ಅಪ್ಪು ಹೆಸರಲ್ಲಿ ರಾಜಕೀಯ ಮಾಡಿದ್ರೆ ಸರಿ ಇರಲ್ಲ: ಪ್ರತಾಪ್ ಸಿಂಹಗೆ ಜಾಡಿಸಿದ ಟ್ವೀಟ್ಟಿಗರು
ಬೆಂಗಳೂರು, ಮೇ 4: ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಹೆಸರನ್ನು ಎಳೆದು ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ಹಾಗೂ ಟ್ವೀಟಿಗರು ಪ್ರತಾಪ್ ಸಿಂಹ ಅವರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಗುರುವಾರ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರ ಮತಯಾಚಿಸಿ ಡಾ.ಶಿವರಾಜ್ ಕುಮಾರ್ ಅವರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದರು. 'ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ್ದು ವಿ.ಸೋಮಣ್ಣ, ಅವರನ್ನು ಮನಮೆಚ್ಚಿ ಶ್ಲಾಘಿಸಿದ್ದು ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ... ಅವರವ ಭಾವ ಭಕುತಿಗೆ...' ಎಂದು ಟ್ವೀಟ್ ಪೋಸ್ಟ್ ಮಾಡಿ ಅವರು ಅಸಮಾಧಾನ ಹೊರ ಹಾಕಿದ್ದರು.

ಇದಕ್ಕೆ ಕೆಂಡಾಮಂಡಲರಾಗಿರುವ ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅಭಿಮಾನಿಗಳು ಸಂಸದರಾದ ಪ್ರತಾಪ್ ಸಿಂಹಗೆ ಹಿಗ್ಗಮುಗ್ಗ ಜಾಡಿಸಿದ್ದಾರೆ. ಟ್ವಿಟ್ಟರ್ ಬಳಕೆದಾರರಾದ ಆಕಾಶ್ ಆರ್ ಪಾಟೀಲ್ ಅವರು ಅಲ್ರಯ್ಯ, ಅಪ್ಪು ಅವರ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿದ್ದು ಈ ರೀತಿ ಚುನಾವಣೆಯ ಸಂದರ್ಭದಲ್ಲಿ ಬಳಸಿಕೊಳ್ಳಲಿಕ್ಕಾ? ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ!
— Pratap Simha (@mepratap) May 4, 2023
ಅವರವ ಭಾವ ಭಕುತಿಗೆ... pic.twitter.com/AwsuZHzmHA
ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ ಸುದರ್ಶನ ಅನಿಕೇತನ ಅಣ್ಣ ತಮ್ಮಂದಿರ ಮಧ್ಯೆ ತಂದಿಡೋ ಶಕುನಿ ಆಗ್ಬಿಟ್ರಲ್ಲಾ! ಅಣ್ಣಾವ್ರ ಮಕ್ಕಳು ಒಗ್ಗಾಟ್ಟಾಗಿ ಇರ್ತಾರೆ. ಅವರ ಅಭಿಮಾನಿಗಳಿಗೆ ಸಿಗಬೇಡಿ ಅಪ್ಪಿತಪ್ಪಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದಲ್ಲದೆ ದೊಡ್ಡ ಮನೆ ಕುಟುಂಬ ಬಗ್ಗೆ ಮಾತನಾಡುವಾಗ ಹಾಗು ಶಿವರಾಜ್ ಕುಮಾರ್ ರವರ ವಿಚಾರದಲ್ಲಿ ಜವಾಬ್ದಾರಿ ಇರಲಿ ಇಲ್ಲವಾದರೆ ನಿಮ್ಮ ರಾಜಕೀಯ ಜೀವನ ಕುಂಠಿತವಾಗುತ್ತದೆ. ಆಸ್ಪತ್ರೆ ಪಕ್ಷದ ಹಣವಲ್ಲ ಹಾಗೂ ಇದರಲ್ಲಿ ಕಮಿಷನ್ ಎಷ್ಟು ತೆಗೆದುಕೊಂಡರು ಎಂದು ಸಚಿವರನ್ನು ಕೇಳಿ ಎಂದು ಮುನಿಯಪ್ಪ ಎಂಬ ಟ್ವಿಟ್ಟರ್ ಬಳಕೆದಾರರು ಹೇಳಿದ್ದಾರೆ.
ರಾಧಿಕಾ ಎಂಬ ಬಳಕೆದಾರರು ಅವರ ಹೆಸರಲ್ಲಿ ಆಸ್ಪತ್ರೆ ಕಟ್ಟಿಸಿದ್ದು ಶ್ಲಾಘನಿಯ. ದಯವಿಟ್ಟು ಅವರ ಹೆಸರನ್ನು ರಾಜಕೀಯದಲ್ಲಿ ಬಳಸಬೇಡಿ. ಇದು ಅವರ ವ್ಯಕ್ತಿತ್ವಕ್ಕೆ ಒಪ್ಪೋದಿಲ್ಲಾ. ಶಿವಣ್ಣ, ಸುದೀಪ್ ಸರ್ ಇಬ್ಬರೂ ಬೇಕಾದವರ ಪರ ಪ್ರಚಾರ ಮಾಡ್ತಾ ಇದ್ದಾರೆ. ಅವರಿಗೆ ಸರಿ ಅನಿಸಿದ್ದನ್ನು ಮಾಡ್ಲಿ ಬಿಡಿ ಎಂದು ಸಲಹೆ ನೀಡಿದ್ದಾರೆ. ಭರತ್ ಅಪ್ಪು ಎಂಬ ಬಳಕೆದಾರರು ರಾಜಕೀಯವನ್ನು ಮನೆ ಬಾಗಿಲ ಆಚೆ ಬಿಟ್ಟಿದ್ದವರು ನಮ್ಮ ಅಪ್ಪು ಬಾಸ್, ಅಂಥವರ ಹೆಸರನ್ನು ನಿಮ್ಮ ರಾಜಕೀಯ ಬೇಳೆ ಬೇಯಿಸಿ ಕೊಳ್ಳುವುದು ಅಕ್ಷಮ್ಯ ಅಪರಾಧ ಇದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬರೆದಿದ್ದಾರೆ.

