13,194 ಎಕರೆ ಯೋಜನೆ ಚರ್ಚೆ: ಸಿಎಂ ಡಿಕೆ ಶಿವಕುಮಾರ್‌ಗೆ ಎಚ್.ಡಿ. ಕುಮಾರಸ್ವಾಮಿ ಸುದೀರ್ಘ ಪತ್ರ

ಬೆಂಗಳೂರು-ಮೈಸೂರು ಇನ್‌ಪ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆ (BMICP) ಅಕ್ರಮಗಳ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ವಿವರವಾದ ಪತ್ರ ಬರೆದಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈ ನೆಲದ ಕಾನೂನು ಹಾಗೂ Frame Work Agreement ಅನ್ನು ಉಲ್ಲಂಘಿಸಿ ನೈಸ್ ಸಂಸ್ಥೆ ಯಾವ ರೀತಿ ಅಕ್ರಮಗಳನ್ನು ಎಸಗಿದೆ ಎಂಬ ಬಗ್ಗೆ ಪತ್ರದಲ್ಲಿ ಸುದೀರ್ಘವಾಗಿ ವಿವರಿಸಿರುವುದಾಗಿ ಹೇಳಿದ್ದಾರೆ. ಭೂಸ್ವಾಧೀನ ಮಾಡಿಕೊಂಡು 23 ವರ್ಷಗಳೇ ಕಳೆದರೂ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ನೀಡದಿರುವುದರಿಂದ ಇವರೆಲ್ಲರೂ ಬೀದಿ ಪಾಲಾಗಿದ್ದಾರೆ ಎಂದೂ ಇದೇ ಸಂದರ್ಭದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ M/S Nandi Infrastructure Corridor Enterprises (M/S NICEL)ರವರೊಂದಿಗೆ ದಿನಾಂಕ: 03-04-1997ರಲ್ಲಿ Frame Work Agreement ಮೂಲಕ ಒಪ್ಪಂದ ಮಾಡಿಕೊಂಡಿರುವುದು ಸರಿಯಷ್ಟೆ.

NICE Project

ಈ Frame Work Agreement ಪ್ರಕಾರ ಕೆಲವು ಪ್ರಮುಖ ಯೋಜನೆಯನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಜಮೀನುಗಳ ಕೆ.ಐ.ಎ.ಡಿ.ಬಿ ವತಿಯಿಂದ ಭೂಸ್ವಾಧೀನಪಡಿಸಿಕೊಂಡು ಹಲವಾರು ಷರತ್ತುಗಳೊಂದಿಗೆ ಒಪ್ಪಂದ ಕೂಡ ಆಗಿರುತ್ತದೆ.

ಐದು ಉಪ ನಗರಗಳಿಗೆ ಭೂಮಿ ಹಂಚಿಕೆ

(ಅ) ಬಿಡದಿ ಬಳಿ ಕಾರ್ಪೋರೇಟ್ ಕೇಂದ್ರ -2992 ಎಕರೆಗಳು
(ಆ) ಬಿಡದಿ ಬಳಿ ವಾಣಿಜ್ಯ ಕೇಂದ್ರ -1848 ಎಕರೆಗಳು
(ಇ) ರಾಮನಗರ ಬಳಿ ಕೈಗಾರಿಕಾ ಕೇಂದ್ರ- 1660 ಎಕರೆಗಳು
(ಈ) ರಾಮನಗರ ಬಳಿ ಪಾರಂಪರಿಕಾ ಕೇಂದ್ರ- 2770 ಎಕರೆಗಳು
(ಉ) ಶ್ರೀರಂಗಪಟ್ಟಣದ ಬಳಿ ಪರಿಸರ ಪ್ರವಾಸಿ ಕೇಂದ್ರ- 4010 ಎಕರೆಗಳು
ಒಟ್ಟು: 13194 ಎಕರೆಗಳು

(2) 111 ಕಿ.ಮೀ. ಉದ್ದದ ಎಕ್ಸಪ್ರೆಸ್ ((Toll Plazas & Inter Changes ಒಳಗೊಂಡಂತೆ) 4528 ಎಕರೆಗಳು
(3) 41 ಕಿ.ಮೀ. ಉದ್ದದ Pheripperal Road - 2196 ಎಕರೆಗಳು
(4) 9.8 ಕಿ. ಮೀ. ಉದ್ದದ Link Road - 278 ಎಕರೆಗಳು
ಒಟ್ಟು - 20193ಎಕರೆಗಳು

ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (NICE) ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಕೆಲವೊಂದು ಪ್ರಮುಖ ನಿಯಮಗಳ ಉಲ್ಲಂಘನೆಯಾಗಿದೆ ಎಂದು ದೂರಲಾಗಿದೆ.

ಎಚ್.ಡಿ ಕುಮಾರಸ್ವಾಮಿ ಅವರು ಮಾಡಿರುವ ಪ್ರಮುಖ ಆರೋಪಗಳು

ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಮಾಲೀಕರು / ರೈತರಿಗೆ ಸಲ್ಲಬೇಕಾಗಿರುವ ಭೂಪರಿಹಾರ ನಿಗದಿಪಡಿಸಿದ ಅವಾರ್ಡ್‌ಗಳನ್ನು ಹೊರಡಿಸಿಲ್ಲ.

ಸಂಸ್ಥೆಯು ಭೂ ಬಳಕೆ ವಿಚಾರದಲ್ಲಿ ಕೆಲವೊಂದು ಪ್ರಮುಖ ನಿಯಮಗಳನ್ನು ಉಲ್ಲಂಘನೆ ಮಾಡಿದೆ.

ಟೋಲ್ ನಿಗದಿಯಲ್ಲೂ ಟೋಲ್ ದರವನ್ನು ಪರಿಷ್ಕರಿಸಿರುವುದು ಸರಿ ಇಲ್ಲ ಎಂದೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+