Cauvery Dispute: ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು?
ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ ಅಂತಾ ಕರ್ನಾಟಕ ತಿರುಗಿಬಿದ್ದಿದ್ದು, ಈಗಾಗಲೇ ಬೆಂಗಳೂರು & ಕರ್ನಾಟಕ ಬಂದ್ ಬಿಸಿಯನ್ನೂ ಕನ್ನಡಿಗರು ಅನುಭವಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾವೇರಿ ಕೊಳ್ಳದಲ್ಲಿ ಉತ್ತಮವಾಗಿ ಮಳೆ ಬೀಳುತ್ತಿದ್ದು, ನೀರಿನ ಕೊರತೆ ನೀಗುವ ಲಕ್ಷಣ ಗೋಚರಿಸುತ್ತಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇದೇ ವಿಚಾರಕ್ಕೆ ನಡೆಯುತ್ತಿದ್ದ ಫೈಟಿಂಗ್‌ಗೂ ಬ್ರೇಕ್ ಬಿತ್ತು ಅನ್ನುವಾಗಲೇ ಇದೀಗ ಮತ್ತೆ ಜಗಳ ಆರಂಭವಾಗಿದೆ.
ಹೌದು ಕಾವೇರಿ ವಿಚಾರ ಕರ್ನಾಟಕದಲ್ಲಿ ರಾಜಕೀಯವಾಗಿ ಬದಲಾಗಿದೆ ಎಂಬ ಆರೋಪದ ಬೆನ್ನಲ್ಲೇ ಮತ್ತೆ ಬಿಜೆಪಿ & ಕಾಂಗ್ರೆಸ್ ಕಿರಿಕ್ ಶುರುವಾಗಿದೆ. ಈ ಬಾರಿ ಕರ್ನಾಟಕ ಕಾಂಗ್ರೆಸ್ ಕಾವೇರಿ ವಿಚಾರದಲ್ಲಿ ಎನ್‌ಡಿಎ ವಿರುದ್ಧ ಗಂಭೀರ ಆರೋಪ ಮಾಡಿದೆ. ಅದ್ರಲ್ಲೂ ಪಿಎಂ ಮೋದಿ ವಿರುದ್ಧ ಕಾವೇರಿ ವಿಚಾರ ಇಟ್ಟುಕೊಂಡು ವಾಗ್ದಾಳಿ ನಡೆಸಿದೆ. ಹಾಗೇ ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಬಂದ ವಿಚಾರವನ್ನೂ ಪ್ರಸ್ತಾಪಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದೆ.

ಕರ್ನಾಟಕ ಕಾಂಗ್ರೆಸ್ VS ಪ್ರಧಾನಿ ಮೋದಿ!
ಅಂದಹಾಗೆ ಕಾವೇರಿ ವಿಚಾರ ಪ್ರಸ್ತಾಪಿಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 'ಪ್ರಧಾನಿ ಮೋದಿಯವರು, ಚುನಾವಣೆಯ ಸಂದರ್ಭದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಭೇಟಿ ನೀಡಿದ್ದೇನು, ಹತ್ತಾರು ಕಿಲೋಮೀಟರ್ ರೋಡ್ ಶೋ ಮಾಡಿದ್ದೇನು, ಕನ್ನಡದಲ್ಲಿ ಡೈಲಾಗ್ ಹೊಡೆದಿದ್ದೇನು, ಕರ್ನಾಟಕ ನನ್ನ ಕರ್ಮ ಭೂಮಿ ಎಂದಿದ್ದೇನು... ಆದರೆ ಈಗ.. ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದರೂ ಪತ್ತೆ ಇಲ್ಲ. ಬರದಿಂದ ರಾಜ್ಯದ ಜನ ತತ್ತರಿಸಿದರೂ ಪತ್ತೆ ಇಲ್ಲ. ಕೇಂದ್ರದ ಯೋಜನೆಗಳಿಗೆ ರಾಜ್ಯದ ಪಾಲಿನ ಹಣ ಕೊಡುವ ಸುದ್ದಿಯೇ ಇಲ್ಲ. ಪ್ರಧಾನಿಯ ಕೆಲಸ ಮತ ಭೇಟೆ ಮಾತ್ರವೇ?' ಎಂದು ಈಗ ಬಿಜೆಪಿ ನಾಯಕರನ್ನ ಕಾಂಗ್ರೆಸ್ ಕೆಣಕಿದೆ.
ಪ್ರಧಾನಿ ಮೋದಿಯವರು,
— Karnataka Congress (@INCKarnataka) October 6, 2023
ಚುನಾವಣೆಯ ಸಂದರ್ಭದಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಭೇಟಿ ನೀಡಿದ್ದೇನು, ಹತ್ತಾರು ಕಿಲೋಮೀಟರ್ ರೋಡ್ ಶೋ ಮಾಡಿದ್ದೇನು, ಕನ್ನಡದಲ್ಲಿ ಡೈಲಾಗ್ ಹೊಡೆದಿದ್ದೇನು, ಕರ್ನಾಟಕವೇ ನನ್ನ ಕರ್ಮ ಭೂಮಿ ಎಂದಿದ್ದೇನು...
ಆದರೆ ಈಗ..
ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದರೂ ಪತ್ತೆ ಇಲ್ಲ.
ಬರದಿಂದ ರಾಜ್ಯದ ಜನ… pic.twitter.com/DI8Jepu1Xe
ಒಟ್ನಲ್ಲಿ ಒಂದು ಕಡೆ ಕಾವೇರಿ ನೀರಿನ ಕೊರತೆ ಕಾಡುತ್ತಿರುವ ಹೊತ್ತಲ್ಲೇ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಾವೇರಿ ಕಿತ್ತಾಟ ಜೋರಾಗಿದೆ. ಅತ್ತ ಕೇಂದ್ರ ಸರ್ಕಾರ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲಿ ಅಂತಾ ಕಾಂಗ್ರೆಸ್ ಆಗ್ರಹ ಮಾಡುತ್ತಿದೆ. ಈ ಮಧ್ಯೆ ಯುಪಿಎ ಕೇಂದ್ರದಲ್ಲಿ ಅಧಿಕಾರ ಇದ್ದಾಗ ಹೀಗೆ ಮಧ್ಯಪ್ರವೇಶ ಮಾಡಿತ್ತಾ? ಎಂಬ ಪ್ರಶ್ನೆಯನ್ನ ಬಿಜೆಪಿ ಕೇಳುತ್ತಿದೆ.
ಇಷ್ಟೆಲ್ಲದರ ಮಧ್ಯೆ ಈ ಇಬ್ಬರ ಜಗಳದಲ್ಲಿ ಕನ್ನಡಿಗರು ಮಾತ್ರ ಅನಾಥರಾಗಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಇದೆಲ್ಲಾ ಏನೇ ಇರಲಿ ಕಾವೇರಿ ವಿಚಾರದಲ್ಲಿ ರಾಜಕೀಯ ಅನಗತ್ಯ ಎಂಬುದೇ ಕನ್ನಡಿಗರ ಒತ್ತಾಯ. ಅದು ಯಾವ ಪಕ್ಷವೇ ಇದ್ದರೂ ಒಟ್ಟಾಗಿ ಈ ವಿಚಾರದಲ್ಲಿ ಹೋರಾಡಲಿ ಎಂಬುದು ಹೋರಾಟಗಾರರ ಆಗ್ರಹ.












Click it and Unblock the Notifications