Government Employees: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : OPS ಜಾರಿ ಕುರಿತು ಅಪ್‌ಡೇಟ್
ಬೆಂಗಳೂರು, ಮಾರ್ಚ್14: ರಾಜ್ಯ ಸರ್ಕಾರಿ ನೌಕರರು ಹಳೇ ಪಿಂಚಣಿ ಜಾರಿ ಕುರಿತು ಇತ್ತೀಚಿಗೆ ಸರ್ಕಾರದ ವಿರುದ್ಧ ಹಲವು ಪ್ರತಿಭಟನೆ ನಡೆಸಿದ್ದು, OPS ಜಾರಿ ಕುರಿತು ಸಮಾವೇಶವನ್ನ ನಡೆಸುವ ಮೂಲಕ ಸರ್ಕಾರಿ ನೌಕರರು ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನ ಇಟ್ಟಿದ್ದರು. ಇದೀಗ ಹಳೆ ಪಿಂಚಣಿ ಜಾರಿ ಕುರಿತು ವಿಧಾನ ಪರಿಷತ್ ನಲ್ಲಿ ಚರ್ಚೆ ನಡೆಸಲಾಗಿದೆ.
ಈ ಕುರಿತು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಮಾತನಾಡಿ, ಹಳೇ ಪಿಂಚಣಿ ಜಾರಿ ತಡವಾಗಿಯಾದರೂ ಹಳೇ ಪಿಂಚಣಿ ಯೋಜನೆ ಜಾರಿ ಖಚಿತ. ಚುನಾವಣೆ ವೇಳೆ ನೀಡಿದ ಭರವಸೆಯಂತೆ ಹಳೇ ಪಿಂಚಣಿ ಯೋಜನೆ ಜಾರಿಗೆ ಬದ್ಧ. ಈ ಬಗ್ಗೆ ಅನುಮಾನವೇ ಬೇಡ. ತಡವಾದರೂ ಅದನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು. ಕಾಂಗ್ರೆಸ್‌ನ ರಾಮೋಜಿಗೌಡ ಅವರ ಪ್ರಶ್ನೆಗೆ ಸಭಾನಾಯಕ ಎನ್. ಎಸ್.ಬೋಸರಾಜು ಅವರು ಉತ್ತರಿಸುವ ವೇಳೆ ಮಧ್ಯ ಪ್ರವೇಶಿಸಿ, ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ನೀಡಿದ ಭರವಸೆಗೆ ಬದ್ಧರಾಗಿದ್ದೇವೆ. ಒಪಿಎಸ್ ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೂ ಈಗ ಮನವರಿಕೆ ಆಗಿದೆ. ಇಂದಲ್ಲ, ನಾಳೆ ಜಾರಿಗೆ ತರಲಾಗುವುದು ಎಂದರು.

ಸಭಾ ನಾಯಕ ಬೋಸರಾಜು ಒಪಿಎಸ್ ಜಾರಿ ಸಂಬಂಧ ಪರಿಶೀಲಿಸಲು ಸಮಿತಿ ರಚಿಸಲಾಗಿದೆ. ಎರಡು ಸಭೆಗಳೂ ನಡೆದಿವೆ. ಈ ಸಮಿತಿಗೆ ಡಿಫೈನ್ಸ್ ಪಿಂಚಣಿ ಯೋಜನೆ ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮದ ಅಧ್ಯಯನ ನಡೆಸಿ ವರದಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ತಿಳಿಸಿದರು.
ನಕಲಿ ಔಷಧಿ ಜಾಲ ತಡೆಗಟ್ಟಲು ಕ್ರಮ
ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಜಾಲವನ್ನು ಹತ್ತಿಕ್ಕಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಔಷಧ ಮಾರಾಟಗಾರರ ವಿರುದ್ಧ ಕಾರ್ಯಾಚರಣೆ ನಡೆಸಿ 2023-24ನೇ ಸಾಲಿನಲ್ಲಿ 10 ಮೊಕದ್ದಮೆಗಳನ್ನು ಹಾಗೂ 2024-25ನೇ ಸಾಲಿನಲ್ಲಿ 5 ಮೊಕದ್ದಮೆಗಳನ್ನು ಔಷಧ ಮತ್ತು ಕಾಂತಿವರ್ಧಕ ನಿಯಮಾವಳಿಗಳ ಅಡಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ 87 ಫಾರ್ಮಸಿಗಳನ್ನು ಸಸ್ಪೆಂಡ್ ಮಾಡಿ 3 ಪಾರ್ಮಸಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಸದಸ್ಯ ಡಾ.