Get Updates
Get notified of breaking news, exclusive insights, and must-see stories!

Prajwal Revanna: ರಾಜ್ಯದಲ್ಲಿ ಮೈತ್ರಿಗೆ ಮುಳುವಾಗುತ್ತಾ ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ?

ಬೆಂಗಳೂರು, ಮೇ 04: ರಾಜಕೀಯ ಲೆಕ್ಕಾಚಾರಗಳನ್ನೆಲ್ಲ ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣರ ಅಶ್ಲೀಲ ಪೆನ್ ಡ್ರೈವ್ ಪ್ರಕರಣ ಬುಡಮೇಲು ಮಾಡಿದೆ. ಇದು ಇಷ್ಟು ವರ್ಷಗಳ ಸುಧೀರ್ಘ ರಾಜಕಾರಣ ಮಾಡಿದ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಇಡೀ ಕುಟುಂಬಕ್ಕೆ ಕಪ್ಪು ಚುಕ್ಕೆಯಾಗಿ ಉಳಿದು ಹೋಗುವುದರೊಂದಿಗೆ ಮುಂದಿನ ದಿನಗಳಲ್ಲಿ ಹಾಸನದ ರಾಜಕೀಯ ಅಧಿಪತ್ಯ ಗೌಡರ ಕುಟುಂಬದಿಂದ ಕೈತಪ್ಪಿ ಹೋಗುವ ಎಲ್ಲ ಲಕ್ಷಣಗಳು ಕಂಡು ಬರಲಾರಂಭಿಸಿವೆ.

ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯ ಪ್ರಕರಣ ಕೇವಲ ದೇವೇಗೌಡ ಕುಟುಂಬ ಮತ್ತು ಜೆಡಿಎಸ್ ಪಕ್ಷಕ್ಕೆ ಮಾತ್ರ ಮುಜುಗರ ತರದೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯೂ ಇದರ ಫಲವುಣ್ಣ ಬೇಕಾದ ಪರಿಸ್ಥಿತಿಗೆ ಬಂದು ನಿಂತಿದೆ. ಹೀಗಾಗಿಯೇ ಕಮಲ ನಾಯಕರು ಪ್ರಕರಣವನ್ನು ಸಮರ್ಥಿಸಿಕೊಳ್ಳಲಾಗದೆ, ವಿರೋಧಿಸಲೂ ಸಾಧ್ಯವಾಗದೆ ವಿಲವಿಲ ಒದ್ದಾಡುವಂತಾಗಿದೆ.

Obscene Viral Video Case Will The Prajwal Revanna Case Spoil The BJP-JDS Alliance

ರಾಜ್ಯದಲ್ಲಿ ಬಿಜೆಪಿಯನ್ನು ವಿರೋಧಿಸುತ್ತಲೇ ಅವರೊಂದಿಗೆ ಅಧಿಕಾರ ಹಂಚಿಕೊಂಡು ನಂತರದ ಬೆಳವಣಿಗೆಯಲ್ಲಿ ಅವರಿಂದ ದೂರವಾಗಿ ಅವರ ವಿರುದ್ಧವೇ ರಾಜಕೀಯ ಮಾಡಿಕೊಂಡು ಬಂದಿದ್ದ ಎಚ್.ಡಿ.ದೇವೇಗೌಡರ ಕುಟುಂಬದ ಮೇಲೆ ಕುಟುಂಬ ರಾಜಕಾರಣದ ಆರೋಪ ದೊಡ್ಡಮಟ್ಟದಲ್ಲಿಯೇ ಇತ್ತು. ಪುತ್ರರಾದ ಹೆಚ್.ಡಿ.ರೇವಣ್ಣ ಅವರಂತು ತಮ್ಮ ಪತ್ನಿ ಮತ್ತು ಮಕ್ಕಳನ್ನು ರಾಜಕೀಯಕ್ಕೆ ತರುವುದರ ಮೂಲಕ ಇಡೀ ಹಾಸನದಲ್ಲಿ ರಾಜಕೀಯವಾಗಿ ಪ್ರಭಾವಿಗಳಾಗಿ ಬೆಳೆದು ನಿಂತಿದ್ದರು.

ಹಾಸನದ ಜನ ಪ್ರಜ್ವಲ್ ಕೈಹಿಡಿದಿದ್ದರು

ಮಕ್ಕಳು ಮಾತ್ರವಲ್ಲದೆ ಮೊಮ್ಮಕ್ಕಳನ್ನು ರಾಜಕೀಯಕ್ಕೆ ತರಬೇಕೆಂಬ ಅಭಿಲಾಷೆಯಿಂದ ಕಳೆದ ಬಾರಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡ ಸಂದರ್ಭ ದೇವೇಗೌಡರು ಮೊಮ್ಮಗ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದರು. ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಮೇಲೆ ತುಸು ಜಾಸ್ತಿ ಒಲವು ಹೊಂದಿದ ಕಾರಣದಿಂದಾಗಿ ದೇವೇಗೌಡರು ವಂಶದ ಕುಡಿ ದೆಹಲಿ ರಾಜಕಾರಣಕ್ಕೆ ತೆರಳಲೇ ಬೇಕೆಂಬ ಕಾರಣಕ್ಕೆ ತಾವು ಸ್ಪರ್ಧಿಸಿ ಗೆಲ್ಲುತ್ತಿದ್ದ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟು ತುಮಕೂರಿನತ್ತ ಮುಖ ಮಾಡಿದ್ದರು.

Obscene Viral Video Case Will The Prajwal Revanna Case Spoil The BJP-JDS Alliance

ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿದ್ದ ಕಾರಣದಿಂದಾಗಿ ಬಿಜೆಪಿಯನ್ನು ಜೆಡಿಎಸ್ ವಿರೋಧಿಸಿಕೊಂಡು ಬಂದಿತ್ತು. ಜತೆಗೆ ಸ್ವತಃ ದೇವೇಗೌಡರೇ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕೆ ಮಾಡಲಾರಂಭಿಸಿದ್ದರು. ಇಷ್ಟೇ ಅಲ್ಲದೆ ಆರ್ ಎಸ್ ಎಸ್ ಸೇರಿದಂತೆ ಹಿಂದೂ ಸಂಘಟನೆಗಳನ್ನು ರಾಜಕೀಯವಾಗಿ ನಿಂದಿಸಲಾರಂಭಿಸಿದ್ದರು. ಇದೆಲ್ಲದರ ಪರಿಣಾಮ ಬಿಜೆಪಿ ರಾಜ್ಯದಲ್ಲಿ ಅತಿ ಹೆಚ್ಚು 25 ಸ್ಥಾನಗಳಲ್ಲಿ ಗೆದ್ದು ಬಂದರೆ ದೇವೇಗೌಡರು ತುಮಕೂರಿನಲ್ಲಿ ಸೋಲು ಕಂಡಿದ್ದರು. ಆದರೆ ದೇವೇಗೌಡರ ವಂಶದ ಕುಡಿ ಎಂಬ ಕಾರಣಕ್ಕೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಕಂಡಿದ್ದರು.

ತಲೆತಗ್ಗಿಸುವಂತೆ ಮಾಡಿದ ಪ್ರಜ್ವಲ್ ರೇವಣ್ಣ

ದೇವೇಗೌಡರ ರಾಜಕೀಯದ ಬದುಕಿನಲ್ಲಿ ಹಾಸನ ಕ್ಷೇತ್ರದ ಜನ ಅವರ ಕೈಬಿಟ್ಟಿರಲಿಲ್ಲ. ಇಂತಹ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣನ ಕೈಗೆ ಕಳೆದ ಲೋಕಸಭಾ ಚುನಾವಣೆ ವೇಳೆ ನೀಡಿದ್ದರು. ಮುಂದೊಂದು ದಿನ ದೆಹಲಿ ಮಟ್ಟದಲ್ಲಿ ತನ್ನ ಹೆಸರು ಮೊಮ್ಮಗ ಉಳಿಸುತ್ತಾನೆ ಎಂಬ ಭರವಸೆಯಲ್ಲಿದ್ದರು. ಜನ ಕೂಡ ಪ್ರಜ್ವಲ್ ರೇವಣ್ಣನಿಗೆ ರಾಜಕೀಯ ಜೀವನದಲ್ಲಿ ಭವಿಷ್ಯವಿದೆ. ತಾತನ ಹೆಸರನ್ನು ದೆಹಲಿ ಮಟ್ಟದಲ್ಲಿ ಉಳಿಸುತ್ತಾನೆ ಎಂಬಿತ್ಯಾದಿ ನಿರೀಕ್ಷೆ ಇಟ್ಟುಕೊಂಡಿದ್ದರು.

Obscene Viral Video Case Will The Prajwal Revanna Case Spoil The BJP-JDS Alliance

