CM - DCM "ಖುರ್ಚಿ ಕುಸ್ತಿ'ಯಲ್ಲಿ ಬಳಲುತ್ತಿದೆ ಉತ್ತರ ಕರ್ನಾಟಕ: ಯತ್ನಾಳ್ ಗರಂ
ಬೆಂಗಳೂರು, ಅಕ್ಟೋಬರ್ 14: ತಿಂಗಳಿಗೊಮ್ಮೆ ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಗಾಳಿ ಬೀಸುತ್ತಿದೆ. ಒಂದೊಮ್ಮೆ ಈ ಸುದ್ದಿ ಹರಡುತ್ತಿದ್ದಂತೆ ಅನೇಕ ಚರ್ಚೆಗಳು ಆಗುತ್ತಿವೆ. ಆಗಬೇಕಾದ ಕೆಲಸಗಳಿಗೆ ಈ ಖುರ್ಚಿ ಬದಲಾವಣೆ ವಿಚಾರ ತಡೆ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಿಎಂ -ಡಿಸಿಎಂ ಖುರ್ಚಿ ಕುಸ್ತಿಯಲ್ಲಿ ಉತ್ತರ ಕರ್ನಾಟಕ ಬಲುಳುತ್ತಿದೆ ಎಂದು ದೂರಿದ್ದಾರೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರವು ಯತ್ನಾಳ್ ಅವರು, ಉತ್ತರ ಕರ್ನಾಟಕ ಪ್ರವಾಹದಿಂದ ಅಕ್ಷರಶಃ ನಲುಗಿದೆ. ಅನ್ನ ದಾತರು ಕಂಗಾಲಾಗಿದ್ದಾರೆ. ಮಳೆಯಿಂದಾಗಿ ಅಕ್ಕಿ, ಜೋಳ, ಹುರುಳಿ, ಹತ್ತಿ ಸೇರಿದಂತೆ ಅನೇಕ ಬೆಳೆಗಳು ಹಾನಿಯಾಗಿವೆ. ಸರ್ಕಾರ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ವೈಜ್ಞಾನಿಕವಾದ ಪರಿಹಾರ ನೀಡಬೇಕಾಗಿದ್ದ ಸರ್ಕಾರ ರಾಜಕೀಯ ಕೆಸೆರೆರೆಚಾಟದಲ್ಲಿ ನಿರತವಾಗಿದೆ. ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯ ಮಂತ್ರಿಗಳ 'ಖುರ್ಚಿ ಕುಸ್ತಿ' ಯಲ್ಲಿ ಉತ್ತರ ಕರ್ನಾಟಕ ಬಳಲುತ್ತಿದೆ ಎಂದು ಅವರು ಆಕ್ರೊಶ ಹೊರ ಹಾಕಿದ್ದಾರೆ.

ಅತಿವೃಷ್ಟಿ, ನಿರುದ್ಯೋಗ ಸಮಸ್ಯೆ, ಪರೀಕ್ಷಾರ್ಥಿಗಳಿಗೆ ವಯೋಮಿತಿ ಸಡಿಲಿಕೆ, ಲೋಕಸೇವಾ ಆಯೋಗದಲ್ಲಿ ಭ್ರಷ್ಟಾಚಾರ, ರಸ್ತೆ ಗುಂಡಿಗಳು ಹೀಗೆ ಹೀಗೆ ಸಾಲು ಸಾಲು ಸಮಸ್ಯೆಗಳಿದ್ದರೂ ಸಹ ಸರ್ಕಾರ ಪರಿಹಾರ, ಸೂಕ್ತ ಕ್ರಮ ಜರುಗಿಸುತ್ತಿಲ್ಲ. ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇದ ಮಾಡುವುದು. ಜಾತಿ ಸಮೀಕ್ಷೆ, ಜಿ.ಬಿ.ಎ ರಚನೆ, ಸುರಂಗ ರಸ್ತೆ ಹೀಗೆ ಅನುಪಯುಕ್ತ, ಅನುತ್ಪಾದಕ ಯೋಜನೆಗಳಿಗೆ ಸರ್ಕಾರ ತನ್ನ ಸಂಪನ್ಮೂಲಗಳನ್ನು, ಹಣವನ್ನು, ಸಮಯವನ್ನು ವಿನಿಯೋಗ ಮಾಡುತ್ತಿರುವುದನ್ನು ಅವರು ಖಂಡಿಸಿದರು.
ಸರ್ಕಾರ ಕೂಡಲೇ ಕಲ್ಬುರ್ಗಿ ಜಿಲ್ಲೆಯನ್ನು ಹಸಿಬರಗಾಲ ಎಂದು ಘೋಷಿಸಿ ಪರಿಹಾರ ನೀಡಬೇಕು. ಅಲ್ಲದೆ, ಉತ್ತರ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಜಿಲ್ಲೆಯ ರೈತರ ಪರ ಸರ್ಕಾರವನ್ನು ಆಗ್ರಹಿಸಿದರು.
ಹಸಿಬರ ಘೋಷಣೆಗೆ 25 ಸಂಘಟನೆಗಳ ಆಗ್ರಹ
ಭೀಮಾ ನದಿ ಹಾಗೂ ಅತೀವ ಮಳೆಯಿಂದಾಗಿ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಕಲಬುರಗಿಯಲ್ಲಿ ಕೃಷಿ ಬೆಳೆ ನಾಶವಾಗಿತ್ತು. ಜನ, ಜಾನುವಾರು ದುಸ್ತರ ಬದುಕು ಸಾಗಿಸುವಂತಾಯಿತು. ಬೆಳೆದ ಬೆಳೆ ಕೈಗೆ ಸಿಗದ ಅನ್ನದಾತ ಕಂಗಾಲಾಗಿದ್ದಾನೆ. ಆದ್ದರಿಂದ ಬೆಳೆನಾಶಗೊಂಡ ರೈತರಿಗೆ ಪರಿಹಾರ ನೀಡಬೇಕು. ಕಲಬುರಗಿಯನ್ನು ಹಸಿಬರ ಜಿಲ್ಲೆ ಎಂದು ಘೋಷಿಸುವಂತೆ ಬೀದಿಗಳಿದು ಪ್ರತಿಭಟಿಸಿದ ವಿವಿಧ 25 ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ. ಇದರ ಬೆನ್ನಲ್ಲೆ ಜಿಲ್ಲೆ ರೈತರ ಪರ ಯತ್ನಾಳ್ ಅವರು ಧ್ವನಿಗೂಡಿಸಿದ್ದಾರೆ.












Click it and Unblock the Notifications