Breaking: ವಿಜಯೇಂದ್ರಗೆ ಸಿಗದ ಎಂಎಲ್‌ಸಿ ಟಿಕೆಟ್: ಯಡಿಯೂರಪ್ಪ ಹೇಳಿದ್ದೇನು?
ಬೆಂಗಳೂರು, ಮೇ 25: ಬಹು ನಿರೀಕ್ಷೆ ಇಟ್ಟುಕೊಂಡಿದ್ದ ವಿಧಾನ ಪರಿಷತ್‌ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಟಿಕೆಟ್ ನೀಡದಿರುವ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
"ವಿಜಯೇಂದ್ರ ಅವರಿಗೆ ಟಿಕೆಟ್ ನೀಡದಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗ್ಯತ್ಯ ಇಲ್ಲ," ಎಂದು ಯಡಿಯೂರಪ್ಪ ಅವರು ಬುಧವಾರ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
"ವಿಜಯೇಂದ್ರ ಅವರಿಗೆ ಬೇರೆ ಬೇರೆ ಅವಕಾಶಗಳು ಇವೆ. ಸದ್ಯ ಅವರು ರಾಜ್ಯ ಬಿಜೆಪಿಯಲ್ಲಿ ಉಪಾಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ. ಮುಂದೆ ಹೈಕಮಾಂಡ್ ಬೇರೆ ಅವಕಾಶಗಳನ್ನು ಒದಗಿಸಬಹುದು." ಎಂದು ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಗೆ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರಾ, ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ನಿಯಮ ಇದೆಯಲ್ಲಾ? ಎಂಬ ಪ್ರಶ್ನೆಗೆ, "ಮುಂದಿನ ಚುನಾವಣೆಯ ಬಗ್ಗೆ ಈಗಲೇ ಯಾಕೆ ಚರ್ಚೆ," ಎಂದಷ್ಟೇ ಹೇಳಿದರು.












Click it and Unblock the Notifications