ಕಾಂಗ್ರೆಸ್ಸಿಗೆ 'ಸಿಎಂ' ಸ್ಥಾನ, ದೇವೇಗೌಡರಿಂದ ಹೊಸ ಬಾಂಬ್!
Recommended Video

ಬೆಂಗಳೂರು, ಮೇ 29: 'ಕಾಂಗ್ರೆಸ್ಸಿನ ಮುಲಾಜಿನಲ್ಲಿದ್ದೇನೆ' ಎಂದು ಮೈತ್ರಿ ಸರ್ಕಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಹೊಸ ಬಾಂಬ್ ಹಾಕಿದ್ದಾರೆ.
ಮಂತ್ರಿ ಪದವಿ, ಮುಖ್ಯಮಂತ್ರಿ ಪದವಿಗಾಗಿ ಜೆಡಿಎಸ್ ಯಾವುದೇ ಬೇಡಿಕೆ ಇಟ್ಟಿಲ್ಲ, ಸಿಎಂ ಸ್ಥಾನವನ್ನು ಕೂಡಾ ಕುಮಾರಸ್ವಾಮಿ ಅವರು ಕಾಂಗ್ರೆಸ್ಸಿಗೆ ಬಿಟ್ಟುಕೊಡಲು ಸಿದ್ಧರಿದ್ದರು. ಆದರೆ,ನೀವೇ ಮುಖ್ಯಮಂತ್ರಿಯಾಗಿ ಎಂದು ಕಾಂಗ್ರೆಸ್ಸಿನ ಹೈಕಮಾಂಡ್ ಅವರೇ ದುಂಬಾಲು ಬಿದ್ದರು.
ಫಲಿತಾಂಶ ಬಂದ ಮೇಲೆ ಯಾರು ಮೈತ್ರಿಗಾಗಿ ಮೊದಲು ಕೈ ಚಾಚಿದ್ದು ಎಂಬುದು ಲೋಕಕ್ಕೆ ಗೊತ್ತಿದೆ. ಅಧಿಕಾರಕ್ಕೆ ಆಸೆ ಪಟ್ಟು ಸರ್ಕಾರ ರಚನೆಗೆ ನಾವು ಮುಂದಾಗಿಲ್ಲ. ಮೈತ್ರಿ ಬಗ್ಗೆ ನಮ್ಮ ಜತೆ ಮಾತುಕತೆಗೆ ಮುಂದಾದಾಗ, ಕಾಂಗ್ರೆಸ್ಸಿನಿಂದ ಯಾರಾದರೂ ಸಿಎಂ ಆಗಲಿ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದು ದೇವೇಗೌಡ ಅವರು ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಇರಲಿ, ನಾವು ಬೆಂಬಲ ಸೂಚಿಸುತ್ತೇವೆ. ಈ ಬಗ್ಗೆ ನಮ್ಮ ಹೈಕಮಾಂಡ್ ಸಮ್ಮತವಿದೆ ಎಂದು ಗುಲಾಂ ನಬಿ ಅಜಾದ್ ಅವರು ಹೇಳಿದರು.
ರೈತರ ಸಾಲಮನ್ನಾ ಮಾಡಲು ಸಾಧ್ಯವಾಗದಿದ್ದರೆ, ಒಂದು ವಾರದಲ್ಲಿ ರಾಜೀನಾಮೆ ನೀಡುವುದಾಗಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಬಗ್ಗೆ ದೇವೇಗೌಡರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.












Click it and Unblock the Notifications