NH-206 - NH-69: ಕರ್ನಾಟಕಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭರ್ಜರಿ ಗುಡ್‌ನ್ಯೂಸ್: ನೆಟ್ಟಿಗರಿಂದ ಹೊಸ ಡಿಮ್ಯಾಂಡ್

ಕರ್ನಾಟಕಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕರ್ನಾಟಕದ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದಲ್ಲಿ NH-206 (ಹೊಸ NH-69) ನಲ್ಲಿರುವ 4 ಲೇನ್ ಶಿವಮೊಗ್ಗ ನಗರ ಬೈಪಾಸ್ ಸೇರಿದಂತೆ ವಿವಿಧ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ನಿತಿನ್ ಗಡ್ಕರಿ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ NH-206 (ಹೊಸ NH-69) ನಲ್ಲಿರುವ 4 ಲೇನ್ ಶಿವಮೊಗ್ಗ ನಗರ ಬೈಪಾಸ್‌ನ ಉಳಿದ 4.74 ಕಿ.ಮೀ. ನಿರ್ಮಾಣಕ್ಕಾಗಿ ₹466.74 ಕೋಟಿಗಳನ್ನು ಅನುಮೋದನೆ ನೀಡಲಾಗಿದೆ. ಅಲ್ಲದೆ ಇದರೊಂದಿಗೆ ಬೈಪಾಸ್ ಮಾಡಲಾಗುತ್ತಿರುವ ನಗರ ಭಾಗದೊಳಗಿನ ಅಸ್ತಿತ್ವದಲ್ಲಿರುವ NH ನಲ್ಲಿ ಮಹತ್ವದ ಸುಧಾರಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಈ ಭಾಗದಲ್ಲಿ ಒನ್‌ ಟೈಮ್‌ ಇಂಪ್ರೂವ್‌ಮೆಂಟ್‌ ಕೈಗೊಳ್ಳಲಾಗುವುದು ಎಂದೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.

NH-206 NH-69 Nitin Gadkari Announces Big Highway Boost for Karnataka Netizens Raise New Demands

ಈ ಯೋಜನೆಯು NH-69 ಕಾರಿಡಾರ್‌ನಲ್ಲಿ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಸ್ಥಳೀಯ ಸಂಚಾರದಿಂದ ಪ್ರತ್ಯೇಕ ಸಂಚಾರ ಮಾರ್ಗವನ್ನು ಕಲ್ಪಿಸುವ ಮೂಲಕ ಶಿವಮೊಗ್ಗದ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.

ಪೂರ್ಣಗೊಂಡ ನಾಲ್ಕು ಪಥದ ಬೈಪಾಸ್ ಜನರು ಮತ್ತು ಸರಕುಗಳ ವೇಗವಾದ ಮತ್ತು ಸುಗಮ ಚಲನೆಯನ್ನು ಸಕ್ರಿಯಗೊಳಿಸುತ್ತದೆ, ಪ್ರಯಾಣ ವಿಳಂಬವನ್ನು ಕಡಿಮೆ ಮಾಡುತ್ತದೆ, ರಸ್ತೆ ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಪ್ರಾದೇಶಿಕ ಆರ್ಥಿಕ ಚಟುವಟಿಕೆಯನ್ನು ಬೆಂಬಲಿಸುವಾಗ ಒಟ್ಟಾರೆ ಚಲನಶೀಲತೆಯನ್ನು ಹೆಚ್ಚಿಸುತ್ತದೆ ಎಂದೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಪ್ರಯಾಣದ ವಿಳಂಬ ಕಡಿಮೆಯಾಗುವುದರ ಜೊತೆಗೆ ರಸ್ತೆ ಸುರಕ್ಷತೆ ಸುಧಾರಿಸಲಿದೆ. ಒಟ್ಟಾರೆ ನಗರ ಸಂಚಾರ ವ್ಯವಸ್ಥೆ ಮತ್ತಷ್ಟು ಉತ್ತಮಗೊಳ್ಳಲಿದ್ದು, ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದಿದ್ದಾರೆ.

NH-206 - NH-69: ನೆಟ್ಟಿಗರು ಹೇಳಿದ್ದೇನು

ಕರ್ನಾಟಕದ ಜನರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಆದರೆ ಜನರು ಇನ್ನಷ್ಟು ಬೇಡಿಕೆಗಳನ್ನು ಇರಿಸಿದ್ದಾರೆ. ಅಲ್ಲದೆ ಇದರೊಂದಿಗೆ ವಿವಿಧ ಬಾಕಿ ಕಾಮಗಾರಿಗಳ ಪೂರ್ಣತೆಗೂ ಡಿಮ್ಯಾಂಡ್ ಮಾಡಲಾಗಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ Devanahalli Rising-North Bengaluru ಎನ್ನುವ ಖಾತೆಯಿಂದ ಕಾಮೆಂಟ್ ಮಾಡಲಾಗಿದ್ದು, ವಿವಿಧ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ. ಅದರಲ್ಲಿ

• STRR ಪಶ್ಚಿಮ
• ಪುಣೆ-ಬೆಂಗಳೂರು ಇ-ವೇ
• ಬೆಂಗಳೂರು-ಮಂಗಳೂರು ಇ-ವೇ (NH75)
• ಬೀದರ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಇ-ವೇ ಹಾಗೂ • STRR ಉತ್ತರ (ದಾಬಸ್‌ಪೇಟೆ-ಹೊಸಕೋಟೆ) 2+2 ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ದಯವಿಟ್ಟು ಈ ಮಾರ್ಗಗಳನ್ನು ವಿಸ್ತರಣೆ ಮಾಡುವ ಬಗ್ಗೆ ಯೋಜನೆ ರೂಪಿಸಿ ಎಂದು ಮನವಿ ಮಾಡಿದ್ದಾರೆ.

ಅಲ್ಲದೆ, ಮುಖ್ಯ ಹೆದ್ದಾರಿಯಲ್ಲಿ ಅಪಘಾತಗಳ ಸಮಯದಲ್ಲಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿಗಳಾದ್ಯಂತ ಸೇವಾ ರಸ್ತೆಗಳನ್ನು ನಿರ್ಮಿಸಿ. ಪ್ರತಿಯೊಂದು ಅಭಿವೃದ್ಧಿ ಹೊಂದಿದ ದೇಶವು ಮುಖ್ಯ ಹೆದ್ದಾರಿಯಿಂದ 20-25 ಮೀಟರ್ ದೂರದಲ್ಲಿ ಸೇವಾ ರಸ್ತೆಗಳನ್ನು ಹೊಂದಿದೆ ಎಂದೂ ಕೆಲವು ನೆಟ್ಟಿಗರು ಮನವಿ ಮಾಡಿದ್ದಾರೆ.

ಗೌರವಪೂರ್ವಕವಾಗಿ ಹೇಳುವುದಾದರೆ, ಪ್ರತಿಯೊಂದು ಘೋಷಣೆಯ ನಂತರವೂ ನೀವು ಮುಂಚಿತವಾಗಿಯೇ ಸಂಭ್ರಮಿಸುವ ಸಚಿವರಂತೆ ನನಗೆ ಕಾಣಿಸುತ್ತೀರಿ. ಆದರೆ ಇಲ್ಲಿ ಹುಬ್ಬಳ್ಳಿಯಲ್ಲಿ, ಬಹಳ ಸಮಸ್ಯೆ ಉಂಟುಮಾಡಿರುವ ಫ್ಲೈಓವರ್ ಕಾಮಗಾರಿಯಿಂದ ನಾವು ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಕಾಮಗಾರಿ ನಡೆಯುತ್ತಿರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಯೋಜನೆಯು ಸಂಪೂರ್ಣವಾಗಿ ಸ್ಥಗಿತಗೊಂಡಿರುವಂತೆ ಭಾಸವಾಗುತ್ತಿದೆ ಎಂದೂ ಹುಬ್ಬಳ್ಳಿ ಭಾಗದ ಜನ ಕಾಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+