ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ಹೊಸ ಪದಾಧಿಕಾರಿಗಳ ನೇಮಕ
ಬೆಂಗಳೂರು, ಆಗಸ್ಟ್ 25: ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಅಶೋಕ್ ಗಸ್ತಿ, ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಒಟ್ಟು 16 ಮಂದಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
Recommended Video
ಉಪಾಧ್ಯಕ್ಷರ ಸ್ಥಾನಗಳಿಗೆ ಬೆಂಗಳೂರು ಕೇಂದ್ರ ಭಾಗದ ಗೋವಿಂದರಾಜ್, ಚಿತ್ರದುರ್ಗದ ಸಿದ್ದೇಶ್ ಯಾದವ್, ಶಿವಮೊಗ್ಗದ ಅಶೋಕಮೂರ್ತಿ, ಕಲಬುರಗಿಯ ಶರಣಪ್ಪ ತಳವಾರ, ಬೆಂಗಳೂರು ದಕ್ಷಿಣ ವಿಭಾಗದ ಎ.ಎಚ್. ಬಸವರಾಜು ಮತ್ತು ಮೈಸೂರು ಗ್ರಾಮಾಂತರ ಭಾಗದ ಭೋಜರಾಜ ಕರೋದಿ ಅವರನ್ನು ನೇಮಕ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ಮೈಸೂರು ಗ್ರಾಮಾಂತರ ಭಾಗದ ಸುರೇಶ್ ಬಾಬು, ವಿಜಯಪುರದ ವಿವೇಕಾನಂದ ಡಬ್ಬಿ ಅವರನ್ನು ನೇಮಿಸಲಾಗಿದೆ. ಹಾಸನ ಕೊಟ್ರೇಶ್, ಗದಗದ ರವಿದಂಡಿನ, ಹುಬ್ಬಳ್ಳಿಯ ಸತೀಶ್ ಶೇಜೆವಾಡಕರ್, ಉಡುಪಿಯ ವಿಠಲ ಪೂಜಾರಿ, ಬೆಳಗಾವಿಯ ಕಿರಣ ಜಾಧವ, ಕೊಪ್ಪಳದ ಉಮೇಶ್ ಸಜ್ಜನ್ ಅವರನ್ನು ನೇಮಿಸಲಾಗಿದೆ.

ಬೆಂಗಳೂರು ದಕ್ಷಿಣ ಭಾಗದ ಆರ್. ಗೋವಿಂದ ನಾಯ್ಡು ಅವರನ್ನು ಕೋಶಾಧ್ಯಕ್ಷರು ಮತ್ತು ಜಯದೇವ ಅವರನ್ನು ಕಾರ್ಯಾಲಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಅಶೋಕ್ ಗಸ್ತಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications