ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ವರ್ಗಾವಣೆಗಾಗಿ ನೂತನ ಕೌನ್ಸಿಲಿಂಗ್ ವೇಳಾಪಟ್ಟಿ ಪ್ರಕಟ

|
Google Oneindia Kannada News

ಬೆಂಗಳೂರು, ಜನವರಿ 14: 2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ, ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢ ಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು, ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗೆ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಈ ಸಂಬಂಧ ಪರಿಷ್ಕೃತ ವರ್ಗಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆಯು, ನ್ಯಾಯಾಲಯ ಪ್ರಕರಣದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಿದ್ದರಿಂದಾಗಿ ಪ್ರೌಢ ಶಾಲಾ ಶಿಕ್ಷಕರ ವೃಂದದ ವಿಭಾಗದೊಳಗಿನ ಮತ್ತು ಹೊರಗಿನ ವರ್ಗಾವಣೆ ಕೌನ್ಸಿಲಿಂಗ್ ಕ್ರಮಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.

New Counseling Schedule Announced For Teachers Transfer

ಮೈಸೂರು ವಿಭಾಗ ಮಟ್ಟದ ವರ್ಗಾವಣಾ ಪ್ರಾಧಿಕಾರಿಯವರು ಈಗಾಗಲೇ ಅನುಮತಿಯಂತೆ ವರ್ಗಾವಣೆ ಕೌನ್ಸಿಲಿಂಗ್ ಮುಂದುವರೆಸಲು ವೇಳಾಪಟ್ಟಿ ತಯಾರಿಸಿದ್ದಾರೆ. ಅಂತೆಯೇ, ಮುಂದಿನ ಹಂತದ ಶಿಕ್ಷಕರ ವರ್ಗಾವಣಾ ಕೌನ್ಸಿಲಿಂಗ್ ಕ್ರಮಗಳಿಗೆ ಪರಿಷ್ಕೃತ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
New Counseling Schedule Announced For Teachers Transfer

ಈಗ ವರ್ಗಾವಣೆಗೆ ನ್ಯಾಯಾಲಯವು ಅನುಮತಿಸಿರುವ ಕಾರಣ, ಮುಂದಿನ ಹಂತದ ವರ್ಗಾವಣಾ ಕೌನ್ಸಿಲಿಂಗ್ ಕ್ರಮಗಳನ್ನು ದಿನಾಂಕ 26-01-2022 ರಿಂದ 29-01-2022ರವರೆಗೆ ಖಾಲಿ ಹುದ್ದೆಗಳ ಇಂದೀಕರಣದ ಮೂಲಕ ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಗರಿಷ್ಠ 5 ವರ್ಷ ಪೂರ್ಣಗೊಳಿಸಿದ ಶಿಕ್ಷಕರನ್ನು ಕಡ್ಡಾಯವಾಗಿ ಶಾಲೆಗಳಿಗೆ ನಿಯುಕ್ತಿಗೊಳಿಸಿರಬೇಕಾಗುತ್ತದೆ.

New Counseling Schedule Announced For Teachers Transfer

ಜಿಲ್ಲೆಗಳಲ್ಲಿ ಕೆಲವಯ ವೃಂದದ ಖಾಲಿ ಹುದ್ದೆಗಳು ಲಭ್ಯವಿರುವುದಿಲ್ಲ. ಆದ್ದರಿಂದ 31-01- 2022ರವರೆಗೆ ಲಭ್ಯವಾಗುವ ಖಾಲಿ ಹುದ್ದೆಗಳನ್ನು ಇಂದೀಕರಿಸಲು ಉಪನಿರ್ದೇಶಕರಿಗೆ ಅವಕಾಶ ನೀಡಲಾಗಿದೆ. ದಿನಾಂಕ 04-02-2022ರಿಂದ ಕೌನ್ಸಿಲಿಂಗ್ ಆರಂಭಗೊಳ್ಳುವಂತೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.

English summary
The Karnataka Education Department has released a revised schedule for the general transfer of government teachers for the year 2020-21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X