ಕಬ್ಬನ್ ಪಾರ್ಕ್‍ನಲ್ಲಿ ಹೊಸ ರೂಲ್ಸ್: ಪರಿಸರ ಉಳಿವಿಗಾಗಿ ಪ್ರತಿನಿತ್ಯ ಮೌನ ಪ್ರತಿಭಟನೆ
ಬೆಂಗಳೂರು, ಅಕ್ಟೋಬರ್ 03: ಕಬ್ಬನ್ ಪಾರ್ಕ್, ಬೆಂಗಳೂರಿನ ಸ್ವಚ್ಚಂದ ಮತ್ತು ಕಲುಷಿತಗೊಳ್ಳದ ಶುದ್ದಗಾಳಿ ಸಿಗುವ ಜಾಗ. ಈ ಪಾರ್ಕ್ ನಲ್ಲಿ ಸಾವಿರಾರು ಪ್ರಾಣಿ ಪಕ್ಷಿ ಸಂಕುಲ ವಾಸವಾಗಿವೆ. ಸಿಲಿಕಾನ್ ಸಿಟಿಯಲ್ಲಿ ಹಚ್ಚ ಹಸಿರಿನ ಹೊದಿಕೆಯಿಂದ ನಿಸರ್ಗದ ಮಧ್ಯೆ ಸ್ವಚ್ಚ ತಂಗಾಳಿಯಿಂದ ಕೂಡಿರುವ ಜಾಗ ಎಂದರೂ ತಪ್ಪಾಗಲಾರದು.
ದುಡಿದು ದಣಿದು ಬಂದವರಿಗೆ ರಿಲ್ಯಾಕ್ಸ್ ಮಾಡಲು ಇರುವ ಜಾಗ, ಮಕ್ಕಳಿಗೆ ಆಟ ಆಡಲು, ಕುಟುಂಬ ಸಮೇತ ಬಂದು ಕಾಲ ಕಳೆಯಲು ಇರುವ ಜಾಗ. ಆದರೆ ಸರ್ಕಾರದ ಇತ್ತೀಚಿನ ಒಂದು ನಿರ್ಧಾರ ಕಬ್ಬನ್ ಪಾರ್ಕ್ ಕಲುಷಿತಕ್ಕೆ ಕಾರಣವಾಗುತ್ತಾ ಎನ್ನುವ ಆತಂಕಕ್ಕೆ ದೂಡಿದ್ದು, ಪರಿಸರವಾದಿಗಳು ಕೂಡ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಬ್ಬನ್ ಪಾರ್ಕ್, ಲಾಲಾಬಾಗ್ ನಗರದ ಪರಿಸರವಾದಿಗಳ ಹಾಟ್ ಸ್ಪಾಟ್. ಕೇವಲ ಬೆಂಗಳೂರಿಗರು ಮಾತ್ರ ಅಲ್ಲದೇ ನಗರದ ಸುತ್ತಮುತ್ತ ಜಿಲ್ಲೆಯ ಜನರು ಕೂಡ ವಿಕೇಂಡ್, ರಜೆ ದಿನಗಳಲ್ಲಿ ಈ ಪಾರ್ಕ್‌ನ ಸ್ವಚ್ಚಂದ ವಾತಾವರಣ ಅನುಭವಕ್ಕಾಗಿ ಬರುತ್ತಾರೆ. ಕಾರಣ ವಿಕೇಂಡ್ ಗಳಲ್ಲಿ ಕಬ್ಬನ್ ಪಾರ್ಕ್ ಒಳಗೆ ವಾಹನ ಕಿರಿಕಿರಿ ಇಲ್ಲದೇ ಶಬ್ದ, ಮಾಲಿನ್ಯಗಳ ಕಿರಿಕಿರಿ ಇಲ್ಲ ಎನ್ನುವುದೇ ಪ್ರಮುಖ ಕಾರಣ. ಆದರೆ ಇನ್ಮುಂದೆ ವಿಕೇಂಡ್ ಮತ್ತು ರಜಾ ದಿನಗಳಲ್ಲೂ ವಾಹನ ಓಡಾಟಕ್ಕೆ ಅನುಮತಿ ನೀಡಲು ಸರ್ಕಾರ ಪ್ಲ್ಯಾನ್ ಮಾಡುತ್ತಿದೆ.
ಸದ್ಯ ಸರ್ಕಾರದ ಈ ಚಿಂತನೆ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದೆ. ವಾರದಲ್ಲಿ ಎರಡು ದಿನವಾದರೂ ಜನ ಇಲ್ಲಿ ಕಿರಿಕಿರಿ ಇಲ್ಲದೆ ನೆಮ್ಮದಿಯಿಂದ ಬಂದು ವಾತವರಣವನ್ನು ಅನುಭವಿಸುತ್ತಿದ್ದರು. ಆದರೆ ವಾರದ ಎಲ್ಲಾ ದಿನವು ವಾಹನ ಪಾರ್ಕಿಂಗ್ ಮತ್ತು ಓಡಾಟಕ್ಕೆ ಅವಕಾಶ ಕೊಟ್ಟರೆ ವೀಕೆಂಡ್‌ಗಳಲ್ಲಿ ಹೆಚ್ಚು ವಾಹನಗಳು ಬಂದು ಇಲ್ಲಿ ಪಾರ್ಕ್ ಮಾಡೋದಲ್ಲದೆ ಓಡಾಟ ಕೂಡ ಹೆಚ್ಚಾಗಲಿದೆ. ಇದರಿಂದ ಪ್ರಾಣಿ ಸಂಕುಲಕ್ಕೂ ತೊಂದರೆಯಾಗಲಿದೆ.
ಸದ್ಯ ಬೇರೆ ಬೇರೆ ಭಾಗಗಳಿಂದ ಬರುತ್ತಿರುವ ನೂರಾರು ಜಾತಿ ಪಕ್ಷಿಗಳು ಬೇರೆ ಕಡೆ ಹೋಗಿ ಪರಿಸರ ಹಾಳಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಈಗಾಗಲೇ ಪ್ರತಿಭಟನೆಗೆ ಮುಂದಾಗಿರುವ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ದಿನ ನಿತ್ಯ ಬೆಳಗ್ಗೆ ಮೌನ ಪ್ರತಿಭಟನೆ ಮೂಲಕ ಸರ್ಕಾರದ ಸೆಳೆಯಲು ಮುಂದಾಗಿದ್ದಾರೆ.

ವಾರದಲ್ಲಿ ಎರಡು ದಿನವಾದರೂ ವಾಹನ ಕಿರಿಕಿರಿ ಇಲ್ಲದೆ ಶಾಂತವಾಗಿರುವ ಕಬ್ಬನ್ ಪಾರ್ಕ್‌ನಲ್ಲಿ ಸರ್ಕಾರ ಏನಾದರೂ ಎಲ್ಲಾ ದಿನವು ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಟ್ಟರೆ. ನಗರದ ಇತರ ಕೆಲ ಭಾಗಗಳಂತೆ ಈ ಭಾಗ ಕೂಡ ಟ್ರಾಫಿಕ್‌ನಿಂದಾಗಿ ಕಿರಿಕಿರಿಯಿಂದ ಕೂಡಿರುತ್ತದೆ.












Click it and Unblock the Notifications