Breaking; ಸಿದ್ದರಾಮಯ್ಯಗೆ ಬಂತು ಮತ್ತೊಂದು 1 ಕೋಟಿ ರೂ. ಆಫರ್!
ಹೊಸಪೇಟೆಯಿಂದ ಕಣಕ್ಕಿಳಿಯುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಆಹ್ವಾನ ನೀಡಲಾಗಿದೆ. ಚುಣಾವಣಾ ಕಣಕ್ಕಿಳಿದರೆ 1 ಕೋಟಿ ರೂ. ದೇಣಿಗೆ ನೀಡುವುದಾಗಿ ವ್ಯಕ್ತಿಯೊಬ್ಬರು ಘೋಷಣೆ ಮಾಡಿದ್ದಾರೆ.
ಬೆಂಗಳೂರು, ಫೆಬ್ರವರಿ 08; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮತ್ತೊಂದು 1 ಕೋಟಿ ರೂ. ದೇಣಿಗೆ ಆಫರ್ ಬಂದಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ತಮ್ಮ ಕ್ಷೇತ್ರದಿಂದ ಕಣಕ್ಕಿಳಿಯಲಿ ಎಂದು ಹಲವಾರು ಜನರು ಬಯಸಿ, ಆಫರ್ ನೀಡುತ್ತಿದ್ದಾರೆ.
Recommended Video

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿಯೊಬ್ಬರು ಸಿದ್ದರಾಮಯ್ಯ ಹೊಸಪೇಟೆ ಕ್ಷೇತ್ರದಿಂದ ಕಣಕ್ಕಿಳಿಯಲಿ ಎಂದು ಆಹ್ವಾನ ನೀಡಿದ್ದಾರೆ. ಕ್ಷೇತ್ರದ ಹಾಲಿ ಶಾಸಕರು ಪ್ರವಾಸೋದ್ಯಮ ಸಚಿವ, ಬಿಜೆಪಿ ನಾಯಕ ಆನಂದ್ ಸಿಂಗ್.

ಹೊಸಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಿದ್ದರಾಮಯ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರೆ ಕ್ಷೇತ್ರ ಆಗಲಿದೆ. ಅವರು ಸ್ಪರ್ಧಿಸುವುದಾದರೆ ತನಗಿರುವ 6 ಎಕರೆ ಜಮೀನನಲ್ಲಿ ಎರಡು ಎಕರೆ ಮಾರಿ ರೂ. 1 ಕೋಟಿ ದೇಣಿಗೆ ನೀಡುತ್ತೇನೆ ಎಂದು ವ್ಯಕ್ತಿಯೊಬ್ಬರು ಆಫರ್ ನೀಡಿದ್ದಾರೆ.
ಯಾದಗಿರಿಯಿಂದ ಆಫರ್; ಕಳೆದ ವಾರ ಯಾದಗಿರಿಯ ಬಿಜೆಪಿ ಕಾರ್ಯಕರ್ತರೊಬ್ಬರು ಸಿದ್ದರಾಮಯ್ಯಗೆ 1 ಕೋಟಿ ರೂ. ಆಫರ್ ನೀಡಿದ್ದರು. ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸಿದರೆ ನಾನು ಬಿಜೆಪಿ ಕಾರ್ಯಕರ್ತನಾಗಿದ್ದರೂ ಅವರಿಗೆ ನೆರವಾಗುತ್ತೇನೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯರೂ ಆಗಿರುವ ಚಂದ್ರರಾಯ ನಾಗರಾಳ ಹುಲಕಲ್ ಹೇಳಿದ್ದರು.
"ನಾನು ರೈತನೇ ಹೊರತು ಉದ್ಯಮಿ, ಗುತ್ತಿಗೆದಾರ ಅಲ್ಲ. ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸಿದರೆ 1 ಕೋಟಿ ರೂ. ನೀಡುವೆ. ಶಹಾಪುರದ ಹಾಲಿ ಶಾಸಕ ಶರಣಬಸಪ್ಪ ಗೌಡ ದರ್ಶನಾಪುರ ಯಾದಗಿರಿಯಿಂದ ಸ್ಪರ್ಧಿಸಿದರೆ 25 ಲಕ್ಷ ನೀಡುವೆ" ಎಂದು ಘೋಷಣೆ ಮಾಡಿದ್ದರು.
ಚಿಕ್ಕಮಗಳೂರಿನಿಂದ ಆಹ್ವಾನ; ಸಿದ್ದರಾಮಯ್ಯ ಚಿಕ್ಕಮಗಳೂರಿಗೆ ಬಂದು ಬಿಜೆಪಿಯ ಸಿ. ಟಿ. ರವಿ ವಿರುದ್ಧ ಕಣಕ್ಕಿಳಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ.ಗೂ ಅಧಿಕ ಹಣ ನೀಡುತ್ತೇನೆ ಎಂದು ಬಾಲಕೃಷ್ಣ ಎಂಬುವವರು ಆಹ್ವಾನಿಸಿದ್ದರು.
ಸಿದ್ದರಾಮಯ್ಯ ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಶಾಸಕರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅವರು ಕ್ಷೇತ್ರ ಬದಲಾವಣೆ ಮಾಡಿ ಕೋಲಾರದಿಂದ ಕಣಕ್ಕಿಳಿಯಲಿದ್ದಾರೆ. ಆದರೆ ಇದಕ್ಕೆ ಹೈಕಮಾಂಡ್ ಇನ್ನೂ ಒಪ್ಪಿಗೆ ಕೊಟ್ಟಿಲ್ಲ.
ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಸಿದ್ದರಾಮಯ್ಯ, "ಇಲ್ಲಿನ ಜನರ ಪ್ರೀತಿ ಅಭಿಮಾನವನ್ನು ನಾನು ತಿರಸ್ಕಾರ ಮಾಡಲಾರೆ. ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ಆದರೆ ಹೈಕಮಾಂಡ್‌ನ ಅನುಮತಿ ಮೇರೆಗೆ ನನ್ನ ಸ್ಪರ್ಧೆ ನಿರ್ಧಾರವಾಗಲಿದೆ" ಎಂದು ಘೋಷಣೆ ಮಾಡಿದ್ದರು.












Click it and Unblock the Notifications