Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಹೊಸ ವಾಹನ ಖರೀದಿ ಮಾಡುವವರಿಗೆ ತೆರಿಗೆ ಹೊರೆ!

ಬೆಂಗಳೂರು, ಮಾರ್ಚ್ 08: ಕರ್ನಾಟಕ ರಾಜ್ಯದಲ್ಲಿ ಹೊಸ ವಾಹನ ಖರೀದಿ ಮಾಡುವವರಿಗೆ ತೆರಿಗೆ ಹೊರೆ ಬೀಳಲಿದೆ. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ 2024ಕ್ಕೆ ರಾಜ್ಯಪಾಲರ ಅನುಮೋದನೆ ಸಿಕ್ಕಿದೆ.

ಈ ಕುರಿತು ವಿಶೇಷ ರಾಜ್ಯಪತ್ರದಲ್ಲಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಜಿ. ಶ್ರೀಧರ್ ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಆದೇಶ ಹೊರಡಿಸಿದ್ದಾರೆ. ಮಾರ್ಚ್‌ 6ರಂದು ರಾಜ್ಯಪಾಲರು ಅಧಿನಿಯಮಕ್ಕೆ ಅನುಮೋದನೆ ನೀಡಿದ್ದಾರೆ.

New Vehicles Registration Become More Expensive In Karnataka

ಹೊಸ ಕಾನೂನಿಯ ಅನ್ವಯ ಹೊಸದಾಗಿ ಖರೀದಿ ಮಾಡಿ ನೋಂದಣಿ ಮಾಡುವ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಶೇ 3ರಷ್ಟು ಹೆಚ್ಚುವರಿ ಸೆಸ್ ವಿಧಿಸಲಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳ ಮೇಲೆ ಆಜೀವ ತೆರಿಗೆಯನ್ನು ಸಹ ಪಾವತಿ ಮಾಡಬೇಕಿದೆ.

ನಿಯಮದ ಮಾಹಿತಿ: ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ. ಈ ಅಧಿನಿಯಮವನ್ನು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2024 ಎಂದು ಕರೆಯಲಾಗುತ್ತದೆ. ಇದು ಈ ಕೂಡಲೇ ಜಾರಿಗೆ ಬಂದಿದೆ.

ತಿದ್ದುಪಡಿ ಅಧಿನಿಯಮದ ಅನ್ವಯ ಇನ್ನುಮುಂದೆ ನಿರ್ಮಾಣ ಸಾಮಗ್ರಿ ವಾಹನಗಳ ಸಂದರ್ಭಗಳಲ್ಲಿ (ಕೇಂದ್ರ ಮೋಟಾರು ವಾಹನಗಳ ನಿಯಮಗಳು, 1989ರ 2ನೇ ನಿಯಮದ (ಸಿಎಬಿ) ಖಂಡದಲ್ಲಿ ಪರಿಭಾಷಿಸಿದಂತೆ) ಮತ್ತು ಏರ್ ಕಂಪ್ರೆಸರ್ ಮತ್ತು ಜನರೇಟರುಗಳನ್ನು ಅಳವಡಿಸಲಾಗಿರುವ ತೆರಿಗೆಯನ್ನು ನಿರ್ದಿಷ್ಟಪಡಿಸಿದ ದರಗಳಲ್ಲಿ ವಿಧಿಸತಕ್ಕದ್ದು.

ಮೋಟಾರು ವಾಹನಗಳ ಅಧಿನಿಯಮ, 1988 (1988ರ ಕೇಂದ್ರ ಅಧಿನಿಯಮ 59)ರ ಅಡಿಯಲ್ಲಿ ನೋಂದಣಿಯಾದ ಮೋಟಾರು ವಾಹನಗಳಿಗೆ 3ನೇ ಪ್ರಕರಣದಡಿಯಲ್ಲಿ ವಿಧಿಸಿದ ತೆರಿಗೆಗೆ ಹೆಚ್ಚುವರಿಯಾಗಿ, ಕರ್ನಾಟಕ ಮೋಟಾರು ಸಾರಿಗೆ ಮತ್ತು ಅದಕ್ಕೆ ಸಂಬಂಧಿತ ನೌಕರರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಯ ಉದ್ದೇಶಕ್ಕಾಗಿ ಶೇ 3 ರಷ್ಟು ಹೆಚ್ಚುವರಿ ಉಪಕರವನ್ನು ವಿಧಿಸತಕ್ಕದ್ದು.