ಕಿರಣ್ ಎಂಬ ಬಳಕೆದಾರರು, ಪುನೀತ್ ರಾಜ್ ಕುಮಾರ್ ಅವರ ಹೆಸರು ಬಳಸಿದ್ದಕ್ಕೆ ಇದನ್ನೇ ಹೇಳೋದು ತಂದಿಟ್ಟು ತಮಾಷೆ ನೋಡೋದು ಅಂತ. ಥು.. ವೋಟುಗೋಸ್ಕರ ಯಾವ ಲೆವೆಲ್ ಗೆ ಬೇಕಾದ್ರು ಇಳಿತೀರ ಅಲ್ವಾ.. ರಾಘಣ್ಣ ಚುನಾವಣೆ ಪ್ರಚಾರದ ಭಾಗವಾಗಿ ಹೇಳಿದ್ದಾರೆಯ ಅಂತ ಮೊದಲು ಹೇಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಗರ್ ಎಂಬ ಟ್ವಿಟ್ಟರ್ ಬಳಕೆದಾರ ಸಿದ್ದರಾಮಣ್ಣನ ಭಾವ ಭಕುತಿನೇ ಬೇರೆ , ಸೋಮಣ್ಣನ ಭಾವ ಭಕುತಿನೇ ಬೇರೆ. ಅಣ್ಣಾವರ ಮನೆ ಮೇಲೆ ನಿಮ್ಮ ಕೆಟ್ಟ ದೃಷ್ಟಿ ಬೀಳದೆ ಇರಲಿ. ಅಣ್ಣ ತಮ್ಮಂದಿರ ನಡುವೆ ತಂದಿಡೋ ಜನರ ಬೆತ್ತಲೆ ಜಗತ್ತನ್ನ ನಾವುಗಳು ಓದಿದ್ದು?? ನಾಚಿಕೆಗೇಡು ಎಂದು ಬೇಸರ ವ್ಯಕ್ಯಪಡಿಸಿದ್ದಾರೆ. ರೋಲೆಕ್ಸ್ ರೆಡ್ಡಿ ಎಂಬ ಟ್ವಿಟ್ಟರ್ ಬಳಕೆದಾರರು ನಿಮ್ಮಂಥ 40% ಗಳನ್ನ ಸೋಲಿಸಿ ರಾಜ್ಯ ರಕ್ಷಣೆ ಮಾಡೋ ಅವಶ್ಯಕತೆ ಇದೆ ಅಂತ ಶಿವಣ್ಣಂಗೂ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ.
ಡೇವಿಡ್ ಪೌಲ್ ಎಂಬುವವರು ಪುನೀತ್ ರಾಜ್‌ಕುಮಾರ್ ಅವರು ನಂದಿನಿಗೆ ಬ್ರಾಂಡ್ ಅಂಬಾಸಿಡರ್ ಮಾಡಿದ್ದಾರೆ. ನೀವು ಬಿಜೆಪಿ ನಂದಿನಿಯನ್ನು ಅಮುಲ್ ಜೊತೆ ವಿಲೀನಗೊಳಿಸುತ್ತಿದ್ದೀರಿ. ನೀವು ಈ ಬಗ್ಗೆ ಮಾತನಾಡಲು ನಾಚಿಕೆಯಾಗಲ್ವಾ ಎಂದು ಕೇಳಿದ್ದಾರೆ. ನಿಮ್ಮ ರಾಜಕೀಯ ತೆವಲಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನ ತರಬೇಡಿ. ಸುದೀಪ್ ಅವರು ಹೇಗೆ ಬೊಮ್ಮಯ್ಯ ಅವರಿಗೋಸ್ಕರ ರಾಜಕೀಯ ಪ್ರಚಾರ ಮಾಡಿದ್ರೋ ಹಾಗೆ ಶಿವಣ್ಣ ಸಿದ್ದರಾಮಯ್ಯ ಅವರಿಗೋಸ್ಕರ ಪ್ರಚಾರ ಮಾಡಿದ್ದಾರೆ ನಿಮ್ಮ ಪಕ್ಷಕ್ಕೆ ಮಾಡಿದರೆ ಸರಿ ಬೇರೆಯವರಿಗೆ ಮಾಡಿದರೆ ತಪ್ಪಾ...? ಎಂದು ಮನೋಜ್ ಪವಾರ್7 ಪ್ರಶಿಸಿದ್ದಾರೆ.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications