‘ಗೃಹಲಕ್ಷ್ಮೀ’ಗೆ ಮತ್ತೆರಡು ಕಂಡೀಷನ್ ಸೇರಿಸಿದ ರಾಜ್ಯ ಸರ್ಕಾರ?
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು 5 ಗ್ಯಾರಂಟಿಗಳು ಭಾರಿ ಪ್ರಭಾವ ಬೀರಿವೆ. ಅದರಲ್ಲೂ ಮಹಿಳೆಯರ ಮತ ಈ ಬಾರಿ ಕಾಂಗ್ರೆಸ್ ಪಾಲಾಗಲು 'ಗೃಹಲಕ್ಷ್ಮೀ' ಯೋಜನೆ ಗತ್ತು ದೊಡ್ಡದಿದೆ. ಆದ್ರೆ ರಾಜ್ಯ ಸರ್ಕಾರ 'ಗೃಹಲಕ್ಷ್ಮೀ' ಯೋಜನೆ ಮೂಲಕ ₹2000 ನೀಡಲು ದಿನಕ್ಕೊಂದು ರೂಲ್ಸ್ ಹಾಕುತ್ತಿರುವ ಆರೋಪ ಕೇಳಿಬಂದಿದೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಇದೇ ಗ್ಯಾರಂಟಿ ಯೋಜನೆಗಳನ್ನ ಹಿಡಿದು ವಾಗ್ದಾಳಿ ನಡೆಸುತ್ತಿವೆ. ಸರ್ಕಾರ ಕೂಡ ಗ್ಯಾರಂಟಿ ಜಾರಿ ವಿಚಾರ ಬಂದಾಗೆಲ್ಲಾ ಹೊಸ ರೂಲ್ಸ್ ಹೇಳುತ್ತಿದೆ. ಇದು ಅಸಮಾಧಾನಕ್ಕೆ ಕಾರಣವಾಗಿರುವ ಮಧ್ಯೆ 'ಗೃಹಲಕ್ಷ್ಮೀ' ಯೋಜನೆಗೆ ಮತ್ತೆರಡು ಹೊಸ ರೂಲ್ಸ್ ಸೇರಿವೆ ಎಂಬ ಅಸಮಾಧಾನ ಈಗ ಭುಗಿಲೆದ್ದಿದೆ. ನಮಗೂ 2 ಸಾವಿರ ರೂ. ತಿಂಗಳಿಗೆ ಸಿಗುತ್ತೆ ಅಂತ ಆಸೆಯಲ್ಲಿದ್ದ ಕೆಲವರಿಗೆ ಈ ರೂಲ್ಸ್ ಮೂಲಕ ಶಾಕ್ ಸಿಗುವ ಸಾಧ್ಯತೆಯೇ ಹೆಚ್ಚಾಗಿದೆ.

ಏನಿದು 'ಗೃಹಲಕ್ಷ್ಮೀ'ಗೆ ಹೊಸ ರೂಲ್ಸ್?
ಹೌದು ಹಿಂದೆ ರಾಜ್ಯ ಸರ್ಕಾರ ಹೇಳಿದ್ದಂತೆ ಗಂಡ ತೆರಿಗೆ ಅಥವಾ ಜಿಎಸ್‌ಟಿ ರಿಟರ್ನ್ಸ್ ಪಾವತಿ ಮಾಡುತ್ತಿದ್ದರೆ ಅಂತಹವರ ಪತ್ನಿಗೆ 'ಗೃಹಲಕ್ಷ್ಮೀ' ಯೋಜನೆ ಅನ್ವಯ ಆಗೋದಿಲ್ಲ. ಆದ್ರೆ ಈಗ ಮತ್ತೆರಡು ರೂಲ್ಸ್ 'ಗೃಹಲಕ್ಷ್ಮೀ'ಗೆ ಸೇರಿವೆಯಂತೆ. ಗೃಹಿಣಿಯ ಮಕ್ಕಳು ಮಗ ಅಥವಾ ಮಗಳು ತೆರಿಗೆದಾರರಾಗಿದ್ದರೆ, ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ರೆ ಅಂತಹ ತಾಯಂದಿರಿಗೆ 2 ಸಾವಿರ ರೂಪಾಯಿ ಗೃಹಲಕ್ಷ್ಮೀ ಯೋಜನೆ ಅಡಿ ಸಿಗೋದಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡುಗಳಿಗಾಗಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಯೋಜನೆ ಲಾಭ ಸಿಗಲ್ಲ. ಅವರನ್ನು ಮುಂದಿನ ದಿನಗಳಲ್ಲಿ 'ಗೃಹಲಕ್ಷ್ಮೀ'ಗೆ ಪರಿಗಣಿಸಲಾಗುತ್ತದೆ ಎನ್ನಲಾಗಿದೆ.
