NWKRTC: ಸಾರಿಗೆ ನಿಗಮಗಳಲ್ಲೇ ಈ ಬಸ್‌ನಲ್ಲಿ ಆನ್‌ಲೈನ್ ಹಣ ಪಾವತಿ ಸೌಲಭ್ಯ, ತಿಂಗಳಲ್ಲಿ ವಿಸ್ತರಣೆ

ಹುಬ್ಬಳ್ಳಿ, ಜನವರಿ 10: ಅಪಘಾತ ವಿಮೆ ಹಣ ಹೊಂದಿಸಲು ಟಿಕೆಟ್ ದರ ಏರಿಕೆ ಮಾಡಿರುವ ಕರ್ನಾಟಕ ರಾಜ್ಯ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಇತ್ತೀಚೆಗೆ ಯುಪಿಐ (UPI) ಸೌಲಭ್ಯ ಪರಿಚಯಿಸಿದ ನಂತರ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹಿಸಿದೆ.

ಕರ್ನಾಟಕ ಸಾರಿಗೆ ಸಂಸ್ಥೆ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಯುಪಿಐ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದರ ವಹೀವಾಟುವಿನಿಂದ ಬರೋಬ್ಬರಿ 1.50 ಕೋಟಿ ರೂ. ಯುಪಿಐ ವಹೀವಾಟು ನಡೆದಿದೆ. ಮುಂದಿನ ತಿಂಗಳಲ್ಲಿ ಎಲ್ಲ ಬಸ್‌ಗಳಲ್ಲಿ ಈ ವ್ಯವಸ್ಥೆ ರೂಪಿಸಲಾಗುವುದು ಎಂದು ನಿಗಮ ವ್ಯವಸ್ಥಾಪಕ ನಿರ್ದೇಶಕ ಭರತ್.ಎಂ. ಮಾಹಿತಿ ನೀಡಿದ್ದಾರೆ.

NWKRTC Introduce Online Payment system in Few Buses, Next One Month Will Extend All Buses

NWKRTC ಯನ್ನು ಪ್ರಯಾಣಿಕ ಸ್ನೇಹಿ ಆಗಿ ಮಾಡುವಲ್ಲಿ ಬಸ್ಸುಗಳಲ್ಲಿ ಟಿಕೆಟ್ ಪಡೆಯಲು ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಈ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಬಸ್ಸುಗಳಲ್ಲಿ ಸಪ್ಟೆಂಬರ್ 1ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು.

ಈ ವಿಧಾನದಿಂದ ಆನ್‌ಲೈನ್‌ನಲ್ಲಿ ಹಣ ಪಾವತಿಸಿ

ಈ ನೂತನ‌ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಿರ್ವಾಹಕರಿಗೆ ಪ್ರತ್ಯೇಕ ಸ್ಟ್ಯಾಟಿಕ್ ಕ್ಯೂ ಆರ್ ಕೋಡ್ ನೀಡಲಾಗಿದೆ. ಪ್ರಯಾಣಿಕರು ಫೋನ್ ಪೇ,ಗೂಗಲ್ ಪೇ ಮತ್ತಿತರ ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

NWKRTC Introduce Online Payment system in Few Buses, Next One Month Will Extend All Buses

ಪದೆ ಪದೇ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ಸಂಘರ್ಷಕ್ಕೆ ಕಾರಣವಾಗುವ ಚಿಲ್ಲರೆ ಸಮಸ್ಯೆ ಪರಿಹಾರ, ನಗದು ರಹಿತ ಪ್ರಯಾಣ ಹಾಗೂ ಸಮಯದ ಉಳಿತಾಯ ಮುಂತಾದ ಪ್ರಯೋಜನಗಳಿಂದಾಗಿ ಯುಪಿಐ ವ್ಯವಸ್ಥೆಗೆ ಸಾರ್ವಜನಿಕರಿಂದ ಹಾಗೂ ಸಿಬ್ಬಂದಿಗಳಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ.

4,581 ಬಸ್ ಗಳಿಗೆ ಸೌಲಭ್ಯ ವಿಸ್ತರಣೆ

ಪ್ರಸ್ತುತ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲಾ 452 ಬಸ್ಸುಗಳಿಗೆ ವಿಸ್ತರಿಸಲಾಗಿದೆ. ಇಲ್ಲಿಯವರೆಗೆ 71,396 ವಹಿವಾಟುಗಳು ನಡೆದಿದ್ದು ರೂ. 1,50,26,815 ಮೊತ್ತ ಪಾವತಿ ಆಗಿದೆ ಎಂದು ವಹೀವಾಟಿನ ಲೆಕ್ಕ ಕೊಟ್ಟರು. ಈ ಯುಪಿಐ ವ್ಯವಸ್ಥೆಯನ್ನು ಇನ್ನೊಂದು ತಿಂಗಳಲ್ಲಿ ಸಂಸ್ಥೆಯ ಎಲ್ಲಾ 4,581 ಬಸ್ ಗಳಲ್ಲಿ ಈ ವ್ಯವಸ್ಥೆ ಲಭ್ಯವಾಗಲಿದೆ. ಇದರೊಂದಿಗೆ ನಗದು ಪಾವತಿ ಸಹ ಮುಂದುರಿಯಲಿದೆ.

NWKRTC ಬಸ್ ಟಿಕೆಟ್ ಬೆಲೆ ಹೆಚ್ಚಳ

ಅಪಘಾತ ವಿಮೆಗೆ ಹಣ ಹೊಂದಿಸಲು ಸಾರಿಗೆ ಸಂಸ್ಥೆ ಈಗ ಬಸ್ ಟಿಕೆಟ್ ದರ ಏರಿಕೆ ಮಾಡಿದೆ. ಇದೇ ಜನವರಿ 01ರಿಂದಲೇ ಟಿಕೆಟ್ ದರದಲ್ಲಿ ಒಂದು ರೂಪಾಯಿ ಹೆಚ್ಚಿಸಲಾಗಿದೆ. KSRTC ಮಾದರಿಯಲ್ಲಿ NWKRTC ದರ ಏರಿಕೆ ಮಾಡಿದೆ.

ಈ ದರ ಏರಿಕೆ ಎಲ್ಲರಿಗೂ ಅನ್ವಯವಾಗುವುದಿಲ್ಲ. ಬದಲಾಗಿ 50 ರೂ. ಮೇಲ್ಪಟ್ಟು ಟಿಕೆಟ್ ಖರೀದಿಸುವ ಪ್ರಯಾಣಿಕರಿಂದ 1 ರೂಪಾಯಿ ಹೆಚ್ಚಿನ ದರ ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ. ಈ ಹೆಚ್ಚುವರಿ ಪಡೆದ 1 ರೂಪಾಯಿಯನ್ನು ಅಪಘಾತ ವಿಮೆಗೆ ಬಳಸಲು ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ. ಅಪಘಾತ ವಿಮೆಗೆ ಬಳಸಲು 1 ಲಕ್ಷದಿಂದ 10 ಲಕ್ಕಕ್ಕೆ ಏರಿಕೆ ಮಾಡಲಾಗಿದೆ. ಈ ಸಂಬಂಧ ಹಣ ಹೊಂದಿಸಲು ಹೀಗೆ ದರ ಹೆಚ್ಚಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+