NIMHANS Suraksha: ಆತ್ಮಹತ್ಯೆ ತಡೆಗೆ 'ಸುರಕ್ಷಾ' ಕಾರ್ಯಕ್ರಮ ಆರಂಭಿಸಿದ ನಿಮ್ಹಾನ್ಸ್

ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು ಒಂದು ಮಿಲಿಯನ್ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ರಾಷ್ಟ್ರೀಯ ಅಪರಾಧ ವರದಿ ಬ್ಯೂರೋ (NCRB) ವರದಿ 2021 ರ ಪ್ರಕಾರ, ರಾಜ್ಯದಲ್ಲಿ ಈ ಅವಧಿಯಲ್ಲಿ 13,056 ಆತ್ಮಹತ್ಯೆಗಳು ವರದಿಯಾಗಿವೆ.

ಬೆಂಗಳೂರು, ಫೆಬ್ರವರಿ. 23: ಗ್ರಾಮೀಣ ಪ್ರದೇಶಗಳಲ್ಲಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಆತ್ಮಹತ್ಯೆ ತಡೆಗೆ ಹೊಸ ಕಾರ್ಯಕಮ ಜಾರಿಗೊಳಿಸಿದೆ. ಹಿಮಾಲಯ ವೆಲ್ನೆಸ್ ಕಂಪನಿಯ ಸಹಯೋಗದೊಂದಿಗೆ ಗುರುವಾರ ರಾಮನಗರದಲ್ಲಿ 'ಸುರಕ್ಷಾ' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಆತ್ಮಹತ್ಯೆ ಮತ್ತು ಸ್ವಯಂ ಹಾನಿಯನ್ನು ತಡೆಗಟ್ಟಲು ಈ ಕಾರ್ಯಕ್ರಮದಲ್ಲಿ ಸಮುದಾಯದ ಹಂತದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ನಿಮ್ಹಾನ್ಸ್ ಈ ಪ್ರಾಯೋಗಿಕ ಯೋಜನೆಯನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಚಾಲನೆ ನೀಡಿದೆ. ಮುಂದೆ ಮಂಗಳೂರು, ಹಾವೇರಿ ಮತ್ತು ಬಳ್ಳಾರಿಯಲ್ಲೂ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸ್ಥೆ ಮಾಹಿತಿ ನೀಡಿದೆ.

NIMHANS launches suicide prevention model ‘Suraksha

ಈ ಯೋಜನೆಯ ಅಡಿಯಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಆತ್ಮಹತ್ಯಾ ಯೋಚನೆಗಳು, ಪ್ರವೃತ್ತಿಯನ್ನು ಹೊಂದಿರುವ ಜನರನ್ನು ಗುರುತಿಸಲು ತರಬೇತಿ ನೀಡಲಾಗುತ್ತದೆ. ಬಳಿಕ ಅವರಿಗೆ ಸಲಹೆ ನೀಡಲಾಗುತ್ತದೆ. ಇದರ ಅಡಿಯಲ್ಲಿ ರೈತರು, ಕಾರ್ಮಿಕರು, ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿ ಸಮುದಾಯಗಳು, ಮಾಧ್ಯಮ ವೃತ್ತಿಪರರು ಮತ್ತು ಮಹಿಳಾ ಗುಂಪುಗಳನ್ನು ಒಳಗೊಂಡು ಇದರ ಪರಿಣಾಮವನ್ನು ನಿರ್ಣಯಿಸಲಾಗುತ್ತದೆ.

ನಿಮ್ಹಾನ್ಸ್‌ನ ಮನೋವೈದ್ಯಕೀಯ ಸಾಮಾಜಿಕ ಕಾರ್ಯ ವಿಭಾಗದ ಸಹ ಪ್ರಾಧ್ಯಾಪಕ ಮತ್ತು ಸುರಕ್ಷಾ ಯೋಜನೆಯ ಪ್ರಧಾನ ತನಿಖಾಧಿಕಾರಿ ಡಾ.ಅನಿಶ್ ವಿ ಚೆರಿಯನ್ ಮಾತನಾಡಿ, "ಭಾರತ ಸರ್ಕಾರವು ಆತ್ಮಹತ್ಯೆಯ ಸಮಸ್ಯೆಯನ್ನು ಪರಿಹರಿಸಲು ರಾಷ್ಟ್ರೀಯ ಆತ್ಮಹತ್ಯೆ ತಡೆ ತಂತ್ರವನ್ನು ಮುಂದಿಟ್ಟಿದೆ. ಸುರಕ್ಷಾ ಯೋಜನೆ ಕೂಡ ರಾಷ್ಟ್ರೀಯ ಆತ್ಮಹತ್ಯೆ ತಡೆ ತಂತ್ರ ಮತ್ತು 'ಲೈವ್ ಲೈಫ್' ನ WHO ಮಾರ್ಗಸೂಚಿಗಳಿಗೆ ಅನುಗುಣವಾಗಿರುವ ಸ್ಥಳೀಯ ಸಮುದಾಯ ಆಧಾರಿತ ಮಾದರಿ. ಆತ್ಮಹತ್ಯೆ ಪ್ರವೃತ್ತಿಯನ್ನು ಹೊಂದಿರುವ ದುರ್ಬಲ ಜನರನ್ನು ಗುರುತಿಸಲು ಮತ್ತು ಸಮಾಲೋಚನೆಯನ್ನು ಸುಲಭಗೊಳಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತರಬೇತಿ ನೀಡಲಾಗುತ್ತದೆ" ಎಂದಿದ್ದಾರೆ.

NIMHANS launches suicide prevention model ‘Suraksha

" ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು ಒಂದು ಮಿಲಿಯನ್ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ರಾಷ್ಟ್ರೀಯ ಅಪರಾಧ ವರದಿ ಬ್ಯೂರೋ (NCRB) ವರದಿ 2021 ರ ಪ್ರಕಾರ, ರಾಜ್ಯದಲ್ಲಿ ಈ ಅವಧಿಯಲ್ಲಿ 13,056 ಆತ್ಮಹತ್ಯೆಗಳು ವರದಿಯಾಗಿವೆ. ಇದು 2020 ರಿಂದ 6.5% ಹೆಚ್ಚಳವಾಗಿದೆ. ಪ್ರಾಥಮಿಕ ಹಂತವಾಗಿ, ರಾಜ್ಯದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಆತ್ಮಹತ್ಯಾ ತಡೆಗಟ್ಟುವಿಕೆಯ ಸ್ಥಳೀಯ ಸಂಶೋಧನಾ ಮಾದರಿಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದು ನಿಮ್ಹಾನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+