ನನ್ನ ಜೇಬಿನಲ್ಲೊಂದು ಬಾಂಬ್ ಇದೆ; ರಮೇಶ್ ಜಾರಕಿಹೊಳಿ

ಬೆಂಗಳೂರು, ಮಾರ್ಚ್ 25; "ನನ್ನ ಜೇಬಿನಲ್ಲೊಂದು ಬಾಂಬ್ ಇದೆ. ನನ್ನ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ಯ ನಡೆದಿರುವುದು ಈಗ ಖಚಿತವಾಗಿದೆ" ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

Recommended Video

      ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೊಬೈಲ್‌ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಎಸ್‌ಐಟಿ | Oneindia Kannada

      ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ದೂರು ಕೊಟ್ಟ ಅರ್ಧ ಗಂಟೆಯಲ್ಲಿ ವಿಡಿಯೋ ಬಿಡುಗಡೆ ಆಗುತ್ತದೆ. ಇದು ಎಷ್ಟು ದೊಡ್ಡ ಷಡ್ಯಂತ್ಯ ಎಂಬುದು ಈಗ ತಿಳಿಯುತ್ತಿದೆ" ಎಂದರು.

      "ಇನ್ನೂ 10 ಸಿಡಿ ಬರಲಿ ಎದುರಿಸಲು ನಾನು ಸಿದ್ಧವಾಗಿದ್ದೇನೆ. ನನ್ನ ವಿರುದ್ಧ ಷಡ್ಯಂತ್ರ ನಡೆದಿರುವುದು ಸ್ಪಷ್ಟವಾಗಿದೆ. ನಾನು ಆರೋಪ ಮುಕ್ತನಾಗುವ ವಿಶ್ವಾಸವಿದೆ. ದೇವರ ಆಶೀರ್ವಾದದಿಂದ ನಾನು ಇದರಿಂದ ಮುಕ್ತನಾಗುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

      Now Its Clear Conspiracy Against Me Says Ramesh Jarkiholi

      "ನನ್ನ ಜೇಬಿನಲ್ಲೊಂದು ಬಾಂಬ್ ಇದೆ. ಆ ಬಾಂಬ್ ಬಿಟ್ಟರೆ ನಿವೇ ಶಾಕ್ ಆಗುತ್ತೀರಿ. ಶಾಕ್ ಆಗುವಂತಹ ಅನೇಕ ವಿಚಾರಗಳು ನನ್ನ ಬಳಿ ಇವೆ. ತಪ್ಪು ಮಾಡಿದವರನ್ನು ಜೈಲಿನಲ್ಲಿ ಕೂರಿಸದೇ ಬಿಡುವುದಿಲ್ಲ" ಎಂದು ತಿಳಿಸಿದರು.

      ಗುರುವಾರ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. 2ನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದಾಳೆ. "ಎಸ್‌ಐಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿಕೆ ನೀಡಿದ್ದು, ತಂದೆ-ತಾಯಿಯ ರಕ್ಷಣೆ ನನಗೆ ಮುಖ್ಯ" ಎಂದು ಹೇಳಿದ್ದಾಳೆ.

      2ನೇ ವಿಡಿಯೋದಲ್ಲಿ ಎಸ್‌ಐಟಿ ವಿರುದ್ಧ ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನನ್ನ ತಂದೆ ತಾಯಿಗೆ ರಕ್ಷಣೆ ಕೊಡಬೇಕು ಎಂದು ವಿಪಕ್ಷ ನಾಯಕರು, ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾಳೆ. ಈ ವಿಡಿಯೋ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ರಮೇಶ್ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+