'ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಮಸ್ಯೆ, ಕೈತಪ್ಪಿದ ಸಾವಿರಾರು ಕೋಟಿ ಆದಾಯ'
ಬೆಂಗಳೂರು, ಫೆಬ್ರವರಿ 06: ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ 28 ದಿನಗಳಿಂದ ಯಾವ ಸಾಫ್ಟ್‍ವೇರ್ ಕೂಡ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ ದಲ್ಲಿ ಇಂದು(ಗುರುವಾರ) ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇ ಖಾತೆ ಇಲ್ಲದೆ ನೋಂದಣಿ ಇಲ್ಲ ಎಂಬ ಹೊಸ ಷರತ್ತನ್ನು ಜಾರಿ ಮಾಡಿದ್ದಾರೆ. ಪೂರ್ವಾಪರ ಯೋಚಿಸದೆ ಹೀಗೆ ಮಾಡಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 1 ಲಕ್ಷ 70 ಸಾವಿರ ಬಿಡಿಎ ನಿವೇಶನಗಳಿವೆ. ಹೌಸಿಂಗ್ ಸೊಸೈಟಿಯ 60 ಸಾವಿರ ನಿವೇಶನಗಳಿವೆ. 30ರಿಂದ 35 ಸಾವಿರ ಬಿಡಿಎ ಅಪ್ರೂವ್ಡ್ ಸೈಟ್‍ಗಳಿವೆ. ಉಳಿದ 17 ಲಕ್ಷ ಪ್ರಾಪರ್ಟಿಗಳನ್ನು ಕಾನೂನುಬಾಹಿರ ಎಂದಿದ್ದಾರೆ. ಇದೆಲ್ಲರ ಪರಿಣಾಮ ಕಳೆದ 3 ತಿಂಗಳಿನಿಂದ ಸುಮಾರು ನಾಲ್ಕೈದು ಸಾವಿರ ಕೋಟಿ ಆದಾಯ ಸರಕಾರದ ಕೈತಪ್ಪಿ ಹೋಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ಸಚಿವ ಕೃಷ್ಣಬೈರೇಗೌಡರು ಇದರ ಕಡೆ ಗಮನ ಕೊಡುತ್ತಿಲ್ಲ; ಬಿಬಿಎಂಪಿಯ ತುಷಾರ್ ಗಿರಿನಾಥ್, ಮನೀಷ್ ಮುದ್ಗಲ್ ಅವರು ತಮ್ಮದೇ ಆದ ರೀತಿಯಲ್ಲಿ ಐಡಿಯ ಕೊಡುತ್ತಿದ್ದು, ಕೃಷ್ಣಬೈರೇಗೌಡರು ತುತ್ತೂರಿ ಊದುತ್ತಿದ್ದು ಕೆಲಸ ಆಗುತ್ತಿಲ್ಲ; ಮಂಜೂರಾದ ವೈದ್ಯಕೀಯ ಸೀಟಿಗೆ ಹಣ ಕಟ್ಟಲು ಆಸ್ತಿ ಮಾರಾಟ ಮಾಡಲು ಆಗುತ್ತಿಲ್ಲ ಎಂದು ದೂರಿದರು. ಎನ್‍ಕಂಬರೆನ್ಸ್, ಸರ್ಟಿಫೈಡ್ ಕಾಪಿ ಸಿಗುತ್ತಿಲ್ಲ. ಎನ್‍ಕಂಬರೆನ್ಸ್ ಕೇಳಿದರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಡೌನ್ ಎನ್ನುತ್ತಾರೆ ಎಂದು ಟೀಕಿಸಿದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಟಿಪಿ ಬಾರದೆ ನೋಂದಣಿ ಕಾರ್ಯ ನಡೆಯುತ್ತಿಲ್ಲ.
ಕಾವೇರಿ 2 ಆ್ಯಪ್ ಬಂದ ಬಳಿಕ ಒಂದು ದಿನದ ಮುಂದೆ ಹಣ ಕಟ್ಟಬೇಕಾಗಿದೆ. ನಿಗದಿತ ಅವಧಿಯಲ್ಲಿ ಹೋದರೆ ಸಾಫ್ಟ್‍ವೇರ್ ಕೆಲಸ ಮಾಡದೆ ಸರ್ವರ್ ಡೌನ್ ಎಂಬ ಉತ್ತರ ಸಿಗುತ್ತದೆ. ನೋಂದಣಿ ನಡೆಯದೆ ಗೊಂದಲ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಕಳೆದ ಎರಡು ತಿಂಗಳುಗಳಿಂದ ಇ ಖಾತಾ ಹೆಸರಿನಲ್ಲಿ ಉಪ ನೋಂದಣಿ ಕಚೇರಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಕೆಲಸ ಸ್ಥಗಿತವಾಗಿದ್ದು, ಸಾಮಾನ್ಯ ಜನರು, ಬಡವರು ಕಷ್ಟಕಾಲದಲ್ಲಿ ಆಸ್ತಿ ಮಾರಾಟ ಮಾಡಲು ಅಥವಾ ಕೊಳ್ಳಲಾಗದ, ಬ್ಯಾಂಕಿನಲ್ಲಿ ಅಡಮಾನ ಮಾಡಿ ಸಾಲ ಪಡೆಯಲು, ಕೈಸಾಲಕ್ಕೆ ತೊಂದರೆ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದ ಕಂದಾಯ ಸಚಿವ ಕೃಷ್ಣಬೈರೇಗೌಡರು ಇಲಾಖೆ ಕೆಲಸ ಬಿಟ್ಟು ಬೇರೆ ಇಲಾಖೆಗಳ ಕೆಲಸಕ್ಕೆ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾವೇರಿ 2 ಸಾಫ್ಟ್‍ವೇರ್ ಹೆಸರಿನಲ್ಲಿ ಒಂದೊಂದು ಕೆಲಸಕ್ಕೆ ಒಂದೊಂದು ಸಾಫ್ಟ್‍ವೇರ್ ಅಭಿವೃದ್ಧಿ ಪಡಿಸಿದ್ದಾರೆ. ನೋಂದಣಿ ಕಾರ್ಯಕ್ಕೆ ಒಂದು ಸಾಫ್ಟ್‍ವೇರ್, ಎನ್‍ಕಂಬರೆನ್ಸ್‍ಗೆ ಒಂದು ಸಾಫ್ಟ್‍ವೇರ್, ದೃಢೀಕೃತ ಕಾಪಿ ಪಡೆಯಲು ಒಂದು ಸಾಫ್ಟ್‍ವೇರ್, ನಾಗರಿಕರು ಮನೆಯಿಂದ ಕಡತಗಳನ್ನು ಅಪ್‍ಲೋಡ್ ಮಾಡಲು ಮತ್ತೊಂದು ಸಾಫ್ಟ್‍ವೇರ್ ಅಭಿವೃದ್ಧಿಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ವಿವರಿಸಿದರು.
-
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
12 ಕೋಟಿ ರೂ ಡ್ರಗ್ಸ್ ಜಪ್ತಿ: ಗಂಧದ ನಾಡು 'ಗಾಂಜಾ ಬೀಡು' ಮಾಡಿದ ಕಾಂಗ್ರೆಸ್ ಸರ್ಕಾರ; R ಅಶೋಕ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು











Click it and Unblock the Notifications