ಕರ್ನಾಟಕದಿಂದ ಶ್ರೀಶೈಲ ಜಾತ್ರಾ ಮಹೋತ್ಸವಕ್ಕೆ ವಿಶೇಷ ಬಸ್ ಕಾರ್ಯಾಚರಣೆ: ನಿಲ್ದಾಣಗಳು, ವೇಳಾಪಟ್ಟಿ ವಿವರ

NWKRTC Special Bus: ಚಂದ್ರಮಾನ ಯುಗಾದಿಗೆ ಕೆಲವೇ ದಿನಗಳು ಬಾಕಿ ಇದೆ. ಹಿಂದೂಗಳ ಪಾಲಿಗೆ ಹೊಸ ವರ್ಷದ ಆರಂಭದ ಹಬ್ಬವಾಗಿರುವ ಈ ಯುಗಾದಿ ನಿಮಿತ್ಯ ಸುಕ್ಷೇತ್ರ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಜರುಗಲಿದೆ. ಆಂಧ್ರ ಪ್ರದೇಶದ ಈ ಪವಿತ್ರ ಕ್ಷೇತ್ರಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವತಿಯಿಂದ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವಾಯವ್ಯ ಸಾರಿಗೆ ವಿಭಾದಿಂದ ಇದೇ ಮಾರ್ಚ್ 22ರಿಂದ ಏಪ್ರಿಲ್ 01ರವರೆಗೆ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ದೇಗುಲಕ್ಕೆ ವಿಶೇಷ್‌ ಬಸ್‌ಗಳ ಸೇವೆ ಒದಗಿಸಲಾಗುತ್ತದೆ. ಕರ್ನಾಟಕ ಭಾಗದ ಭಕ್ತರು ಸೇರಿದಂತೆ ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಲಿದೆ ಎಂದು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

NWKRTC to Operate Special Buses for Srisailam Jatra Mahotsava from Chikkodi Karnataka

ಈ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಚಿಕ್ಕೋಡಿ ವಿಭಾಗ ಬಸ್‌ಗಳು ಚಿಕ್ಕೋಡಿ, ಅಥಣಿ, ರಾಯಬಾಗ, ನಿಪ್ಪಾಣಿ, ಸಂಕೇಶ್ವರ, ಹುಕ್ಕೇರಿ, ಹಾಗೂ ಗೋಕಾಕ ಕೇಂದ್ರ ಬಸ್ ನಿಲ್ದಾಣಗಳಿಂದ ಸಂಚಾರ ಆರಂಭಿಸುತ್ತವೆ. ಶ್ರೀಶೈಲ ಮಲ್ಲಿಕಾರ್ಜುನ ಭಕ್ತರು ವೇಳಾಪಟ್ಟಿ, ನಿಲ್ದಾಣ ನೋಡಿಕೊಂಡು ಬಸ್ ಸಂಚಾರ ಮಾಡಬಹುದಾಗಿದೆ.

ಭಕ್ತಾಧಿಗಳ ಅನುಕೂಲಕ್ಕಾಗಿ ಶ್ರೀಶೈಲಕ್ಕೆ ವಿಶೇಷ ಬಸ್ಸಿನ ಸೌಕರ್ಯ ಕಲ್ಪಿಸಲಾಗುವುದು. ಹಾಗೂ ಭಕ್ತಾಧಿಗಳ ವಿನಂತಿ ಮೇರೆಗೆ ಒಂದೇ ಗ್ರಾಮದಿಂದ 50 ಜನ ಪ್ರಯಾಣಿಸಲು ಬಯಸಿದಲ್ಲಿ, ಅಂತಹ ಗ್ರಾಮಗಳಿಂದ ನೇರವಾಗಿ ಸುಕ್ಷೇತ್ರ ಶ್ರೀಶೈಲಕ್ಕೆ ವಿಶೇಷ ಬಸ್ಸಿನ ವ್ಯವಸ್ಥೆಯನ್ನು ಸಹ ಮಾಡಲಾಗುವುದು. ಭಕ್ತಾಧಿಗಳು ಇದರ ಸದುಪಯೋಗ ಪಡೆದುಕೊಳ್ಳಲು ವಿಭಾಗಾಧಿಕಾರಿಗಳು ಕೋರಿದ್ದಾರೆ.

ಶ್ರೀಕ್ಷೇತ್ರದಲ್ಲಿ ರಥೋತ್ಸವದ ನಂತರ ಬಸ್ಸುಗಳನ್ನು ಮರು ಪ್ರಯಾಣಕ್ಕೆ ಬಿಡಲಾಗುವುದು. ಯಾತ್ರಿಕರು ಸುಕ್ಷೇತ್ರ ಶ್ರೀಶೈಲದಲ್ಲಿ ಲಭ್ಯವಿರುವ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ವಿಶೇಷ ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಘಟಕ ವ್ಯವಸ್ಥಾಪಕರಾದ ಚಿಕ್ಕೋಡಿ 7760991875 ಅಥಣಿ 7760991876, ಸಂಕೇಶ್ವರ 7760991877 ಮತ್ತು ಹುಕ್ಕೇರಿ

7760998007, ಗೋಕಾಕ 7760991878, ನಿಪ್ಪಾಣಿ 7760991878 ಹಾಗೂ ರಾಯಭಾಗ 7760991880 ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತಿ ವರ್ಷವು ಯುಗಾದಿ ವೇಳೆ ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ಕಡೆಗಳಿಂದ ಸಾವಿರಾರು ಭಕ್ತರು ಶ್ರೀಶೈಲದ ಜಾತ್ರೆಗೆ ತೆರಳುತ್ತಾರೆ. ಫೂಜಾ ವಿಧಿ ವಿಧಾನ ನಡೆಸುತ್ತಾರೆ. ದೇವರಲ್ಲಿ ಪ್ರಾರ್ಥಿಸಿ, ದರ್ಶನ ಪಡೆದು ಪುನೀತರಾಗುತ್ತಾರೆ. ಅಲ್ಲಿಂದ ಹೊಸ ವರ್ಷ ಆರಂಭಿಸುತ್ತಾರೆ. ಇವರಿಗೆಲ್ಲ ಅನುಕೂಲವಾಗಲಿ, ಹತ್ತುವುದು ಇಳಿಯು ತಾಪತ್ರಯ ತಪ್ಪಿಸಲು ಸಾರಿಗೆ ಇಲಾಖೆ ವಿಶೇಷ ಬಸ್ ಬಿಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+