Pavitra Gowda: ಜೈಲಿನಲ್ಲಿ ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್​ ಸಹಚರರಿಗೆ ಮಟನ್​ ಊಟ: ಮೆನು ಮಾಹಿತಿ ಇಲ್ಲಿದೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಜೈಲು ಪಾಲಾಗಿದ್ದಾರೆ. ಕೇಸ್‌ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅವರು ಜೈಲು ಸೇರಿ ನಿನ್ನೆಗೆ ಎರಡು ದಿನ ಕಳೆದಿದೆ. ಎರಡನೇ ದಿನ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿಯಲ್ಲಿ ಮಟನ್ ಊಟ ಸೇವಿಸಿದ್ದಾರೆ ಎಂದು ಹೇಳಲಾಗಿದೆ.

ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿರುವ ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್​ನ ಸಹಚರರಿಗೆ ಬಾಡೂಟ ನೀಡಲಾಗಿದೆ. ಕಾರಾಗೃಹದ ಮೆನು ಅನುಸಾರ ಮಟನ್​, ಚಪಾತಿ, ಮುದ್ದೆ ಹಾಗೂ ಅನ್ನ ನೀಡಲಾಗಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ಇಷ್ಟು ದಿನ ಐಷಾರಾಮಿ ಜೀವನ ಸಾಗಿಸುತ್ತಿದ್ದ ನಟಿ ಪವಿತ್ರಾ ಗೌಡ ಈಗ ಜೈಲು ವಾಸು ಅನುಭವಿಸುತ್ತಿದ್ದಾರೆ.

Non Veg Food Given To Pavithra Gowda And Other Accused In Central Jail

ಪರಪ್ಪನ ಅಗ್ರಹಾರ ಜೈಲು ಮೆನುವಿನಂತೆ ನಾನ್ ವೆಜ್ ಊಟ ನೀಡಲಾಗಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿರುವ ಪವಿತ್ರಾ ಗೌಡ ಹಾಗೂ ಇತರ ಸಹಚರರಿಗೆ ಜೈಲಿನಲ್ಲಿ ನಾನ್​-ವೆಜ್​ ಊಟ ಕೊಡಲಾಗಿದೆ. ಮೆನುವಿನ ಪ್ರಕಾರ ಮಟನ್, ಮುದ್ದೆ, ಚಪಾತಿ, ರೈಸ್ ನೀಡಲಾಗಿದೆ. ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್​ನವರು ಬಾಡೂಟ ಸೇವಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿಗೆ ಕಾರಾಗೃಹ ಸಿಬ್ಬಂದಿಯು ಊಟ ನೀಡಿದರು. ಊಟ ಮಾಡಿದ ಬಳಿಕ ಮಹಿಳಾ ವಿಭಾಗದ ಡಿ ಬ್ಯಾರಕ್​ನಲ್ಲಿ ಪವಿತ್ರಾ ಗೌಡ ಮೌನಕ್ಕೆ ಜಾರಿದರು. ತಮಗೆ ಎಂಥ ಪರಿಸ್ಥಿತಿ ಎದುರಾಯ್ತು ಎಂದು ಅವರು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ಅವರು ಜೈಲಿನಲ್ಲಿ ಸರಿಯಾಗಿ ಊಟ ಹಾಗೂ ನಿದ್ರೆ ಮಾಡದೇ ಚಡಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ಆಗಿದ್ದೇನು?

ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನು ಅಶ್ಲೀಲವಾಗಿ ಮೆಸೇಜ್​ ಕಳಿಸಿದ್ದ ಎನ್ನಲಾಗಿದೆ. ಆ ಕಾರಣದಿಂದ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್​ನಲ್ಲಿ ಚಿತ್ರಹಿಂಸೆ ನೀಡಿ ಸಾಯಿಸಲಾಯಿತು ಎಂಬ ಆರೋಪ ದರ್ಶನ್​, ಪವಿತ್ರಾ ಗೌಡ ಹಾಗೂ ಸಹಚರರ ಮೇಲಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇತ್ತ ಈ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+