Nice Road: ನೈಸ್ ರೋಡ್ ಗೃಹ ಸಚಿವ ಪ್ರಿಯಾಂಕ್ ಖರ್ಗೆ Vs ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ನಡುವೆ ವಾಕ್ಸಮರ

Nice Road: ನೈಸ್ ರೋಡ್ ಟೋಲ್‌ಗೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ನಡುವೆ ವಾಕ್ಸಮರ ಮುಂದುವರಿದಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕಾನೂನು ಮತ್ತು ಕೋರ್ಟ್ ಆದೇಶ ಪಾಲಿಸಬೇಕು ಎಂದು ವಿಪಕ್ಷಕ್ಕೆ ಬಿಟ್ಟಿ ಉಪದೇಶ ನೀಡುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ನೈಸ್ (BMICP) ಹಗರಣದ ಕುರಿತು ಸ್ವತಃ ಹೈಕೋರ್ಟ್ ನೀಡಿರುವ ಗಂಭೀರ ಆದೇಶಗಳನ್ನು ಜಾರಿಗೊಳಿಸದೇ ಇರುವುದು ಯಾವ ಜವಾಬ್ದಾರಿ?

ಹೈಕೋರ್ಟ್ ತನ್ನ ತೀರ್ಪಿನಲ್ಲಿ ನೈಸ್'ನ ಬಿಎಂಐಸಿ ಯೋಜನೆಯನ್ನು ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದೆಂದು ಉಲ್ಲೇಖಿಸಿ, ರಾಜ್ಯ ಸರ್ಕಾರ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಡೆದು ಖಾಸಗಿ ಹಿತಾಸಕ್ತಿಗಳನ್ನು ರಕ್ಷಿಸಿದೆ ಎಂದು ಕಟುವಾಗಿ ಹೇಳಿದೆ. ಜನರ ಪರವಾಗಿ ಈ ಅಕ್ರಮ ಟೋಲ್ ಸುಲಿಗೆಯ ವಿರುದ್ಧ ಧ್ವನಿ ಎತ್ತುತ್ತಿರುವ ಹೆಚ್.ಡಿ.ಕುಮಾರಸ್ವಾಮಿಯವರ ಕಾಳಜಿ ನಿಮಗೆ "ಬಾಯಿ ಚಪಲ"ವಾಗಿ ಕಾಣುತ್ತಿದ್ದರೆ, ನೈಸ್ ಹಗರಣಕೋರರನ್ನು ರಕ್ಷಿಸುತ್ತಿರುವ ನಿಮ್ಮ ಸರ್ಕಾರದ ನಡವಳಿಕೆಯನ್ನು ಏನೆಂದು ಕರೆಯಬೇಕು?

Nice Road

ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯವೇ? ಕಾಂಗ್ರೆಸ್ ಸರ್ಕಾರದ ಡಬಲ್ ಸ್ಟ್ಯಾಂಡರ್ಡ್: CC ಮತ್ತು OC (Commencement & Occupancy Certificate) ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದು ಎಂಬ ಕೋರ್ಟ್ ಆದೇಶವನ್ನು ಚಾಚೂತಪ್ಪದೆ ಕಾಂಗ್ರೆಸ್ ಸರ್ಕಾರ, ರಾತ್ರೋರಾತ್ರಿ ಜಾರಿಗೆ ತಂದು ಬಡವರು ಮತ್ತು ಮಧ್ಯಮ ವರ್ಗದವರು ಸಣ್ಣ ಮನೆ ಕಟ್ಟಿಕೊಳ್ಳುವುದಕ್ಕೂ ಅಡ್ಡಿಪಡಿಸುತ್ತಿದೆ. ಆದರೆ, ಕೋಟ್ಯಂತರ ರೂಪಾಯಿಗಳ 'ನೈಸ್ ಹಗರಣ'ದ (NICE Scam) ಬಗ್ಗೆ ಸ್ವತಂತ್ರ ತನಿಖೆ ಮತ್ತು ಫೊರೆನ್ಸಿಕ್ ಆಡಿಟ್ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿ ತಿಂಗಳಾದರೂ ಸರ್ಕಾರವೇಕೆ ಇನ್ನೂ ಕ್ರಮ ಕೈಗೊಂಡಿಲ್ಲ? ಬಡವರ ಮೇಲೆ ಕಾನೂನು ಪ್ರಯೋಗಿಸಲು ತೋರುವ ಆತುರವನ್ನು, ಶ್ರೀಮಂತ ನೈಸ್ ಕಂಪನಿಯ ಮೇಲೆ ಏಕೆ ತೋರುತ್ತಿಲ್ಲ ಎಂದು ಪ್ರಶ್ನೆ ಮಾಡಿದೆ.

ಮುಂದುವರಿದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಿಸಿ, ಒಸಿ ವಿಚಾರದಲ್ಲಿ ಕಟ್ಟುನಿಟ್ಟಿನ ನಿಯಮ ತಂದು ಬಡವರ ಕುತ್ತಿಗೆ ಹಿಸುಕುತ್ತಿದ್ದಾರೆ. ಆದರೆ, ಕರ್ನಾಟಕದ ಅತಿದೊಡ್ಡ 'ನೈಸ್ ಹಗರಣ'ದ ತನಿಖೆಗೆ ಆದೇಶಿಸಲು ಅವರ ಕೈಕಟ್ಟಿರುವ ಆ ದುಷ್ಟ ಶಕ್ತಿ ಯಾವುದು? ನೈಸ್ ಕಂಪನಿಯ ಜೊತೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮತ್ತು ಸಚಿವರ ಒಳ-ಒಪ್ಪಂದವೇನು? ಕೇವಲ ಬಡವರ ವಿಚಾರ ಬಂದಾಗ ಮಾತ್ರ ಕಾಂಗ್ರೆಸ್‌ಗೆ ಕಾನೂನು, ಹೈಕೋರ್ಟ್ ಆದೇಶ ನೆನಪಾಗುತ್ತದೆ. ಬಂಡವಾಳಶಾಹಿಗಳ ಮತ್ತು ಶ್ರೀಮಂತರ ವಿಚಾರ ಬಂದಾಗ ಅದೇ ಕಾನೂನನ್ನು ಗಾಳಿಗೆ ತೂರುವುದು‌ ಇದು ಯಾವ ನ್ಯಾಯ ? ಕಾಂಗ್ರೆಸ್ ಸರ್ಕಾರವು ಬಡವರ ವಿರೋಧಿ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ.

ಕಾನೂನು ಪಾಲನೆಯ ಪಾಠ ಹೇಳುವ ಮೊದಲು, ಹೈಕೋರ್ಟ್ ಆದೇಶಗಳನ್ನು ಜಾರಿಗೊಳಿಸಿ. ಕಾಂಗ್ರೆಸ್ ಸರ್ಕಾರದ ಈ ದ್ವಂದ್ವ ನೀತಿಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದೂ ಜೆಡಿಎಸ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+