ಅಶ್ವಥ್ ನಾರಾಯಣ ಅವರ ಪ್ರಶ್ನೆಗೆ ಉತ್ತರಿಸುತ್ತಾ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಖಂಡಗಳಲ್ಲಿ ಈ ನಕಲಿ ಔಷಧ ತಯಾರಿಕ ಘಟಕಗಳು ಇವೆ. ನಕಲಿ ಔಷದಿ ಜಾಲವು ರಾಜ್ಯದ ಸಮಸ್ಯೆಯಲ್ಲದೇ ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು ಇದನ್ನು ಹತ್ತಿಕ್ಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೂಡ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ರಾಜ್ಯದ ಕೆಎಸ್‍ಎಂಎಸ್ ಸಿಎಲ್ ಸಂಸ್ಥೆಗೆ ಆರೋಗ್ಯ ಇಲಾಖೆ ಸಲ್ಲಿಸಿರುವ ಹಿಂದಿನ ವಾರ್ಷಿಕ Annual indent 2022-23 ಅನುಮೋದಿತವಾಗಿರುವ 732 ಔಷಧಿಗಳಲ್ಲಿ 475 ಔಷಧಿಗಳಿಗೆ ಖರೀದಿ ಆದೇಶ ನೀಡಿ ಔಷಧಗಳನ್ನು ಎಲ್ಲಾ ಔಷಧ ಉಗ್ರಾಣಗಳಿಗೆ ಸರಬರಾಜು ಮಾಡಲಾಗಿದೆ. ಉಗ್ರಾಣಕ್ಕೆ ಸರಬರಾಜುಗೊಂಡು ಆರೋಗ್ಯ ಸಂಸ್ಥೆಗಳ ಬೇಡಿಕೆಯಂತೆ ವಿತರಿಸಿ, ದಾಸ್ತಾನು ಕೊರತೆ ಆಗಿರುವ Essention-91, Desirable-40 ಸೇರಿ 131 ಔಷಧಿಗಳ ಕೊರತೆಯಾಗಿದೆ. ಜನಸಾಮಾನ್ಯರಿಗೆ ಔಷಧಿಯನ್ನು ನೀಡುವುದು ಮೂಲ ಜವಬ್ದಾರಿಯಾಗಿದ್ದು ಈಗಾಗಲೇ ಅಗತ್ಯವಿರುವ ಕಡೆಗೆ ಔಷಧಿಗಳನ್ನು ಸಬರರಾಜು ಮಾಡಲಾಗುತ್ತಿದೆ. ಕೆಲವೊಂದು ಕಡೆ ಔಷಧಗಳ ಕೊರತೆಯಾದರೆ ಬೇರೆ ಜಿಲ್ಲೆಗಳಿಂದ ಪಡೆದು ನೀಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಪ್ರಸ್ತುತ ಆರೋಗ್ಯ ಸಂಸ್ಥೆಗಳು ತುರ್ತು ಸಂದರ್ಭದಲ್ಲಿ ಅಗತ್ಯ ಪ್ರಮಾಣದಲ್ಲಿ ಔಷಧಗಳನ್ನು ತಮ್ಮ ಮಟ್ಟದಲ್ಲಿ ಸೂಕ್ತ ಪ್ರಾಧಿಕಾರದ ಅನುಮೋದನೆಯೊಂದಿಗೆ ಸ್ಥಳೀಯ ರಾಷ್ಟ್ರೀಯ ಉಚಿತ ಸೇವೆಗಳ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ಸಂಸ್ಥೆಗಳು ಕೊರತೆ ಔಷಧಿಗಳನ್ನು ಅಗತ್ಯ ಪ್ರಮಾಣದಲ್ಲಿ ಖರೀದಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆರೋಗ್ಯ ಸಂಸ್ಥೆಗಳ ಹಂತದಲ್ಲಿ ಕ್ರಮ ವಹಿಸಲಾಗುತ್ತಿದೆ. ತ್ವರಿತವಾಗಿ ಅವಶ್ಯವಿರುವ ಔಷಧಿಗಳನ್ನು ಖರೀದಿಸಲು ಕೆಎಸ್‍ಎಂಎಸ್‍ಸಿಎಲ್ ನ ಹಿಂದಿನ ಸರಬರಾಜುದಾರರಿಂದ 25% ಹೆಚ್ಚುವರಿ ಪ್ರಮಾಣದಲ್ಲಿ ಖರೀದಿಸಲು ಕ್ರಮ ವಹಿಸಲಾಗುತ್ತಿದೆ ಹಾಗೂ 23 ಔಷಧಿಗಳನ್ನು 4G Excemption ಮೂಲಕ KAPL (ಕರ್ನಾಟಕ ಆ್ಯಂಟಿ ಬಯೋಟಿಕ್ಸ್ ಅಂಡ್ ಫಾರ್ಮ್ ಸ್ಯೂಟಿಕಲ್ಸ್ ಲಿಮಿಟೆಡ್) ನಿಂದ ಒಟ್ಟು 9.50ಕೋಟಿ ಮೌಲ್ಯದ ಔಷಧಿಗಳನ್ನು ಖರೀದಿಸಲು ಪ್ರಸ್ತಾವನೆ ಪರಿಶೀಲನೆಯಲ್ಲಿರುತ್ತದೆ.
ಕೆಲವೊಂದು ಔಷಧಿಗಳ ಕೊರತೆಗೆ ಕಾರಣ ಟೆಂಡರುಗಳಲ್ಲಿ ಯಾರೂ ಭಾಗವಹಿಸದೇ ಇರುವುದು. ಈ ಔಷಧಿಗಳ ಮೌಲ್ಯ ಮತ್ತು ಪ್ರಮಾಣ ಕಡಿಮೆ ಇರುವುದರಿಂದ ಹಲವಾರು ಬಾರಿ ಟೆಂಡರ್ ಆಹ್ವಾನಿಸದರೂ ಯಾರೂ ಸ್ಪಂದಿಸಿಲ್ಲ. ಸರ್ಕಾರ ನಿಯಮಾನುಸಾರ ಔಷಧಿಗಳ ಖರೀದಿ ಮಾಡುತ್ತಿದೆ ಅಲ್ಲದೇ ಔಷಧಿ ಸರಬರಾಜು/ಖರೀದಿ ಪ್ರಕ್ರಿಯೆಯ ಟೆಂಡರ್‍ನ ಷರತ್ತುಗಳನ್ನು ಸರಳೀಕರಣ ಮಾಡಿ ಔಷಧಿಗಳನ್ನು ಸರಬರಾಜು ಮಾಡಲು ಹೆಚ್ಚಿನ ಬಿಡ್ ದಾರರು ಭಾಗವಹಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications