ಬಿಜೆಪಿಯ 70 ಹಾಲಿ ಶಾಸಕರಿಗೆ ಟಿಕೆಟ್‌ ಕೊಡ್ತಿಲ್ವಂತೆ? ಪತ್ರಕರ್ತರ ಪ್ರಶ್ನೆಗೆ ಬಿಎಸ್‌ ಯಡಿಯೂರಪ್ಪ ಹೇಳಿದ್ದೇನು?

ಕಾಂಗ್ರೆಸ್ ನವರಿಗೆ ಸೋಲಿನ ಭಯ ಶುರುವಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಬಿ.ಎಸ್ ಯಡಿಯೂರಪ್ಪ ಕಿಡಿಕಾರಿದರು.

ಬೆಳಗಾವಿ,ಮಾರ್ಚ್ 8: ರಾಜ್ಯ ವಿಧಾನಸಭಾ ರಣಕಣ ರಂಗೇರಿದ್ದು, ಈ ಬಾರಿ ರಾಜ್ಯ ಬಿಜೆಪಿಯಲ್ಲಿ ಗುಜರಾತ್ ಮಾದರಿ ಜಾರಿಯಾಗುತ್ತಾ ಎನ್ನುವ ಆತಂಕ ಬಿಜೆಪಿ ಶಾಸಕರಲ್ಲಿ ಮೂಡಿದೆ. ಈ ನಡುವೆ ನಾಲ್ಕಾರು ಜನರಿಗೆ ಟಿಕೆಟ್ ಕೈ ತಪ್ಪಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರ ಹೇಳಿಕೆ ಹಲವು ಶಾಸಕರಿಗೆ ನಡುಕ ಉಂಟು ಮಾಡಿದೆ.

ಈ ಕುರಿತು ಬುಧವಾರ ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಟಿಕೆಟ್ ನೀಡುವ ವಿಚಾರವನ್ನ ಹೈಕಮಾಂಡ ತಿರ್ಮಾನಿಸುತ್ತದೆ. ಹೈಕಮಾಂಡ್ ಹಾಗೂ ಚುನಾವಣಾ ಸಮಿತಿಯಲ್ಲಿ ಚರ್ಚೆಯಾದ ಬಳಿಕ ಯಾರಿಕೆ ಟಿಕೆಟ್ ನೀಡಬೇಕು ಎಂಬುದು ನಿರ್ಧಾರವಾಗುತ್ತದೆ. ಇಲ್ಲಿನ ವಾಸ್ತವಿಕ ಸ್ಥಿತಿಯನ್ನ ತಿಳಿದುಕೊಂದು ಹೈಕಮಾಂಡ್ ತಿರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

No Wonder All The MLAs Get Tickets Says Former CM BS Yediyurappa

ನಾಲ್ಕಾರು ಜನ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ವಾತಾವರಣ ಇದೆ ಎಂದು ಹೇಳಿದ್ದೇನೆ. ನನ್ನ ಮಾತೇ ಅಂತಿಮವಲ್ಲ. ಎಲ್ಲ ಶಾಸಕರಿಗೂ ಟಿಕೆಟ್‌ ಸಿಕ್ಕರೂ ಅಚ್ಚರಿಯಿಲ್ಲ. ಗೆಲ್ಲುವಂತಹ ಪಕ್ಷದ ಟಿಕೆಟ್‌ ಸಿಗಬೇಕೆಂದು ನಾಲ್ಕಾರು ಜನ ಬರ್ತಾರೆ. ಆದರೆ, ಸರ್ವೇ ಮಾಡಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಿ ಅವರಿಗೆ ಟಿಕೆಟ್‌ ಕೊಡ್ತೀವಿ. ಉಳಿದವರನ್ನು ಕರೆದು ಸಹಕಾರ ನೀಡಿ ಎಂದು ಮನವಿ ಮಾಡುತ್ತೇವೆ. ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದರು.

ಬಿಜೆಪಿ ಹಾಲಿ, ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತೇವವೆ ಎಂದ ಕನಸು ಕಾಣುತ್ತಿದ್ದಾರೆ, ಅವರ ಕನಸು ನನಸಾಗಲ್ಲ. ಡಿ.ಕೆ. ಶಿವಕುಮಾರ್ ನಿರಂತರವಾಗಿ ಹೀಗೆ ಹೇಳುತ್ತಾರೆ, ಕಾಂಗ್ರೆಸ್ ನವರಿಗೆ ಸೋಲಿನ ಭಯ ಶುರುವಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾರಿದರು.

No Wonder All The MLAs Get Tickets Says Former CM BS Yediyurappa

ಸಚಿವ ವಿ.ಸೋಮಣ್ಣ ಹಾಗೂ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಸಚಿವ ವಿ.ಸೋಮಣ್ಣ ಸೇರಿ ಯಾರೂ ಬಿಜೆಪಿ ಬಿಡಲ್ಲ, ಎಲ್ಲರೂ ನಮ್ಮ ಜೊತೆ ಇರುತ್ತಾರೆ. ಯಾರೂ ಸಹ ಬಿಜೆಪಿ ಬಿಟ್ಟು ಹೋಗಲ್ಲ. ಬೆಂಗಳೂರಿಗೆ ಹೋದ ಬಳಿಕ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಎಲ್ಲರನ್ನ ಕರೆದು ಅವರ ಜೊತೆಯಲ್ಲಿ ಮಾತನಾಡುತ್ತೇನೆ. ನಮ್ಮಲ್ಲಿ ಯಾವುದೇ ಭಿನಾಭಿಪ್ರಾಯ ಇಲ್ಲ. ಪಕ್ಷದಿಂದ ಹೋಗುವವರನ್ನ ಗೌರವಯುತವಾಗಿ ಕಳುಹಿಸಿಕೊಡುತ್ತೇನೆ. ಪಕ್ಷಕ್ಕೆ ಬರುವವರನ್ನ ಸ್ವಾಗತಿಸುತ್ತೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+