Nikhil Kumaraswamy: "ನೀರು ಕೊಡಿ ಇಲ್ಲವೇ ಪರಿಹಾರ ಕೊಡಿ ಅಥವಾ ರೈತರ ಸಾಲ ಮನ್ನಾ ಮಾಡಿ"
ರಾಯಚೂರು, ನವೆಂಬರ್ 26: ರಾಜ್ಯ ಸರ್ಕಾರದ ತಪ್ಪಿನಿಂದ ರೈತರ ಎರಡನೇ ಬೆಳೆಗಳಿಗೆ ನೀರು ಬಿಟ್ಟಿಲ್ಲ. ನೀರು ಬಿಟ್ಟಿಲ್ಲ ಅಂದ್ರೆ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು. ರೈತರಿಗೆ ಹತ್ತರಿಂದ ಹನ್ನೆರಡು ಕೋಟಿ ನಷ್ಟವಾಗಿದೆ. ಇದಕ್ಕೆ ಸರ್ಕಾರನೇ ಹೊಣೆ, ರೈತರ ಸಾಲಮನ್ನಾ ಮಾಡು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ತುಂಗಭದ್ರಾ 19 ಗೇಟ್ ಕೂಡಿಸಲು 1.8 ಕೋಟಿ. ಆದರೆ ಗೇಟ್ ಕೂರಿಸಿ ಒಂದು ವರ್ಷ ಕಳೆದರು ಈ ಸರ್ಕಾರ ಗುತ್ತಿಗೆದಾರರಿಗೆ ಹಣ ಕೊಟ್ಟಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು. ಸರ್ಕಾರ ಈಗ 32 ಗೇಟ್ ಗಳನ್ನ ಕೂರಿಸಲು 52 ಕೋಟಿಗೆ ಸರ್ಕಾರ ಗುತ್ತಿದೆ ನೀಡಿದೆ. ಈಗಾಗಲೇ 11 ಕೋಟಿ ಖರ್ಚು ಮಾಡಿದೆ ಅದ್ರೆ ಗುತ್ತಿಗೆದಾರರಿಗೆ ನಾಯಪೈಸೆ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಭಾರಿ ಭತ್ತಕ್ಕೆ ವೈರಸ್ ನಿಂದ ಇಳುವರಿ ಕಡಿಮೆಯಾಗಿದೆ. ರೈತರಿಗಾಗಿ ಪರಿಹಾರ ನೀಡಲು ಭಾರತ ಸರ್ಕಾರದ ನಿಧಿಯಿಂದ ಬಂದಿರುವ ಹಣದಲ್ಲಿ ರೈತರಿಗೆ ಒಂದು ರೂಪಾಯಿ ಕೊಟ್ಟಿಲ್ಲ. ಪಕ್ಕದ ತೆಲಂಗಾಣ ಸರ್ಕಾರ
ಮಾದರಿಯಲ್ಲಿ ಪ್ರತಿ ಕ್ವಿಂಟಲ್ ಗೆ 500 ರೂ ಪ್ರೋತ್ಸಾಹಧನ ನೀಡಬೇಕೆಂದು ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದರು.
ನಮ್ಮ ಎಲ್ಲಾ ಬೇಡಿಕೆಗಳನ್ನು 10 ದಿನಗಳ ಕಾಲ ಗಡುವು ನೀಡುತ್ತೇವೆ. ಇವತ್ತಿನ ಹೋರಾಟ ಆರಂಭ. ರೈತರಿಗೆ ನ್ಯಾಯ ಸಿಗುವವರೆಗೂ ಜೆಡಿಎಸ್ ಹೋರಾಟ ಮಾಡುತ್ತೇವೆ. ಈ ಹೋರಾಟವನ್ನು ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗ್ತೇವೆ. ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆಯಲ್ಲೇ ನಿಲ್ಲುತ್ತೇನೆ ಎಂದು ಹೇಳಿದರು.
ಕರ್ನಾಟಕದ ಜನರು ಕಾಂಗ್ರೆಸ್‌ಗೆ ಬಲವಾದ ಜನಾದೇಶವನ್ನು ನೀಡಿದರು ಕೂಡ ತಮ್ಮದೇ ಆದ ಮುಖ್ಯಮಂತ್ರಿಯನ್ನು ನಂಬಲು ಸಾಧ್ಯವಾಗದ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದು ನಿಂತಿದೆ.
ಮುಖ್ಯಮಂತ್ರಿ ಬದಲಾವಣೆಯ ಮಾತುಕತೆ ಪ್ರೀತಿಯಿಂದ ನಡೆಯುವುದಿಲ್ಲ; ಶಾಸಕರು ವಿಶ್ವಾಸ ಕಳೆದುಕೊಂಡಾಗ ಅದು ನೆಡೆಯುತ್ತದೆ. ಮತ್ತು ಶಾಸಕರು ವಿಶ್ವಾಸ ಕಳೆದುಕೊಂಡರೆ, ಸಿಎಂ ವಿಫಲರಾಗಿದ್ದಾರೆ, ಸರ್ಕಾರ ಕುಸಿದಿದೆ ಮತ್ತು ಪಕ್ಷವು ಈಗಾಗಲೇ ಐಸಿಯುನಲ್ಲಿದೆ ಎಂದರ್ಥ.
ತಮ್ಮದೇ ಮುಖ್ಯಮಂತ್ರಿಯನ್ನು ಬದಲಾಯಿಸಲು ಕಾಂಗ್ರೆಸ್ ಶಾಸಕರು ದೆಹಲಿಯ ಹೋಟೆಲ್‌ಗಳಲ್ಲಿ ಸಾಲುಗಟ್ಟಿ ನಿಂತಿರುವುದು ಯಾವುದೇ ಸರ್ಕಾರ ಪಡೆಯಬಹುದಾದ ದೊಡ್ಡ ವೈಫಲ್ಯದ ಪ್ರಮಾಣ ಪತ್ರವಾಗಿದೆ. ಮುಖ್ಯಮಂತ್ರಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ, ಸರ್ಕಾರ ದಿಕ್ಕನ್ನು ಕಳೆದುಕೊಂಡಿದೆ ಮತ್ತು ಕರ್ನಾಟಕವು 2.5 ವರ್ಷಗಳನ್ನು ಕಳೆದುಕೊಂಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.












Click it and Unblock the Notifications