ಸಹೋದರ ಪ್ರಜ್ವಲ್ ರೇವಣ್ಣ ಬಗ್ಗೆ ನಿಖಿಲ್ ಕುಮಾರಸ್ವಾಮಿ ಫೇಸ್‌ಬುಕ್ ಪೋಸ್ಟ್‌

ಬೆಂಗಳೂರು, ಜೂನ್ 22: 'ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ' ಎಂದು ಎಷ್ಟೆ ಬಾರಿ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಹೇಳಿದ್ದರೂ ಸಹ, ಇವರಿಬ್ಬರ ನಡುವೆ ವೈಮನಸ್ಯವೊಂದಿದೆ ಎಂಬ ಸುದ್ದಿ ಪದೇ-ಪದೇ ಮುನ್ನಲೆಗೆ ಬರುತ್ತದೆ.

ಅದರಂತೆಯೇ ಈ ಬಾರಿಯೂ ಸಹ ಈ ರೀತಿಯ ಸುದ್ದಿಯೊಂದು ಹರಿದಾಡುತ್ತಿತ್ತು. ಅದಕ್ಕೆ ಕಾರಣ ನಿಖಿಲ್ ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ಅವರಿಗೆ ಅಭಿನಂದನೆ ಸಲ್ಲಿಸಿಲ್ಲ, ಪ್ರಜ್ವಲ್ ರೇವಣ್ಣ ಗೆದ್ದಿರುವುದು ನಿಖಿಲ್ ಅವರ ಪಚನವಾಗಿಲ್ಲವೆನ್ನಲಾಗಿತ್ತು. ಆದರೆ ನಿಖಿಲ್ ಅವರು ಇದಕ್ಕೆಲ್ಲಾ ವಿರಾಮವಿಟ್ಟಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರು ಸಹೋದರ, ಸಂಸದ ಪ್ರಜ್ವರ್ ರೇವಣ್ಣ ಅವರ ಗೆಲುವಿನ ಬಗ್ಗೆ ಚುಟುಕಾದ ಫೇಸ್‌ಬುಕ್ ಪೋಸ್ಟ್‌ ಒಂದನ್ನು ಹಾಕಿದ್ದು, ಸಂಸದರಾಗಿ ಆಯ್ಕೆ ಆಗಿದ್ದಕ್ಕೆ ಶುಭ ಹಾರೈಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರ ಈ ಪೋಸ್ಟ್‌ಗೆ ಎರಡೇ ಗಂಟೆಗಳಲ್ಲಿ ಸಾವಿರಾರು ಮಂದಿ ಲೈಕ್ ಮಾಡಿದ್ದು, ನೂರಾರು ಮಂದಿ ಕಮೆಂಟ್ ಮಾಡಿದ್ದರು. ಹಲವರು ಶೇರ್ ಸಹ ಮಾಡಿದ್ದಾರೆ.

'ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ ಸಹೋದರ'

'ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ ಸಹೋದರ'

ಹಾಸನ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ‌ ಸಂಸತ್ತಿನಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕಾರ ಮಾಡಿದ ಆತ್ಮೀಯ ಸಹೋದರ ಪ್ರಜ್ವಲ್ ರೇವಣ್ಣನವರಿಗೆ ಶುಭ ಕೋರುತ್ತೇನೆ ಎಂದು ನಿಖಿಲ್ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

'ಸಂಸತ್ತಿನಲ್ಲಿ ಸಮರ್ಥವಾಗಿ ದನಿ ಎತ್ತುವೆಯೆಂಬ ನಂಬಿಕೆ ಇದೆ'

'ಸಂಸತ್ತಿನಲ್ಲಿ ಸಮರ್ಥವಾಗಿ ದನಿ ಎತ್ತುವೆಯೆಂಬ ನಂಬಿಕೆ ಇದೆ'

ನೆಲ, ಜಲ, ಭಾಷೆ, ರೈಲ್ವೆ ಯೋಜನೆ ಹಾಗೂ ನಮ್ಮ ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು‌ ಸಂಸತ್ತಿನಲ್ಲಿ ಸಮರ್ಥವಾಗಿ ಧ್ವನಿ ಎತ್ತುವ ಮೂಲಕ ಪ್ರಾದೇಶಿಕ ಹಿತಾಸಕ್ತಿಯನ್ನು ರಕ್ಷಿಸುವ ಪ್ರಜಾಸತ್ತಾತ್ಮಕ ಹೋರಾಟ ನಡೆಸಲಿದ್ದಾರೆ ಎನ್ನುವ ನಂಬಿಕೆ‌ ನನ್ನದು ಎಂದು ನಿಖಿಲ್ ಕುಮಾರಸ್ವಾಮಿ ಅವರು ಪ್ರಜ್ವಲ್ ಅವರ ಮೇಲೆ ಭರವಸೆ ವ್ಯಕ್ತಪಡಿಸಿದ್ದಾರೆ.

ಗೆದ್ದ ಪ್ರಜ್ವಲ್ ರೇವಣ್ಣ, ಸೋತ ನಿಖಿಲ್ ಕುಮಾರಸ್ವಾಮಿ

ಗೆದ್ದ ಪ್ರಜ್ವಲ್ ರೇವಣ್ಣ, ಸೋತ ನಿಖಿಲ್ ಕುಮಾರಸ್ವಾಮಿ

ಪ್ರಜ್ವಲ್ ರೇವಣ್ಣ ಅವರು ಹಾಸನ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಆದರೆ ಜೆಡಿಎಸ್ ಪಕ್ಷದಲ್ಲಿ ಅವರ ಆಂತರಿಕ ಪ್ರತಿಸ್ಪರ್ಧಿ ಎನಿಸಿಕೊಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸೋಲು ಕಂಡಿದ್ದಾರೆ. ಇದು ಇವರಿಬ್ಬರ ನಡುವೆ ಕಂದಕ ಉಂಟುಮಾಡಿದೆ ಎನ್ನಲಾಗಿತ್ತು. ಆದರೆ ನಿಖಿಲ್ ಅವರು ಅಭಿನಂದನೆ ಸಲ್ಲಿಸುವ ಮೂಲಕ ಅದಕ್ಕೆ ತೆರೆ ಎಳೆದಿದ್ದಾರೆ.

ನಿಖಿಲ್‌ ಕುಮಾರಸ್ವಾಮಿಗೆ ಪಕ್ಷದ ಮುಖ್ಯ ಜವಾಬ್ದಾರಿ?

ನಿಖಿಲ್‌ ಕುಮಾರಸ್ವಾಮಿಗೆ ಪಕ್ಷದ ಮುಖ್ಯ ಜವಾಬ್ದಾರಿ?

ಪ್ರಜ್ವಲ್ ರೇವಣ್ಣ ಅವರು ಲೋಕಸಭೆಗೆ ಆಯ್ಕೆ ಆಗಿರುವ ಕಾರಣ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಕ್ಷದ ಪ್ರಮುಖ ಜವಾಬ್ದಾರಿಯನ್ನು ಹೊರಿಸಲು ದೇವೇಗೌಡ ಅವರು ಚಿಂತಿಸಿದ್ದಾರೆ ಎನ್ನಲಾಗಿದ್ದು, ಜೆಡಿಎಸ್ ಯುವ ಘಟಕದ ಸಾರಥ್ಯವನ್ನು ದೇವೇಗೌಡ ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ ನೀಡಲಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+