ವೈದ್ಯಕೀಯ ಪ್ರವೇಶಕ್ಕೆ ನೀಟ್ ಪರೀಕ್ಷೆ ಮಾತ್ರ

Posted By:
Subscribe to Oneindia Kannada

ನವದೆಹಲಿ, ಮೇ 10 : ದೇಶದಾದ್ಯಂತ ವೈದ್ಯಕೀಯ (ಎಂಬಿಬಿಎಸ್‌) ಮತ್ತು ದಂತ ವೈದ್ಯಕೀಯ (ಬಿಡಿಎಸ್‌) ಕೋರ್ಸ್‌ಗಳ ಪ್ರವೇಶಕ್ಕಾಗಿ ಏಕರೂಪದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ.

ವೈದ್ಯಕೀಯ ಸೀಟು ಪಡೆಯಲು ನೀಟ್ ಪರೀಕ್ಷೆ ಮಾತ್ರ ಬರೆಯಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಇದರಿಂದಾಗಿ ಕರ್ನಾಟಕದಲ್ಲಿ ನಡೆಯುತ್ತಿದ್ದ ವೈದ್ಯಕೀಯ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆಗೆ ತೆರೆ ಬಿದ್ದಿದೆ. [ಇಂಜಿನಿಯರಿಂಗ್ ಪ್ರವೇಶಕ್ಕೆ ಮಾತ್ರ ಕಾಮೆಡ್-ಕೆ ಪರೀಕ್ಷೆ]

neet

ನೀಟ್ ಪರೀಕ್ಷೆಯಿಂದಾಗಿ ತಮ್ಮ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಏಕರೂಪದ ಪ್ರವೇಶ ಪರೀಕ್ಷೆಯನ್ನು ವಿರೋಧಿಸಿದ್ದ ಕರ್ನಾಟಕ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಹಾಗೂ ಖಾಸಗಿ ಕಾಲೇಜುಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಅನಿಲ್‌. ಆರ್‌. ದವೆ ನೇತೃತ್ವದ ನ್ಯಾಯಪೀಠ ವಜಾಗೊಳಿಸಿದೆ. [ಸಿಇಟಿ ಬರೆದು ಬಂದ ವಿದ್ಯಾರ್ಥಿಗಳು ಏನಂದ್ರು?]

ಮತ್ತೊಮ್ಮೆ ಪರೀಕ್ಷೆ ಬರೆಯಬಹುದು : ರಾಜ್ಯಗಳು ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 28ರಂದು ತಳ್ಳಿ ಹಾಕಿದ್ದ ಕೋರ್ಟ್, ಮೇ 1 ಮತ್ತು ಜುಲೈ 24ರಂದು ನೀಟ್ ಪರೀಕ್ಷೆ ನಡೆಸಬೇಕು ಎಂದು ಆದೇಶ ನೀಡಿತ್ತು. ಮೇ 1ರಂದು ನಡೆದ ಮೊದಲ ಹಂತದ ನೀಟ್ ಪರೀಕ್ಷೆಯಲ್ಲಿ ಪಾಲ್ಗೊಂಡವರು ಜುಲೈ 24ರಂದು ನಡೆಯುವ 2ನೇ ಪರೀಕ್ಷೆಯನ್ನೂ ಬರೆಯಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಗೊಂದಲದಿಂದಾಗಿ ಪರೀಕ್ಷೆ ಬರೆಯಲು ಸಾಧ್ಯವಾಗದವರು, ಸರಿಯಾಗಿ ಸಿದ್ಧತೆ ನಡೆಸದವರು ಜುಲೈ 24ರಂದು ನಡೆಯುವ ನೀಟ್ ಪರೀಕ್ಷೆ ಬರೆಯಬಹುದು. ಎರಡೂ ಪರೀಕ್ಷೆಗೆ ಹಾಜರಾದರೆ ನೀಟ್ -2 ಪರೀಕ್ಷೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು ಎಂದು ಕೋರ್ಟ್ ಆದೇಶ ನೀಡಿದೆ.

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಜುಲೈ 24 ರಂದು 2ನೇ ನೀಟ್ ಪರೀಕ್ಷೆ ನಡೆಸುವುದಾಗಿ ಹೇಳಿದೆ. ಅಗತ್ಯವಿದ್ದರೆ ಪರೀಕ್ಷಾ ದಿನಾಂಕವನ್ನು ಪರಿಷ್ಕರಿಸಲು ಕೋರ್ಟ್ ಒಪ್ಪಿಗೆ ನೀಡಿದೆ. ಇದರಿಂದಾಗಿ ಹಲವು ದಿನಗಳಿಂದ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All admissions in MBBS/BDS courses in government and private medical colleges will be done only on the basis of National Eligibility Entrance Test (NEET) said, Supreme court on Monday.
Please Wait while comments are loading...