ಅರ್ಜಿ ರಿಜೆಕ್ಟ್ ಮಾಡುವಂತೆ ಇಲ್ಲ!
ಇನ್ನು ಜೂ. 15ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ, ಬೆಂಗಳೂರು ಒನ್ ನಂಥ ಬಿಲ್ ಪಾವತಿ ಕೇಂದ್ರಗಳಲ್ಲಿ ಹಾಗೂ ನಾಡ ಕಚೇರಿಗಳಲ್ಲಿ ಅರ್ಜಿ ಸ್ವೀಕಾರ ಮಾಡುತ್ತಾರೆ. ಜುಲೈ 15ರೊಳಗೆ ಫಲಾನುಭವಿಗಳು ತಮ್ಮ ಅರ್ಜಿ ಸಲ್ಲಿಸಬೇಕು. ಹಾಗೇ ಅರ್ಜಿಗಳನ್ನು ಪರಿಶೀಲಿಸದೆ ನಿರಾಕರಿಸುವಂತಿಲ್ಲ ಅಂತಾ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ ಸರ್ಕಾರ. ಆದರೆ 'ಗೃಹಲಕ್ಷ್ಮೀ' ಯೋಜನೆಗೆ ಈಗ ಮತ್ತೆರಡು ರೂಲ್ಸ್ ಸೇರ್ಪಡೆ ಆಗಿರುವುದು ಬೇಸರಕ್ಕೆ ವ್ಯಕ್ತವಾಗುತ್ತಿದೆ.

ಆಗಸ್ಟ್ 17-18ಕ್ಕೆ 'ಗೃಹಲಕ್ಷ್ಮೀ'ಗೆ ಚಾಲನೆ?
ಇಷ್ಟೆಲ್ಲದರ ನಡುವೆ 'ಗೃಹಲಕ್ಷ್ಮೀ' ಯೋಜನೆ ಯಾವಾಗ ಆರಂಭಿಸುತ್ತೇವೆ ಎಂಬ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. 'ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್ 17 ಅಥವಾ 18 ರಂದು ಬೆಳಗಾವಿಯಲ್ಲಿ ಚಾಲನೆ ನೀಡುವ ಕುರಿತು ಚರ್ಚಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 15 ರಿಂದ ಪ್ರಾರಂಭವಾಗಲಿದೆ. ಈ ಯೋಜನೆಗೆ ಆನ್‌ಲೈನ್ ನಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅಂತೆ ನಾಡಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಪ್ರತ್ಯೇಕ ಕೌಂಟರುಗಳನ್ನ ಸ್ಥಾಪಿಸಲು ತೀರ್ಮಾನಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ.
