NWKRTC: ಧರ್ಮಸ್ಥಳಕ್ಕೆ ವೇಗಧೂತ ಬಸ್ ಸೇವೆ ಆರಂಭ, ಜಾತ್ರೆಗೆ ಹೆಚ್ಚುವರಿ ಬಸ್‌ಗಳ ಸಂಚಾರ, ವೇಳಾಪಟ್ಟಿ

NWKRTC Vegadhootha Bus: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಚಿಕ್ಕೋಡಿ ವಿಭಾಗವು ವರ್ಷಾಂತ್ಯದ ಸಂದರ್ಭದಲ್ಲಿ ಭಕ್ತರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಪ್ರಮುಖ ಘೋಷಣೆ ಮಾಡಿದೆ. ಗೋಕಾಕ್ ಕ್ಷೇತ್ರದಲ್ಲಿ ನಡೆಯಲಿರುವ ಗೋಕಾಕ ಶ್ರೀ ವಿರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ವಿಶೇಷ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಇನ್ನೂ ಚಿಕ್ಕೋಡಿ-ಧರ್ಮಸ್ಥಳ ಮಾರ್ಗದಲ್ಲಿ ಹೊಸ ವೈಶಿಷ್ಟ್ಯಮಯ ಬಸ್ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ.

NWKRTC ಅಧಿಕಾರಿಗಳ ಪ್ರಕಾರ, ಗೋಕಾಕ ಶ್ರೀ ವಿರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಪ್ರಯುಕ್ತ ಡಿಸೆಂಬರ್ 2ರಿಂದ ಡಿಸೆಂಬರ್ 6ರವರೆಗೆ ಪ್ರಯಾಣಿಕರ ಸಂಚಾರ ಹೆಚ್ಚಿರುತ್ತದೆ. ಜಾತ್ರೆಗೆ ಆಗಮಿಸುವ ಭಕ್ತರ ಸುಗಮ ಸಂಚಾರಕ್ಕಾಗಿ ವಿಶೇಷ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿದೆ. ಜನದಟ್ಟಣೆ ಹೆಚ್ಚುವ ನಿರೀಕ್ಷೆಯ ಹಿನ್ನೆಲೆ, ಚಿಕ್ಕೋಡಿ ವಿಭಾಗವು ಹೆಚ್ಚಿನ ಬಸ್‌ಗಳನ್ನು ನಿಯೋಜಿಸಿ ನಿರಂತರ ಸಂಚಾರ ವ್ಯವಸ್ಥೆ ಮಾಡುತ್ತಿದೆ. ಜಾತ್ರೆಯಿಂದ ಬೇರೆ ಬೇರೆ ಊರುಗಳಿಗೆ ತೆರಳುವವವರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಗೋಕಾಕ ತಲುಪುವ ಹೆಚ್ಚುವರಿ ಬಸ್‌ಗಳು ಲಭ್ಯ ಇರಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

NWKRTC Has Launches Vegadhootha Bus service in Chikkodi Dharmasthala Route Ticket price

NWKRTC ಚಿಕ್ಕೋಡಿ-ಧರ್ಮಸ್ಥಳದ ನಡುವೆ ವೇಗಧೂತ ಸಾರಿಗೆ ಸೇವೆ ಆರಂಭಿಸಿದೆ. ಈ ಬಸ್ ಚಿಕ್ಕೋಡಿಯಿಂದ ಪ್ರತಿದಿನ ಮಧ್ಯಾಹ್ನ 2.30ಕ್ಕೆ ಬಸ್ ಹೊರಡುತ್ತದೆ. ಮರುದಿನ ದಿನ ಬೆಳಗ್ಗೆ 6ಕ್ಕೆ ಸುಕ್ಷೇತ್ರ ಧರ್ಮಸ್ಥಳ ತಲುಪಲಿದೆ. ಸಂಕೆಶ್ವರ, ಬೆಳಗಾವಿ ಮತ್ತು ಮೂಡುಬಿದಿರೆ ಮಾರ್ಗವಾಗಿ ಸಾಗಲಿದೆ. ಈ ಭಾಗದ ಪ್ರಯಾಣಿಕರಿಗೆ ಸಾರಿಗೆ ಸೇವೆ ನೀಡಲಿದೆ.

ಒಬ್ಬರಿಗೆ ಈ ವೇಗಧೂತ ಬಸ್ ಟಿಕೆಟ್ ದರ ₹868 ರೂಪಾಯಿ ಇದೆ. ಧರ್ಮಸ್ಥಳಕ್ಕೆ ಹೋಗುವ ಭಕ್ತರು ಮತ್ತು ಪ್ರವಾಸಿಗರಿಗೆ ಇದು ವಿಶೇಷ ಸೌಲಭ್ಯದಿಂದ ಸಾಕಷ್ಟು ಉಪಯೋಗವಾಗಲಿದೆ. ಪ್ರಯಾಣಿಕರು ಆನ್‌ಲೈನ್ ಬುಕಿಂಗ್ ಮೂಲಕವೂ ಟಿಕೆಟ್ ಕಾಯ್ದಿರಿಸಬಹುದು. ಅದಕ್ಕಾಗಿ ನೀವು KSRTC ಅಧಿಕೃತ ವೆಬ್‌ಸೈಟ್ https://www.ksrtc.in/ ಗೆ ಭೇಟಿ ನೀಡಬೇಕು.

ಪ್ರಯಾಣಿಕರ ಬೇಡಿಕೆ ಮತ್ತು ಸಾರ್ವಜನಿಕ ಸೌಲಭ್ಯವನ್ನು ಗಮನಿಸಿ, NWKRTC ಈ ಎರಡು ಸೇವೆಗಳನ್ನು ಘೋಷಿಸಿರುವುದು ಜನರಿಂದ ಮೆಚ್ಚುಗೆ ಪಡೆಯುತ್ತಿದೆ. ಜಾತ್ರಾ ಮಹೋತ್ಸವ ಹಾಗೂ ದೈವ ಭಕ್ತರ ಪ್ರಯಾಣಕ್ಕೆ ತೊಂದರೆ ಆಗದಂತೆ ಸಾಋಇಗೆ ನಿಗಮವು ಈ ಮಲಿನಂತೆ ಸಾರ್ವಜನಿಕ ಸ್ನೇಹಿ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವೀರಭದ್ರೇಶ್ವರ ಜಾತ್ರೆಗೆ ಬಸ್‌ಗಳಲ್ಲಿ ತೆರಳೂ ಭಕ್ತರು, ಪ್ರಯಾಣಿಕರು ಹೆಚ್ಚಿನ ಮಾಹಿತಿಗೆ 77609 91878 ಅಥವಾ 96060 41090 ಗೆ ಸಂಪರ್ಕಿಸಬೇಕು. ಚಿಕ್ಕೋಡಿ-ಧರ್ಮಸ್ಥಳ ಮಾರ್ಗದ ಬಸ್ ಸೇವೆಯ ಹೆಚ್ಚುವರಿ ಮಾಹಿತಿಗಾಗಿ ನೀವು 96069 41959 ಗೆ ಕರೆ ಮಾಡುವಂತೆ ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+