ಅಲ್ಲದೇ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ, 2024 ಜಾರಿಗೆ ತರುವಾಗ, ಎಲೆಕ್ಟ್ರಿಕ್ ವಾಹನಗಳ ಮೇಲೆ ಲೈಫ್‌ಟೈಮ್ ಟ್ಯಾಕ್ಸ್ (ಆಜೀವ ತೆರಿಗೆ) ಪಾವತಿ ಮಾಡಬೇಕಿದೆ. ಮೋಟಾರು ಕಾರು, ಜೀಪು, ಓಮಿನಿ ಬಸ್, ಖಾಸಗಿ ಸೇವೆ ವಾಹನಗಳು ವಿದ್ಯುತ್ ಮೂಲಕ ಓಡುತ್ತಿದ್ದರೆ ಅದರ ದರ 25 ಲಕ್ಷಕ್ಕಿಂತ ಹೆಚ್ಚು ಇದ್ದರೆ ಶೇ 10ರಷ್ಟು ಲೈಫ್‌ ಟೈಮ್ ಟ್ಯಾಕ್ಸ್ ಪಾವತಿ ಮಾಡಬೇಕಿದೆ.

ಕರ್ನಾಟಕ ಸರ್ಕಾರ 2016ರಲ್ಲಿ ಎಲ್ಲಾ ಎಲೆಕ್ಟ್ರಿಕ್ ವಾಹನಗಳು ತೆರಿಗೆ ಪಾವತಿ ಮಾಡುವುದರಿಂದ ವಿನಾಯಿತಿ ನೀಡಿತ್ತು. ರಸ್ತೆ ತೆರಿಗೆ ವಿನಾಯಿತಿ ಮತ್ತು ನೋಂದಣಿಗೆ ಸಹ ಶೂನ್ಯ ತೆರಿಗೆ ಘೋಷಣೆ ಮಾಡಿತ್ತು. ಸದ್ಯ ದೇಶದಲ್ಲಿಯೇ ಅತಿ ಹೆಚ್ಚು ಅಂದರೆ ಶೇ 13 ರಿಂದ 20ರ ತನಕ ರಸ್ತೆ ತೆರಿಗೆ ಸಂಗ್ರ್ ಮಾಡುತ್ತಿರುವ ರಾಜ್ಯ ಕರ್ನಾಟಕವಾಗಿದೆ.

2023ರ ಬಜೆಟ್ ಮಂಡನೆ ಬಳಿಕ ರಾಜ್ಯದಲ್ಲಿ ಶಾಲೆ, ಕಾಲೇಜು ವಾಹನಗಳು, ಅತಿ ಭಾರದ ಸರಕು ಸಾಗಣೆ ವಾಹನಗಳು, ಮೋಟಾರ್ ಕ್ಯಾಬ್‌ಗಳ ತೆರಿಗೆಯನ್ನು ಹೆಚ್ಚಳ ಮಾಡಲಾಗಿತ್ತು. ಇದಕ್ಕೆ ಪೂರಕವಾಗಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಮಸೂದೆ-2023ಕ್ಕೆ ವಿಧಾನ ಮಂಡಲದ ಒಪ್ಪಿಗೆ ಪಡೆಯಲಾಗಿತ್ತು.

ಈಗ ಹೊಸದಾಗಿ ಪಾವತಿ ಮಾಡುವ ತೆರಿಗೆಯನ್ನು ಕರ್ನಾಟಕ ಮೋಟಾರು ಸಾರಿಗೆ ಮತ್ತು ಅದಕ್ಕೆ ಸಂಬಂಧಿತ ನೌಕರರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಯ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆ. ಈ ನಿಧಿ ಕುರಿತ ಮಸೂದೆಗೂ ರಾಜ್ಯಪಾಲರು ಕೆಲವು ದಿನಗಳ ಹಿಂದೆ ಅನುಮೋದನೆ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+