ಗೃಹ ಲಕ್ಷ್ಮಿ ಯೋಜನೆಯನ್ನು ಆಗಸ್ಟ್ 17 ಅಥವಾ 18 ರಂದು ಬೆಳಗಾವಿಯಲ್ಲಿ ಚಾಲನೆ ನೀಡುವ ಕುರಿತು ಚರ್ಚಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 15 ರಿಂದ ಪ್ರಾರಂಭವಾಗಲಿದೆ. ಈ ಯೋಜನೆಗೆ ಆನ್‌ಲೈನ್ ನಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅಂತೆಯೇ ನಾಡಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ…
— CM of Karnataka (@CMofKarnataka) June 8, 2023
ನೇರವಾಗಿ ಬ್ಯಾಂಕ್ ಖಾತೆಗೆ ದುಡ್ಡು!
ಹಾಗೇ 'ಅರ್ಜಿದಾರರು ರೇಷನ್ ಕಾರ್ಡ್ ಸಂಖ್ಯೆ, ಯಜಮಾನಿಯ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್ ಸಂಯೋಜನೆಯಾಗಿರುವ ಬ್ಯಾಂಕ್ ಖಾತೆಯ ವಿವರ ಒದಗಿಸಬೇಕು. ಈ ದಾಖಲೆ ಪ್ರತಿ ಆಫ್‌ಲೈನ್ ಅರ್ಜಿಗಳೊಂದಿಗೂ ಸಲ್ಲಿಸಬಹುದು. ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರ ಬ್ಯಾಂಕ್ ಖಾತೆಗೆ ನೆರವಿನ ಮೊತ್ತ ಜಮೆ ಆಗುತ್ತೆ. ಗೃಹಲಕ್ಷ್ಮಿ ಯೋಜನೆ ರಾಜ್ಯದ ಶೇ. 85 ಕ್ಕೂ ಹೆಚ್ಚು ಕುಟುಂಬಗಳನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ. ತೆರಿಗೆ ಪಾವತಿದಾರರಲ್ಲದ ಎಪಿಎಲ್ ಕಾರ್ಡುದಾರರಿಗೂ ಈ ಸೌಲಭ್ಯ ದೊರೆಯಲಿದೆ' ಎಂದು ಸಿಎಂ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ಮಾಹಿತಿ ನೀಡಲಾಗಿದೆ.
ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ನೆರವಿನ ಮೊತ್ತ ಜಮೆ ಆಗಲಿದೆ.
— CM of Karnataka (@CMofKarnataka) June 8, 2023
ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಶೇ. 85 ಕ್ಕೂ ಹೆಚ್ಚು ಕುಟುಂಬಗಳನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ. ತೆರಿಗೆ ಪಾವತಿದಾರರಲ್ಲದ ಎಪಿಎಲ್ ಕಾರ್ಡುದಾರರಿಗೂ ಈ ಸೌಲಭ್ಯ ದೊರೆಯಲಿದೆ.
- ಮುಖ್ಯಮಂತ್ರಿ @siddaramaiah
10/10…
ಒಟ್ನಲ್ಲಿ ರಾಜ್ಯ ಸರ್ಕಾರ ಚುನಾವಣೆಗೆ ಮೊದಲು ನೀಡಿದ್ದ ಬಹುನಿರೀಕ್ಷಿತ 'ಗೃಹಲಕ್ಷ್ಮೀ' ಜಾರಿಗೆ ಕೌಂಟ್‌ಡೌನ್ ಶುರುವಾಗಿದೆ. ಇದೇ ಸಂದರ್ಭದಲ್ಲಿ ಹೊಸ ಹೊಸ ರೂಲ್ಸ್ ಕುರಿತು ಕಿರಿಕ್ ಕೂಡ ಶುರುವಾಗಿದೆ. ಹೀಗಾಗಿ ಎಲ್ಲ ಗೊಂದಲ ಬಗೆಹರಿಯಲು ಸರ್ಕಾರ ನೇರವಾಗಿ ನಿಯಮ ತಿಳಿಸಬೇಕು ಎಂಬುದು ಜನರ ಒತ್ತಾಯ. ಈ ಸಮಸ್ಯೆಗಳನ್ನ ಹೊಸ ಸರ್ಕಾರವು ಹೇಗೆ ಬಗೆಹರಿಸುತ್ತೆ ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications