ಸಿಹಿ ಸುದ್ದಿ: ಗಣೇಶ ಹಬ್ಬದ ನಂತರ 500 ಹೆಚ್ಚುವರಿ ಬಸ್ ಬಿಡಲಿರುವ NWKSRTC

ಹುಬ್ಬಳ್ಳಿ, ಸೆಪ್ಟಂಬರ್ 12: ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆಗೆ ಹೆಚ್ಚು ಬೇಡಿಕೆ ಬರುವುದು ಸಾಮಾನ್ಯ. ಅದೇ ರೀತಿ ಈ ವರ್ಷ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ಘೋಷಣೆ ಬೆನ್ನಲ್ಲೆ NWKRTC ಸಹ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಬಿಡುವುದಾಗಿ ತಿಳಿಸಿದೆ.

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC)ಯಿಂದ ಗೌರಿ ಗಣೇಶದ ಮುಗಿಸಿ ಉತ್ತರ ಕರ್ನಾಟಕದಿಂದ ತಮ್ಮ ಕೆಲಸದ ಊರುಗಳಿಗೆ ತೆರಳುವವರಿಗೆ ನೆರವಾಗಲೆಂದು 500ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದೆ.

nwkrtc-deployed-500-more-bus

ಗುರುವಾರ ಸೆಪ್ಟಂಬರ್ 14ರಂದು ಅಮವಾಸ್ಯೆ ಇದ್ದು, ಸೋಮವಾರ ಸೆಪ್ಟಂಬರ್ 14ರಂದು ಸೋಮವಾರ ಗಣೇಶ ಚತುರ್ಥಿ ಇದೆ. ಅಲ್ಲದೇ ಶನಿವಾರ, ಭಾನುವಾರ ವಾರಾಂತ್ಯ ಇರುವುದರಿಂದ ಬಹುತೇಕ ಮಂದಿ ಗುರುವಾರ ಮತ್ತು ಶುಕ್ರವಾರ ರಾತ್ರಿಯಿಂದ ಉತ್ತರ ಕರ್ನಾಟಕ, ಪುಣೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ನಾನಾ ಕಡೆ ತೆರಳುತ್ತಾರೆ.

ಈ ಜಿಲ್ಲೆಗಳಲ್ಲಿ ಸಂಚರಿಸಲಿರುವ ಬಸ್‌ಗಳು

ಹಬ್ಬ ಮುಗಿಸಿದ ಬಳಿಕ ಅವರೆಲ್ಲರಿಗೂ ಹಬ್ಬದ ಮರುದಿನ ತೆರಳಲು ಕಷ್ಟವಾಗಬಾರದೆಂದು NWKRTC ಯಿಂದ ಹೆಚ್ಚುವರಿ ಬಸ್ ಬಿಡಲಾಗುತ್ತದೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ ಜಿಲ್ಲೆ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಹೆಚ್ಚುವರಿ ಬಸ್ ಸಂಚರಿಸಲಿವೆ.

NWKRTC ನಿಗಮವು ಮಲ್ಟಿ ಎಕ್ಸೆಲ್ (ವೋಲ್ವೊ), ಸ್ಲೀಪರ್, ರಾಜಹಂಸ ಸೇರಿ 50 ಐಶಾರಾಮಿ ಬಸ್ಸುಗಳು ಹಾಗೂ 200 ವೇಗಧೂತ ಸಾರಿಗೆ ಮತ್ತು 250ಕ್ಕೂ ಹೆಚ್ಚು ಹೆಚ್ಚುವರಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದೆ.

nwkrtc-deployed-500-more-bus

ಹೀಗಾಗಿ ಹಬ್ಬಕ್ಕೆ ಬರುವವರಿಗೆ ಅನುಕಲವಾಗುವಂತೆ ಬೆಂಗಳೂರು ಮತ್ತಿತರ ಸ್ಥಳಗಳಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ. ವೋಲ್ವೊ, ಸ್ಲೀಪರ್, ರಾಜಹಂಸ ಮುಂತಾದ 50 ಪ್ರತಿಷ್ಠಿತ ಐಶಾರಾಮಿ ಬಸ್ಸುಗಳು ಹಾಗೂ 200 ವೇಗದೂತ ಸಾರಿಗೆ ಸೇರಿದಂತೆ 250ಕ್ಕೂ ಹೆಚ್ಚು ಹೆಚ್ಚುವರಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಿವೆ.

ಅನೇಕ ಪ್ರಯಾಣಿಕರಿಗೆ ಅನುಕೂಲ

ಇದಷ್ಟೇ ಅಲ್ಲದೇ ಜಿಲ್ಲೆ ಸ್ಥಳೀಯ ಬಸ್ ನಿಲ್ದಾಣಗಳಿಂದ ವಿವಿಧ ಜಿಲ್ಲೆಗಳಿಗೆ ಬೇಕಾಗುವಷ್ಟು, ಅಗತ್ಯತೆ ತಕ್ಕಂತೆ ಸಾರಿಗೆ ಬಸ್ ಓಡಾಟಕ್ಕೆ ನಿರ್ಧರಿಸಲಾಗಿದೆ. ಹೀಗಾಗಿ ಯಾವ ಭಾಗದ ಜನರಿಗೂ ಹಬ್ಬದ ನಂತರ ತೊಂದರೆ ಅಗದಂತೆ ನಿಗಮ ನೋಡಿಕೊಳ್ಳಲಿದೆ. ಇದರಿಂದ ಬೆಂಗಳೂರು, ಮಂಗಳೂರು, ಪುಣೆ, ಹೈದರಾಬಾದ್ ಕಡೆಗೆ ಹೋಗುವ ಪ್ರಯಾಣಿಕರಿಗೆ ನೆರವಾಗಲಿದೆ.

ಸೆಪ್ಟಂಬರ್ 19ರಿಂದ 24ರವರೆಗೆ ಸಂಸ್ಥೆಯ ಎಲ್ಲಾ ವಿಭಾಗಗಳ ಪ್ರಮುಖ ಬಸ್ ನಿಲ್ದಾಣಗಳಿಂದ ಅಗತ್ಯತೆಗೆ ಅನುಗುಣವಾಗಿ ನೂರಾರು ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಪ್ರಯಾಣಿಕರು KSRTC Mobile App, ಇಲ್ಲವೇ ಅಧಿಕೃತ ಜಾಲತಾಣ ವೆಬ್ ಸೈಟ್ www.ksrtc.in ಮೂಲಕ ಮುಂಗಡ ಬುಕ್ ಮಾಡಬಹುದಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆ ಮಾಹಿತಿ ನೀಡಿದೆ.

ಇನ್ನೂ ಇತ್ತೀಚೆಗಷ್ಟೇ KSRTC ನಿಗಮವು ಗಣೇಶ ಹಬ್ಬಕ್ಕೆ ಬೆಂಗಳೂರಿನಿಂದ ಬೇರೆಡೆ ತೆರಳುವವರಿಗಾಗಿ ಒಟ್ಟು 1200 ಹೆಚ್ಚುವರಿ ಬಸ್‌ಗಳನ್ನು ಬಿಡುಗಡೆ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+