ಪ್ರಜ್ವಲ್ ರೇವಣ್ಣ ಜನನಾಯಕನಾಗಿ ಹಾಸನದಲ್ಲಿ ಬೆಳೆಯುತ್ತಾನೆ. ದೇವೇಗೌಡರ ಹೆಸರನ್ನು ಉಳಿಸುತ್ತಾನೆ ಎಂದು ಜನ ಮಾತ್ರವಲ್ಲ ಸ್ವತಃ ತಾತ ದೇವೇಗೌಡರೇ ನಂಬಿಕೆ ಹೊಂದಿದ್ದರು. ಆದರೆ ಪ್ರಜ್ವಲ್ ರೇವಣ್ಣ ಮಾಡಿದ್ದೇ ಬೇರೆ, ಈತನ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಜತೆಗೆ ಪ್ರಜ್ವಲ್ ರೇವಣ್ಣ ಜತೆಗೆ ತಂದೆ ಹೆಚ್.ಡಿ.ರೇವಣ್ಣನ ಮೇಲೆಯೂ ದೌರ್ಜನ್ಯದ ಪ್ರಕರಣ ದಾಖಲಾಗಿರುವುದು ಇನ್ನಷ್ಟು ಕಠಿಣ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಇದು ಇಡೀ ಕುಟುಂಬ ಸಮಾಜದ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಪ್ರಕರಣ ನಡೆದಿದೆ ಎಂಬ ಕಾರಣಕ್ಕಾಗಿಯೇ ಹೆಚ್ಚೆಚ್ಚು ಪ್ರಚಾರ ಮತ್ತು ಆಕ್ರೋಶವೂ ವ್ಯಕ್ತವಾಗುತ್ತಿದೆ.

ಇದು ಕಾಂಗ್ರೆಸ್‌ಗೆ ಸಿಕ್ಕ ಬ್ರಹ್ಮಾಸ್ತ್ರ

ತಮ್ಮ ಬದುಕಿನುದ್ದಕ್ಕೂ ಶೀಲ ಚಾರಿತ್ರ್ಯದ ವಿಚಾರದಲ್ಲಿ ಯಾವತ್ತೂ ಹೆಸರು ಕೆಡಿಸಿಕೊಳ್ಳದೆ ಸುಧೀರ್ಘ ರಾಜಕಾರಣ ಮಾಡಿಕೊಂಡು ಬಂದಿದ್ದ ಹೆಚ್.ಡಿ.ದೇವೇಗೌಡರಿಗೆ ಇಳಿ ವಯಸ್ಸಿನಲ್ಲಿ ಇಂತಹದೊಂದು ಅಸಹ್ಯಕಾರಿ ಸುದ್ದಿಯನ್ನು ತನ್ನ ಮೊಮ್ಮಗನಿಂದ ಕೇಳಬೇಕಾಯಿತಲ್ಲ ಎಂಬ ಕೊರಗು ಉಳಿಯುವಂತೆ ಮಾಡಿದೆ. ಈಗ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿರುವ ಆಕ್ರೋಶಗಳು ಒಂದೆಡೆಯಾದರೆ, ರಾಜಕೀಯ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಇದನ್ನು ಬಿಜೆಪಿ ಮೇಲೆ ಬ್ರಹ್ಮಾಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

ಹಾಗೆನೋಡಿದರೆ ರಾಜ್ಯಮಟ್ಟದಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಬಿಜೆಪಿ ನಾಯಕರು ಹುಮ್ಮಸ್ಸು ತೋರಿರಲಿಲ್ಲ. ಅದರಲ್ಲೂ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂಗೌಡರಂತು ಬಹಿರಂಗವಾಗಿಯೇ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದ್ದರಿಂದ ರಾಜ್ಯ ನಾಯಕರು ಮರು ಮಾತನಾಡದೆ ಒಪ್ಪಿಕೊಳ್ಳುವಂತಾಗಿದೆ. ಈಗ ಕಾಂಗ್ರೆಸ್ ನಾಯಕರು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದರೂ ಮಾತನಾಡಲಾಗದ ಪರಿಸ್ಥಿಾತಿಯಲ್ಲಿ ಬಿಜೆಪಿ ನಾಯಕರಿದ್ದಾರೆ.

ಮೈತ್ರಿಗೆ ಮುಳುವಾಗುತ್ತಾ ಪೆನ್ ಡ್ರೈವ್

ರಾಜ್ಯದಲ್ಲಿ ಲೋಕಸಭೆಯ ಎರಡನೇ ಹಂತದ ಚುನಾವಣೆಯು ಮೇ.7ರಂದು ನಡೆಯುತ್ತಿದೆ. ಹೀಗಾಗಿ ಕಾಂಗ್ರೆಸ್ ಈ ವಿಚಾರವನ್ನೇ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದು, ಆ ಮೂಲಕ ಬಿಜೆಪಿಯನ್ನು ಹಣಿಯಲಾರಂಭಿಸಿದೆ. ಮತದಾರರು ಯಾವ ರೀತಿಯಿಂದ ನೋಡುತ್ತಾರೆ ಎಂಬುದು ಬಹುಮುಖ್ಯವಾಗಿದೆ. ಒಂದು ವೇಳೆ ಬಿಜೆಪಿಗೆ ಹಿನ್ನಡೆ ಆದರೆ ಅದಕ್ಕೆ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕಾರಣವಾದರೂ ಅಚ್ಚರಿಯಿಲ್ಲ. ಮುಂದಿನ ಬೆಳವಣಿಗೆ ಏನೆಲ್ಲ ಆಗಲಿದೆ ಮತ್ತು ಅದು ರಾಜಕೀಯದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+