ಚಿಕ್ಕಮಗಳೂರು 123, ರಾಮನಗರ 57, ಚಿತ್ರದುರ್ಗದಲ್ಲಿ 29 ಕೊರೊನಾ ಕೇಸ್ ಪತ್ತೆ

ಚಿಕ್ಕಮಗಳೂರು, ಆಗಸ್ಟ್ 24: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು 123 ಜನರಿಗೆ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3063ಕ್ಕೆ ಏರಿಕೆಯಾಗಿದೆ.

Recommended Video

      ತಮ್ಮನ ಅರ್ಹತೆ ಬಗ್ಗೆ ಮಾತನಾಡಿದ Priyanka Vadra... | Oneindia Kannada

      ಚಿಕ್ಕಮಗಳೂರು 34, ತರೀಕೆರೆ 25, ಕಡೂರು 46, ಕೊಪ್ಪ 3, ಅಜ್ಜಂಪುರ 8, ಮೂಡಿಗೆರೆಯಲ್ಲಿ 7 ಪ್ರಕರಣಗಳು ಪತ್ತೆಯಾಗಿದ್ದು, ಇಂದು 105 ಮಂದಿ ಕೊರೊನಾ ವೈರಸ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

      ಕೊರೊನಾ ಸೋಂಕಿನಿಂದ ಇಂದು ಮೂವರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮೃತಪಟ್ಟವರು 59 ಜನ ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇನ್ನು 1061 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 1941 ಜನ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ

      New 123 Coronavirus Infection Cases Reported In Chikkamagaluru District

      ರಾಮನಗರದಲ್ಲಿ 57 ಕೊರೊನಾ ಪಾಸಿಟಿವ್ ಕೇಸ್ ದೃಢ

      ರಾಮನಗರ ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆಗೊಂಡಿದ್ದು, ಇಂದು 57 ಕೊರೊನಾ ಸೋಂಕು ದೃಢಪಟ್ಟಿದ್ದು, ಚನ್ನಪಟ್ಟಣ ತಾಲ್ಲೂಕಿನಲ್ಲಿ- 21, ಮಾಗಡಿ ತಾಲ್ಲೂಕಿನಲ್ಲಿ-9, ಕನಕಪುರ ತಾಲ್ಲೂಕಿನಲ್ಲಿ-12, ರಾಮನಗರ ತಾಲ್ಲೂಕಿನಲ್ಲಿ-15 ಪಾಸಿಟಿವ್ ಕೇಸ್ ಪತ್ತೆಯಾಗಿವೆ.

      ಇಂದು ಜಿಲ್ಲೆಯಲ್ಲಿ ಇಬ್ಬರು ಕೊರೊನಾಗೆ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 33ಕ್ಕೆ ಏರಿದೆ. ಸೋಂಕಿತರು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಇಂದು 30 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಈವರೆಗೆ ಒಟ್ಟು 1853 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 8797 ಸಕ್ರಿಯ ಕೊರೊನಾ ಪ್ರಕರಣಗಳಿವೆ.

      ಚಿತ್ರದುರ್ಗ ಜಿಲ್ಲೆಯಲ್ಲಿ 29 ಜನರಿಗೆ ಕೋವಿಡ್ ಸೋಂಕು ಪತ್ತೆ

      ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 29 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,004 ಕ್ಕೆ ಏರಿಕೆಯಾದಂತಾಗಿದ್ದು, ಇಂದಿನ ವರದಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

      ಚಿತ್ರದುರ್ಗ ತಾಲ್ಲೂಕಿನಲ್ಲಿ 03, ಹಿರಿಯೂರು-03, ಚಳ್ಳಕೆರೆ-12, ಹೊಸದುರ್ಗ-09, ಮೊಳಕಾಲ್ಮುರು 01 ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ 01 ಸೇರಿದಂತೆ ಒಟ್ಟು 29 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

      ಚಿತ್ರದುರ್ಗ ಜಿಲ್ಲೆಯ ಹಲವೆಡೆ ಕೋವಿಡ್ ಗೆ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಸೋಮವಾರ 14 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+