Prajwal Revanna Case: ದಾರಿ ತಪ್ಪಿದ ನಾಯಕರಿಗೆ ಪಾಠವಾಗುತ್ತಾ ಪ್ರಜ್ವಲ್ ರೇವಣ್ಣ ಪ್ರಕರಣ?
ಬೆಂಗಳೂರು, ಮೇ 02: ರಾಜ್ಯದಲ್ಲಿ ಲೋಕಸಭೆಯ ಎರಡನೇ ಹಂತದ ಚುನಾವಣೆಗೆ ಕೆಲವೇ ಕೆಲವು ದಿನಗಳಷ್ಟೆ ಬಾಕಿಯಿದೆ. ಆದರೆ ಈ ಚುನಾವಣೆಯ ದಿಕ್ಕು ಬದಲಿಸುವ ಸಂಸದ ಪ್ರಜ್ವಲ್ ರೇವಣ್ಣರ ಪೆನ್ ಡ್ರೈವ್ ಪ್ರಕರಣ ಮುನ್ನಲೆಗೆ ಬಂದಿರುವುದರಿಂದ ರಾಜಕೀಯವಾಗಿ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಮುಂದಿನ ದಿನಗಳಲ್ಲಿ ರಾಜಕೀಯ ದ್ವೇಷಕ್ಕೆ ತಿರುಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದ್ದು, ಹೀಗೆಯೇ ಮುಂದುವರೆದರೆ ಇಂತಹ ಕೃತ್ಯಗಳಲ್ಲಿ ತೊಡಗಿದ ಇನ್ನಷ್ಟು ಮಂದಿಯೂ ಸಮಾಜದ ಮುಂದೆ ಬೆತ್ತಲೆಯಾಗುವುದರಲ್ಲಿ ಎರಡು ಮಾತಿಲ್ಲ.
ಸದ್ಯದ ಮಟ್ಟಿಗೆ ರಾಜಕೀಯದ ಅಸಹ್ಯತೆ ರಾಜ್ಯ ಮಾತ್ರವಲ್ಲದೆ, ರಾಷ್ಟ್ರದಾದ್ಯಂತ ರಾಚಲಾರಂಭಿಸಿದೆ. ಇದು ರಾಜಕೀಯ ವ್ಯಕ್ತಿಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ರಾಜಕೀಯ ನಾಯಕರು ರಾಜಕೀಯಕ್ಕೆ ಬಳಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಕೆಸರು ಎರಚಾಟದ ನಡುವೆ ಇನ್ನೆಷ್ಟು ಮಂದಿ ಮುಂದಿನ ದಿನಗಳಲ್ಲಿ ಬೆತ್ತಲೆಯಾಗಲಿದ್ದಾರೋ? ಗೊತ್ತಿಲ್ಲ. ಇಷ್ಟಕ್ಕೂ ಈ ಪ್ರಕರಣ ಇಲ್ಲಿಗೆ ಮುಗಿದು ಹೋಗಿ ಬಿಡುತ್ತದೆ ಎನ್ನುವುದು ಕಷ್ಟವೇ.

ಈ ಪ್ರಕರಣ ಪ್ರಜ್ವಲ್ ರೇವಣ್ಣ ಬಂಧನದೊಂದಿಗೆ ಮುಕ್ತಾಯವಾಗಿ ಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಒಂದೆಡೆ ಎಸ್ ಐಟಿ ತನಿಖೆ ನಡೆಯುತ್ತಿರುವಾಗಲೇ ರಾಜಕೀಯ ನಾಯಕರು ತಮಗೆ ಅನುಕೂಲವಾಗುವಂತಹ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆ ಮುಂದಿರುವ ಕಾರಣದಿಂದ ಈ ಪ್ರಕರಣವೇ ವಿರೋಧಿಗಳಿಗೆ ಅದರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ, ಜೆಡಿಎಸ್ ಮತ್ತು ಬಿಜೆಪಿಯನ್ನು ಕಟ್ಟಿಹಾಕಲು, ದೇಶದಲ್ಲಿ ಎನ್ ಡಿಎಯನ್ನು ತುಳಿಯಲು ಇಂಡಿಯಾಗೆ ಪ್ರಮುಖ ಅಸ್ತ್ರವಾಗುತ್ತಿದೆ.
ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತು
ರಾಷ್ಟ್ರಮಟ್ಟದಲ್ಲಿ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರಿಗೆ ಮೇಲಿಂದ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕವಾದ್ರಾ ಸೇರಿದಂತೆ ಹಲವು ನಾಯಕರು ಪ್ರಶ್ನೆಗಳ ಸುರಿಮಳೆಗೈಯ್ಯುತ್ತಿದ್ದಾರೆ. ಅಷ್ಟೇ ಅಲ್ಲದೆ ಇದನ್ನೇ ಕಾಂಗ್ರೆಸ್ ಪ್ರಮುಖ ಅಸ್ತ್ರ ಮಾಡಿಕೊಂಡು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಇದೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮೇಲ್ನೋಟಕ್ಕೆ ಪ್ರಜ್ವಲ್ ರೇವಣ್ಣ ಪರ ವಕಾಲತ್ತು ವಹಿಸಿಕೊಳ್ಳದೆ ಹೋದರೂ ಬಿಜೆಪಿ ಮೈತ್ರಿ ಧರ್ಮಪಾಲನೆ ಮಾಡಲೇ ಬೇಕಾಗಿರುವುದರಿಂದ ಜೆಡಿಎಸ್ ನಾಯಕರ ಪರವಾಗಿ ಮೃಧುಧೋರಣೆ ತಾಳಲೇ ಬೇಕಾಗಿದೆ. ಜತೆ ಜತೆಗೆ ಕಾಂಗ್ರೆಸ್ ನಾಯಕರ ವಾಗ್ದಾಳಿಗಳನ್ನು ಎದುರಿಸಬೇಕಾಗಿದೆ. ಇಲ್ಲಿ ಪಕ್ಷದ ವಿಚಾರಗಳು ಮುಖ್ಯವಾಗಲ್ಲ. ಒಬ್ಬ ಸಂಸದನಾಗಿ ಜನಪ್ರತಿನಿಧಿಯಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ರಕ್ಷಣೆಯಾಗಿ ನಿಲ್ಲಬೇಕಾದ ವ್ಯಕ್ತಿ ಹೆಣ್ಣು ಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದೇ ಕ್ಷಮಿಸಲಾರದ ತಪ್ಪು.

ಕಾಮಾಂಧರಿಗೆ ತಕ್ಕ ಶಾಸ್ತಿಯಾಗಬೇಕು
ಇಲ್ಲಿ ಅಸಹಾಯಕ ಹೆಣ್ಣು ಮಕ್ಕಳನ್ನು ಬಳಸಿಕೊಂಡಿದ್ದಾನೆ ಎನ್ನುವುದಾದರೆ ಆತ ಒಬ್ಬ ಸಮಾಜ ಸೇವಕನಾಗಲು ನಾಲಾಯಕ್. ಇಂತಹವರಿಗೆ ಕಾನೂನು ಯಾವ ರೀತಿಯ ಶಿಕ್ಷೆ ನೀಡುತ್ತದೆಯೋ ಅದು ಬೇರೆ ವಿಚಾರ. ಆದರೆ ಪ್ರಜಾಪ್ರಭುತ್ವದಲ್ಲಿ ಜನ ಇಂತಹದಕ್ಕೆ ಅವಕಾಶ ಕೊಡಬಾರದು. ಅದನ್ನು ಚುನಾವಣೆಯಲ್ಲಿ ತೋರಿಸಬೇಕಾಗುತ್ತದೆ. ಆದರೆ ಇಲ್ಲಿ ಚುನಾವಣೆ ನಡೆದು ಹೋಗಿದೆ. ಮುಂದೇನು ಎನ್ನುವುದಕ್ಕೆ ಇನ್ನೂ ಕಾಲವಿದೆ. ಇದು ಇಲ್ಲಿಗೆ ಮುಗಿದು ಹೋಗಬೇಕಾಗಿದೆ. ಮುಂದೆ ಇಂತಹ ಕೃತ್ಯಕ್ಕೆ ಯಾರೂ ಕೈಹಾಕಬಾರದು ಅಂತಹ ಪಾಠವೊಂದು ಈ ಪ್ರಕರಣದಲ್ಲಿ ಆಗಬೇಕಾಗಿದೆ.
ಇಲ್ಲಿ ಪ್ರಜ್ವಲ್ ರೇವಣ್ಣನಂತವರು ಅದರಲ್ಲೂ ಹೆಣ್ಣು ಮಕ್ಕಳಿಗೆ ಗೌರವ ನೀಡದೆ ಅವರ ಅಸಹಾಯಕತೆಯನ್ನು ತಮ್ಮ ತೃಷೆಗೆ ಬಳಸಿಕೊಳ್ಳುವ ರಾಜಕಾರಣಿಗಳಿಗೆ ತಕ್ಕಶಾಸ್ತಿಯಾಗಬೇಕಾಗಿದೆ. ಇಂತಹ ಪ್ರಕರಣದಲ್ಲಿ ಈಗಾಗಲೇ ಬಹಳಷ್ಟು ಮಂದಿ ಸಿಲುಕಿದ್ದು ಅವರೆಲ್ಲರೂ ಈಗಾಗಲೇ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ನಾಳೆ ಪ್ರಜ್ವಲ್ ರೇವಣ್ಣನೂ ಹೊರತಾಗಿಲ್ಲ. ಆದರೆ ಈ ಕಳಂಕ ಕೇವಲ ಪ್ರಜ್ವಲ್ ರೇವಣ್ಣಗೆ ಮಾತ್ರ ಅಂಟಿಕೊಂಡಿಲ್ಲ. ಅದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಇಷ್ಟು ವರ್ಷಗಳ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆಯಾಗಿದೆ.
ಇನ್ನೆಷ್ಟು ನಾಯಕರ ಕರ್ಮಕಾಂಡ ಬಯಲಾಗುತ್ತೋ?
ತಮ್ಮ ರಾಜಕೀಯ ಬದುಕಿನುದ್ದಕ್ಕೂ ಎಲ್ಲಿಯೂ ತಮ್ಮ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಾಗದಂತೆ ಬದುಕಿದ ದೇವೇಗೌಡರು ಮೊಮ್ಮಗನ ರಾಜಕೀಯ ಭವಿಷ್ಯಕ್ಕಾಗಿ 2019ರಲ್ಲಿ ಹಾಸನ ಕ್ಷೇತ್ರವನ್ನು ತೊರೆದು ತುಮಕೂರಿನಲ್ಲಿ ಸ್ಪರ್ಧಿಸಿ ಸೋಲು ಕಂಡರು. ಆದರೆ ಹಾಸನದಲ್ಲಿ ದೇವೇಗೌಡರ ನಾಮಬಲದಿಂದ ಗೆದ್ದ ಪ್ರಜ್ವಲ್ ರೇವಣ್ಣ ತನ್ನ ತಾತನಿಗೆ ಇಂತಹದೊಂದು ಖ್ಯಾತಿಯನ್ನು ತಂದುಕೊಡುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.
ಕಷ್ಟವೇ ಗೊತ್ತಿಲ್ಲದೆ, ತಂದೆ, ತಾತನ ರಾಜಕೀಯ ಹಿನ್ನಲೆಯಲ್ಲಿ ಬಂದವರಿಗೆ ಬಡವರ ಕಷ್ಟವೂ ಅರ್ಥವಾಗುವುದಿಲ್ಲ. ಜೊತೆಗೆ ಎಲ್ಲವೂ ಭೋಗದ ವಸ್ತುವಾಗಿಯೇ ಕಾಣಿಸುತ್ತದೆ. ಕಾನೂನಿನ ಕ್ರಮಗಳೆಲ್ಲವೂ ಒಂದೆಡೆ ಅದರ ಪಾಡಿಗೆ ನಡೆಯುತ್ತದೆ. ಆದರೆ ಅದರಾಚೆಗೂ ರಾಜಕೀಯ ಎನ್ನುವುದು ಇದೆಯಲ್ಲ ಇದೊಂದು ಸ್ವಾರ್ಥವಾಗಿದ್ದು, ಈ ಸ್ವಾರ್ಥಕ್ಕಾಗಿ ಯಾರು? ಯಾವಾಗ? ಏನು ಮಾಡಬೇಕಾದರೂ ತಯಾರಿರುತ್ತಾರೆ. ಹೀಗಾಗಿ ಇದು ಕೇವಲ ಪ್ರಜ್ವಲ್ ರೇವಣ್ಣರ ಕಾಮಕಾಂಡದಲ್ಲಿ ಅಂತ್ಯವಾಗುತ್ತಾ? ಅಥವಾ ರಾಜಕೀಯ ದ್ವೇಷದಲ್ಲಿ ಇನ್ನೆಷ್ಟು ನಾಯಕರ ಕರ್ಮಕಾಂಡ ಬಯಲಾಗುತ್ತಾ? ಕಾದು ನೋಡೋಣ.
-
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications