ರಾತ್ರೋರಾತ್ರಿ ರೆಸಾರ್ಟ್‌ನಿಂದ ನಾಪತ್ತೆಯಾದ ಕಾಂಗ್ರೆಸ್ ಶಾಸಕ?

Recommended Video

      ಎಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಮತ್ತೊಂದು ದೊಡ್ಡ ಆಘಾತ | Oneindia Kananda

      ಬೆಂಗಳೂರು, ಜುಲೈ 18: ಈಗಾಗಲೇ 15 ಶಾಸಕರನ್ನು ಕಳೆದುಕೊಂಡು ಆತಂಕದಲ್ಲಿರುವ ಕಾಂಗ್ರೆಸ್‌ಗೆ ವಿಶ್ವಾಸಮತ ಯಾಚನೆ ದಿನವೇ ಇನ್ನೂ ದೊಡ್ಡ ಆಘಾತ ಎದುರಾಗಿದೆ.

      ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ನ ಸುಪರ್ಧಿಯಲ್ಲಿದ್ದ ಕಾಂಗ್ರೆಸ್‌ ಶಾಸಕರೊಬ್ಬರು ರಾತ್ರೋರಾತ್ರಿ ಪಲಾಯನ ಮಾಡಿದ್ದಾರೆ. ಇದು ಕೈ ನಾಯಕರಿಗೆ ತೀವ್ರ ಆತಂಕ ತಂದಿದೆ.

      ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರುಗಳು ಕಾಂಗ್ರೆಸ್ ಶಾಸಕರು ತಂಗಿರುವ ಪ್ರಕೃತಿ ರೆಸಾರ್ಟ್‌ನಿಂದ ಏಕಾ-ಏಕಿ ಕಣ್ಮರೆ ಆಗಿದ್ದಾರೆ.

      ನಿನ್ನೆ ರಾತ್ರಿ ಹೊರಗೆ ಹೋಗಿಬರುವುದಾಗಿ ಹೇಳಿ ಹೋಗಿದ್ದ ಶಾಸಕ ಶ್ರೀಮಂತ ಪಾಟೀಲ್ ಕಣ್ಮರೆಯಾಗಿದ್ದು, ಬಿಜೆಪಿ ಪಾಳಯಕ್ಕೆ ಹೊಕ್ಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಶ್ರೀಮಂತ ಪಾಟೀಲ್ ಮೊಬೈಲ್ ಸ್ವಿಚ್ ಆಫ್ ಆಗಿವೆ.

      ಅತೃಪ್ತರ ಬಳಗದಲ್ಲಿದ್ದ ಶ್ರೀಮಂತ ಪಾಟೀಲ್

      ಅತೃಪ್ತರ ಬಳಗದಲ್ಲಿದ್ದ ಶ್ರೀಮಂತ ಪಾಟೀಲ್

      ಕಣ್ಮರೆ ಆಗಿರುವ ಶಾಸಕ ಶ್ರೀಮಂತ ಪಾಟೀಲ್ ಅತೃಪ್ತರ ಬಳಗದಲ್ಲಿ ಹಿಂದೆ ಗುರುತಿಸಿಕೊಂಡವರೇ ಆಗಿದ್ದಾರೆ. ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು, ಆದರೆ ಸಚಿವ ಸ್ಥಾನ ಸಿಕ್ಕಿರಲಿಲ್ಲ.

      ಶಾಸಕ ಬಿ.ನಾಗೇಂದ್ರ ಅಧಿವೇಶನಕ್ಕೆ ಗೈರಾಗಬಹುದು

      ಶಾಸಕ ಬಿ.ನಾಗೇಂದ್ರ ಅಧಿವೇಶನಕ್ಕೆ ಗೈರಾಗಬಹುದು

      ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರು ತಾವು ವಿಧಾನಸಭೆಗೆ ಹಾಜರಾಗುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಈಗ ಈ ಇಬ್ಬರೂ ಶಾಸಕರು ಕೈ ಕೊಟ್ಟರೆ ವಿಶ್ವಾಸಮತವನ್ನು ಮೈತ್ರಿ ಸರ್ಕಾರ ಸೋಲುವುದು ಖಚಿತವಾಗುತ್ತದೆ.

      ಶಾಸಕ ವಿ.ಮುನಿಯಪ್ಪ ಸ್ಪಷ್ಟನೆ

      ಶಾಸಕ ವಿ.ಮುನಿಯಪ್ಪ ಸ್ಪಷ್ಟನೆ

      ರೆಸಾರ್ಟ್‌ನಿಂದ ಹೊರಗೆ ಹೋಗಿದ್ದಾರೆ ಎನ್ನಲಾಗಿದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ಶಿಡ್ಲಘಟ್ಟದ ವಿ.ಮುನಿಯಪ್ಪ ಅವರು ವಾಪಸ್ ಬಂದಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 'ರಾಜಕೀಯದ ಕಾರಣಕ್ಕಾಗಿ ಹೊರಗೆ ಹೋಗಿರಲಿಲ್ಲ, ಊಟ ಸರಿಹೋಗಲಿಲ್ಲವೆಂದು ಹತ್ತಿರದಲ್ಲೇ ಇರುವ ನನ್ನ ಮನೆಗೆ ಹೋಗಿದ್ದೆ' ಎಂದು ಹೇಳಿದ್ದಾರೆ.

      ಸರ್ಕಾರ ಉರುಳುತ್ತದೆಯೋ? ಉಳಿಯುತ್ತದೆಯೋ?

      ಸರ್ಕಾರ ಉರುಳುತ್ತದೆಯೋ? ಉಳಿಯುತ್ತದೆಯೋ?

      ಇಂದು ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದು, ಸರ್ಕಾರ ಉಳಿಯುತ್ತದೆಯೋ ಅಥವಾ ಉರುಳುತ್ತದೆಯೋ ಎಂಬುದು ನಿರ್ಧಾರವಾಗಲಿದೆ. ಮೇಲ್ನೋಟಕ್ಕೆ ಸರ್ಕಾರ ಉರುಳುವ ಮುನ್ಸೂಚನೆ ಕಾಣುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+