Special Bus: ಗಣೇಶ ಹಬ್ಬಕ್ಕೆ NWKRTC ಯಿಂದ ವಿಶೇಷ ಬಸ್ ಸೌಲಭ್ಯ! ಎಲ್ಲಿಂದ ಎಲ್ಲಿಗೆ? ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 23: ಗೌರಿ ಗಣೇಶ ಹಬ್ಬವು ಆಗಸ್ಟ್ 26ರಿಂದ ಆಚರಿಸಲಾಗುತ್ತದೆ. ಒಂದು ವಾರಗಳ ನಡೆಯಲಿರುವ ಈ ಹಬ್ಬದಾಚರಣೆಗೆ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ಜನದಟ್ಟಣೆಗೆ ಕಡಿಮೆ ಮಾಡಲು, ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಈಗಾಗಲೇ KSRTC ಹೆಚ್ಚುವರಿ ಬಸ್ ಬಿಡುಗಡೆ ಮಾಡಿದ ಬೆನ್ನಲ್ಲೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಸಹ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ.
ಕೇವಲ ಕರ್ನಾಟಕ ಮಾತ್ರವಲ್ಲದೇ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳವರೆಗೂ, ಇತ್ತ ಬೆಂಗಳೂರಿನವರೆಗೂ ಈ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವಿಶೇಷ ಬಸ್‌ಗಳು ಸಂಚರಿಸಲಿವೆ. ಆದ್ದರಿಂದ ಗಣೇಶ ಹಬ್ಬಕ್ಕೆ ಸಂಚರಿಸುವ ಪ್ರಯಾಣಿಕರು ಈ ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಪ್ರಯೋಜನ ಪಡೆದುಕೊಳ್ಳುವಂತೆ ಘಟಕದ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಎಲ್ಲಿಂದ ಎಲ್ಲಿಗೆ ಬಸ್ ವ್ಯವಸ್ಥೆ, ಮಾರ್ಗಗಳು
ದೂರದ ಊರುಗಳಿಂದ ಹಬ್ಬಕ್ಕೆ ಬರುವವರು, ಬಂದು ಹೋಗುವ ಸಾರ್ವಜನಿಕರು ಸಹಾಯವಾಗುವಂತೆ ಈ ವ್ಯವಸ್ಥೆ ಮಾಡಲಾಗಿದೆ. ದಿನಾಂಕ ಆಗಸ್ಟ್ 22 ರಿಂದ ಆಗಸ್ಟ್ 27ರವರೆಗೆ ಸಂಚರಿಸಲಿವೆ. ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಇತರ ಜಿಲ್ಲೆಗಳ ನಿಲ್ದಾಣಗಳಿಂದ ಬಸ್‌ಗಳು ಸಂಚರಿಸಲಿವೆ.
ಅಷ್ಟೇ ಅಲ್ಲದೇ ಬೆಂಗಳೂರು, ಮಹಾರಾಷ್ಟ್ರದ ಪುಣೆ, ತೆಲಂಗಾಣದ ಹೈದರಾಬಾದ್ ನಗರಗಳಿಗೂ ಇಲ್ಲಿಂದ ಬಸ್ ಸಂಚರಿಸಲಿವೆ. ಈ ಮಹಾನಗರಗಳ ಪ್ರಯಾಣಿಕರಿಗೆ ಸಾರಿಗೆ ಸೇವೆ ಸಿಗಲಿದೆ. ಶುಕ್ರವಾರದಿಂದಲೇ (ಆಗಸ್ಟ್ 22) ಹೆಚ್ಚುವರಿ ಬಸ್ ಸೇವೆ ಆರಂಭವಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಲು www.ksrtc.in ಅಧಿಕೃತ ವೆಬ್‌ಸೈಟ್ ಮೂಲಕ ಮಾಡಬಹುದು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹಬ್ಬದ ಪ್ರಯುಕ್ತ 1500 ಹೆಚ್ಚುವರಿ ಬಸ್ ಬಿಡುಗಡೆ ಮಾಡಲಾಗಿದೆ. ಈ ಬಸ್‌ಗಳು ಬೆಂಗಳೂರು ನಗರ ಕೇಂದ್ರದಿಂದ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಗೆ ಸೇವೆ ನೀಡಲಿವೆ. ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲಿವೆ. ಹೆಚ್ಚಿನ ಮಾಹಿತಿಗೆ ನೀವು www.ksrtc.in ವೆಬ್‌ಸೈಟ್‌ಗೆ ಸಂಪರ್ಕಿಸಿದೆ.












Click it and Unblock the Notifications