ತೆಲಂಗಾಣ ಎಫೆಕ್ಟ್: ಸಿಎಂ ಸಿದ್ದರಾಮಯ್ಯ 'ಸಾಫ್ಟ್' ನಡೆ

New information technology policy to welcome Andhra IT companies - Karnataka Siddaramaiah Cabinet
ಬೆಂಗಳೂರು, ಅ.18: ತೆಲಂಗಾಣ ಬಿರುಗಾಳಿಗೆ ಸಿಕ್ಕಿ ಆಂಧ್ರ ತತ್ತರಿಸುತ್ತಿದೆ. ಈ ಸುಸಂದರ್ಭವನ್ನು ಬಳಸಿಕೊಳ್ಳುಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜಾಣ ನಡೆಯಿಟ್ಟಿದೆ. ಸೀಮಾಂಧ್ರ ಜಂಜಾಟದಿಂದ ಬೆದರಿ ಹೈದರಾಬಾದಿನಿಂದ ಕಾಲ್ಕೀಳಲು ಅಲ್ಲಿನ ಐಟಿ ಕಂಪನಿಗಳು ಸಾಲುಗಟ್ಟಿ ನಿಂತಿವೆ.

ರಾಜಕೀಯ ನರಳಾಟವಿಲ್ಲದ ಸುರಕ್ಷಿತ ತಾಣಗಳನ್ನು ಅರಸುತ್ತಿರುವ ಈ ಕಂಪನಿಗಳಿಗೆ ರಾಜಧಾನಿ ಸೇರಿದಂತೆ ಕರ್ನಾಟಕದ ಕೆಲ ನಗರಗಳು ಪ್ರಶಸ್ತವಾಗಿ ಕಂಡಿವೆ. ಬೆಂಗಳೂರು-ಕರ್ನಾಟಕ ಬಿಟ್ಟರೆ ಈ ಕಂಪನಿಗಳಿಗೆ ಪೂನಾ next destination ಆಗಿದೆ. ಇದನ್ನು ಮನಗಂಡ ರಾಜ್ಯ ಸರಕಾರ ತುರ್ತಾಗಿ ಹೊಸ ಐಟಿ ನೀತಿಯನ್ನು ಜಾರಿಗೆ ತಂದಿದ್ದು, ಹೈದರಾಬಾದ್ ಕಂಪನಿಗಳಿಗೆ ರತ್ನಗಂಬಳಿ ಹಾಸಲು ತೀರ್ಮಾನಿಸಿದೆ.

ಅದರಂತೆ ಮುಂದಿನ 7 ವರ್ಷಗಳ ಅವಧಿಯಲ್ಲಿ ವಿಶ್ವ ಐಟಿ ಭೂಪಟದಲ್ಲಿ ಬೆಂಗಳೂರು ನಂಬರ್ ಒನ್ ಆಗಬೇಕು. Fortune-500 ಕಂಪನಿಗಳು ತನ್ನ ಕೇಂದ್ರವನ್ನು ಬೆಂಗಳೂರಿಗೆ ವಿಸ್ತರಿಸಬೇಕು ಎಂಬ ದೂರಗಾಮಿ ಗುರಿಯನ್ನೊಳಗೊಂಡ ನೂತನ ಐಟಿ ನೀತಿಗೆ ರಾಜ್ಯ ಸಚಿವ ಸಂಪುಟ ಗುರುವಾರ ಅಂಕಿತ ಹಾಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಸೇರಿದ್ದ ರಾಜ್ಯ ಸಚಿವ ಸಂಪುಟದ ಈ ನಿರ್ಧಾರ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿಬಿ ಜಯಚಂದ್ರ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಬೆಂಗಳೂರು 2ನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಕೇಂದ್ರವಾಗಿದೆ. ಮೊದಲ ಸ್ಥಾನಕ್ಕೆ ಏರುವುದು ಈ ನೂತನ ನೀತಿಯ ಗುರಿಯಾಗಿದೆ. ಹೈದಾರಾಬಾದ್ ಸೇರಿದಂತೆ ವಿಶ್ವದ ಯಾವುದೇ ಮೂಲೆಯಿಂದ ಕರ್ನಾಟಕಕ್ಕೆ ಆಗಮಿಸುವ ಐಟಿ ಕಂಪನಿಗಳಿಗೆ ಮಣೆ ಹಾಕಲಾಗುವುದು. ಆದರೆ ಈ ಕಂಪನಿಗಳು ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ನಗರಗಳತ್ತ ಹೊರಳಿದರೆ ವಿಶೇಷ ಮಾನ್ಯತೆ ನೀಡಲಾಗುವುದು.

ಬೆಂಗಳೂರನ್ನೇ ಆಯ್ಕೆ ಮಾಡಿಕೊಳ್ಳುವ ಐಟಿ ಕಂಪನಿಗಳಿಗೆ ಮುದ್ರಾಂಕ ಶುಲ್ಕ ವಿನಾಯಿತಿ, ವಿದ್ಯುತ್ ರಿಯಾಯಿತಿ ಇವೇ ಮುಂತಾದ ಸವಲತ್ತುಗಳನ್ನು ಕೊಡಲಾಗುವುದಿಲ್ಲ ಎಂದು ಹೊಸ ನೀತಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿಗೆ ಮತ್ತಷ್ಟು ಆಂಧ್ರ ಕಂಪನಿಗಳು ಬೆಂಗಳೂರಿಗೆ ಬಂದು ದಾಂಗುಡಿಯಿಡುತ್ತವೆ ಎಂಬ ಆತಂಕ ಸದ್ಯಕ್ಕೆ ದೂರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+