Special Bus: ಕರ್ನಾಟಕದಿಂದ ನೆರೆಯ ಮಹಾರಾಷ್ಟ್ರ, ತೆಲಂಗಾಣಕ್ಕೆ ನಿತ್ಯ ಬಸ್ ವ್ಯವಸ್ಥೆ
ಹುಬ್ಬಳ್ಳಿ ಮೇ 22: ಕರ್ನಾಟಕದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಕಾರ್ಯ ನಿರ್ವಹಿಸುತ್ತಿದೆ. ವಿಶೇಷ ಸಂದರ್ಭಗಳಲ್ಲಿ ಹುಬ್ಬಳ್ಳಿ, ಧಾರವಾಡದಿಂದ ವಿಶೇಷ ಬಸ್ ಆಯೋಜಿಸುವ ಘಟಕವು ಈ ಭಾರಿ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಕ್ಕೆ ವಿಶೇಷ ಬಸ್ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. ಐರಾವತ ಹಾಗೂ ವೇಗಧೂರ ಸಾರಿಗೆ ಬಸ್ ಇವಾಗಿದ್ದು, ರಾಜ್ಯದಲ್ಲಿ ಹೊರ ರಾಜ್ಯಗಳಿಗೆ ಓಡಾಡುವವರಿಗೆ ಅನುಕೂಲವಾಗಲಿದೆ.
ಹೌದು, ಉತ್ತರ ಕರ್ನಾಟಕದಿಂದ ನೆರೆ ಎರಡು ರಾಜ್ಯಗಳಲಿಗೆ ಐಶಾರಾಮಿ ವಿಶೇಷ ಬಸ್‌ಗಳನ್ನು ಪ್ರತಿ ದಿನ ಓಡಿಸುತ್ತಿದೆ. ಮೊದಲಿಗೆ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ಪ್ರತಿ ದಿನ ಐರಾವತ್ ಕ್ಲಬ್ ಕ್ಲಾಸ್ ಬಸ್ ಸೇವೆ ಆರಂಭವಾಗಿದೆ. ಗದಗ, ಕೊಪ್ಪಳ, ಗಂಗಾವತಿ, ರಾಯಚೂರು, ಸಿಂಧನೂರು, ಶಕ್ತಿ ನಗರ, ಮೆಹಬೂಬ ನಗರ ಮಾರ್ಗವಾಗಿ ಈ ಬಸ್ ಕಾರ್ಯಾಚರಣೆ ನಡೆಸಲಿದೆ.

ಹುಬ್ಬಳ್ಳಿಯಿಂದ ಪ್ರತಿ ದಿನ ರಾತ್ರಿ 09 (21:00) ಗಂಟೆಗೆ ಪ್ರಯಾಣ ಆರಂಭಿಸುವ ಐರಾವತ್ ಬಸ್ ಮಾರನೇ ದಿನ ಬೆಳಗ್ಗೆ 7 ಗಂಟೆಗೆ ಹೈದರಾಬಾದ್ ತಲುಪಲಿದೆ. ಮರಳಿ ಅಲ್ಲಿಂದ ಇಏ ಬಸ್ ರಾತ್ರಿ 10 (22:00) ಗಂಟೆಗೆ ಬಿಡುತ್ತದೆ. ಮಾರನೇ ದಿನ ಬೆಳಗ್ಗೆ 08 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಒಬ್ಬರಿಗೆ ಒಂದು ಬದಿ 1567 ರೂಪಾಯಿ ಪ್ರಯಾಣ ಶುಲ್ಕ ನಿಗದಿ ಮಾಡಲಾಗಿದೆ. ಇದರಿಂದ ಉತ್ತರ ಕರ್ನಾಟದ ಅದೆಷ್ಟೋ ಮಂದಿ ಉದ್ಯೋಗ ಇನ್ನಿತರ ಕಾರಣಗಳಿಗೆ ಹೈದರಾಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ.
ಇನ್ನು ಮಹಾರಾಷ್ಟ್ರ ರಾಜ್ಯ ತುಳಜಾಪುರಕ್ಕೆ ಹುಬ್ಬಳ್ಳಿಯಿಂದ ವೇಗದೂತ ಸಾರಿಗೆ ಸೇವೆ ಶುರುವಾಗಿದೆ. ಈ ಬಸ್ ಹುಬ್ಬಳ್ಳಿ ನಿಲ್ದಾನವನ್ನು ರಾತ್ರಿ 11.45 ಗಂಟೆಗೆ ಬಿಡುತ್ತದೆ. ತುಳಜಾಪುರವನ್ನು ಮಾರನೇ ದಿನ ಬೆಳಗ್ಗೆ 8.30ಕ್ಕೆ ತಲುಪುತ್ತದೆ. ಅಲ್ಲಿಂದ ಮರಳಿ ಸಂಜೆ 06 ಗಂಟೆಗೆ ಹೊರಟು ಬೆಳಗಿನ ಜಾವ 3.15ಕ್ಕೆ ತಲುಪಲಿದೆ ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮಾಹಿತಿ ನೀಡಿದೆ.

ಮುಂಗಡ ಟಿಕೆಟ್ ಕಾಯ್ದಿರಿಸಿ
ಈ ಹುಬ್ಬಳ್ಳಿ-ತುಳಜಾಪುರ ವೇಗದೂತ ಬಸ್ ನಲಗುಂತ, ನಗರಗುಂದ, ವಿಜಯಪುರ, ಸೋಲಾಪುರ ಮಾರ್ಗವಾಗಿ ಸಂಚರಿಸಲಿದೆ. ಪ್ರತಿ ಪ್ರಯಾಣಿಕನಿಗೆ ಒಂದು ಬದಿ ಪ್ರಯಾಣಕ್ಕೆ 521 ರೂಪಾಯಿ ದರ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಮುಂಗಾರ ಟಿಕೆಟ್ ಕಾಯ್ದಿರಿಸಲು ನೀವು https://ksrtc.in/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು NWKRTC ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಥಣಿ-ಶ್ರವಣಬೆಳಗೊಳಕ್ಕೆ ಬಸ್
ಅಷ್ಟೇ ಅಲ್ಲದೇ ಅಥಣಿ-ಶ್ರವಣಬೆಳಗೊಳಕ್ಕೆ ವಿಶೇಷ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಥಣಿಯನ್ನು 13:00 ಗಂಟೆಗೆ ಬಿಡಲಿದೆ. ಶ್ರವಣಬೆಳವನ್ನು 05:00 ಗಂಟೆಗೆ ತಲುಪಲಿದೆ. ಮರಳಿ ಶ್ರವಣಬೆಳಗೊಳವನ್ನು 08.30ಕ್ಕೆ ಬಿಡುವ ಬಸ್ 17:00 ಗಂಟೆಗೆ ಬಂದು ಅಥಣಿ ಸೇರಲಿದೆ. ಪ್ರಯಾಣ ದರ 837 ರೂಪಾಯಿ ನಿಗದಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ NWKRTC ಮಾಹಿತಿ ನೀಡಿದೆ.












Click it and Unblock the Notifications