ಬೆಂಗಳೂರು-ಕೊಯಮತ್ತೂರು ನಡುವೆ ಹೊಸ ರೈಲಿಗೆ ಚಾಲನೆ
ಕೊಯಮತ್ತೂರು, ಜೂನ್ 8: ಜನರು ಕಾತರದಿಂದ ಕಾಯುತ್ತಿದ್ದ ತಮಿಳುನಾಡಿನ ಕೊಯಮತ್ತೂರು ಮತ್ತು ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಇಂದು ಚಾಲನೆ ನೀಡಲಾಗಿದೆ.
ಕೊಯಮತ್ತೂರು-ಬೆಂಗಳೂರು ಉದಯ್ ಎಕ್ಸ್ ಪ್ರೆಸ್ ರೈಲಿಗೆ ಕೊಯಮತ್ತೂರಿನಲ್ಲಿ ರೈಲ್ವೇ ಖಾತೆ ರಾಜ್ಯ ಸಚಿವ ರಾಜನ್ ಗೊಹೇನ್ ಇಂದು ಚಾಲನೆ ನೀಡಿದರು.
ಇದು ಡಬಲ್ ಡೆಕ್ಕರ್ ಹವಾನಿಯಂತ್ರಿತ ರೈಲಾಗಿದ್ದು, ಮಿನಿ ಡೈನಿಂಗ್ ಟೇಬಲ್ ಕೂಡ ಇದರಲ್ಲಿದೆ. ಕಡು ಕಿತ್ತಳೆ ಮತ್ತು ಹಳದಿ ಬಣ್ಣದ ಈ ರೈಲು ಕೊಯಮತ್ತೂರು ಜಂಕ್ಷನ್ ನಿಂದ ಇಂದು ಬೆಳಿಗ್ಗೆ 10 ಗಂಟೆಗೆ ಹೊರಡಬೇಕಾಗಿತ್ತು. ಆದರೆ ಉದ್ಘಾಟನೆ ತಡವಾಗಿದ್ದರಿಂದ ತಡವಾಗಿ ಹೊರಟಿತು.

ಇಂದು ನಡೆದ ಮೊದಲ ಪ್ರಯಾಣದಲ್ಲಿ ಸುಮಾರು 150 ಜನರು ಪ್ರಯಾಣಿಸಿದರು.
ನಾಳೆಯಿಂದ ರೈಲು ಬೆಳಿಗ್ಗೆ 5.45ಕ್ಕೆ ಕೊಯಮತ್ತೂರು ನಿಲ್ದಾಣದಿಂದ ಬೆಂಗಳೂರಿಗೆ ಹೊರಡಲಿದ್ದು, ಮಧ್ಯಾಹ್ನ 12.40ಕ್ಕೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ 2.15ಕ್ಕೆ ರೈಲು ಬೆಂಗಳೂರಿನಿಂದ ಹೊರಡಲಿದ್ದು ರಾತ್ರಿ 9ಕ್ಕೆ ಕೊಯಮತ್ತೂರು ತಲುಪಲಿದೆ.
ಎರಡೂ ನಗರಗಳ ಮಧ್ಯೆ ನಿರಂತರ ಜನ ಸಂಪರ್ಕದ ಉದ್ದೇಶವನ್ನು ಇಟ್ಟುಕೊಂಡು ಈ ರೈಲಿಗೆ ಚಾಲನೆ ನೀಡಲಾಗಿದೆ.












Click it and Unblock the Notifications