್ ಪಡೆಯಲು ಎರಡು ಗಂಟೆ ಬೇಕಾಯಿತು. ಈ ಪ್ರಶ್ನೆ ಪತ್ರಿಕೆಗಳನ್ನು ಆಯಾ ಶಾಲೆಗಳಿಗೆ ನಿಯೋಜಿಸಲಾದ ಕೋಡ್‌ನ ಗುರುತು ಹೊಂದಿರುತ್ತವೆ. ಅವುಗಳನ್ನು ಅಪ್ಲೋಡ್ ಮಾಡಲಾಗಿರುತ್ತದೆ' ಎಂದು ಅವರು ಮಾಹಿತಿ ನೀಡಿದರು. ಜೊತೆಗೆ ಹೊಸ ವ್ಯವಸ್ಥೆಯಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
ಶಿಕ್ಷಕರಿಗೆ ಒಂದಷ್ಟು ಸವಾಲುಗಳು
ಪರೀಕ್ಷಾ ದಿನದಂದು 6.30 ಕ್ಕೆ ಶಾಲೆಗಳಿಗೆ ಬಂದು ಪ್ರಶ್ನೆ ಪತ್ರಿಕೆ ಡೌನ್‌ಲೋಡ್ ಮಾಡಿ ನಕಲು ಪ್ರತಿ ತೆಗೆದುಕೊಂಡು ಶಾಲೆ ಬಂದೆವೆ. ಝರಾಕ್ಸ್ ಸೆಂಟರ್ ಇಲ್ಲಿಲ್ಲದ ಕಾರಣ, ಪಟ್ಟಣಕ್ಕೆ ಹೋಗಿ ಬರಬೇಕಾಯಿತು ಎಂದು ವಿಜಯನಗರ ಜಿಲ್ಲೆಯ ಬನ್ನಿಗೋಳ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ತಿಳಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಎಷ್ಟೇ ವಿದ್ಯಾರ್ಥಿಗಳು ಇದ್ದರು ನಕಲು ಪ್ರತಿ ತೆಗೆದುಕೊಂಡು ಶಿಕ್ಷಕರು ಬೆಳಗ್ಗೆ 9 ಗಂಟೆಯ ಒಳಗೆ ಶಾಲೆಗೆ ಬರಬೇಕಿರುತ್ತದೆ. ಒಟ್ಟಾರೆ ಈ ವ್ಯವಸ್ಥೆಯಿಂದ ಶಾಲೆ ಶಿಕ್ಷಕರು ಕೆಲವು ಸವಾಲುಗಳನ್ನು ಎದುರಿಸುವಂತಾಗಿದೆ. ನಕಲು ಪ್ರತಿ ತರುವಾಗಲು ಅಂಗಡಿಯವರು ಬೇರೆಯವರೊಂದಿಗೆ ಪ್ರಶ್ನೆ ಪತ್ರಿಕೆ ಹಂಚಿಕೊಳ್ಳದಂತೆ, ಮಾಹಿತಿ ಸೋರಿಕೆ ಆಗದಂತೆ ಎಚ್ಚರ ವಹಿಸಬೇಕಾಗುತ್ತದೆ.












Click it and Unblock the Notifications