Get Updates
Get notified of breaking news, exclusive insights, and must-see stories!

ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ವಿಚಾರ: ಸರ್ಕಾರಕ್ಕೆ ಬಸವರಾಜ ಬೊಮ್ಮಾಯಿ ಹಾಕಿದ ಸವಾಲೇನು?

ಮಂಗಳೂರು, ಸೆಪ್ಟಂಬರ್ 14: ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದ 'ರಾಷ್ಟ್ರೀಯ ಶಿಕ್ಷಣ ನೀತಿ'ಯನ್ನು (National Educatio Policy) ಅಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕ. ಇದೀಗ ಇಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ನೀತಿಯನ್ನು ರದ್ದು ಮಾಡುವುದಾಗಿ ಹೇಳಿದೆ. ಈ ಸಂಬಂಧ ಬಿಜೆಪಿ ನಾಯಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

NEP ಬಗ್ಗೆ ಚರ್ಚೆ ನಡೆಸಿ ಅದರಲ್ಲಿ ತಪ್ಪುಗಳಿದ್ದರೆ ಸರಿಪಡಿಸೋಣ. ಯಾವ ಕಾರಣದಿಂದ ಎನ್‌ಇಪಿ ಬೇಡ ಎಂಬುದನ್ನು ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರು ಇನ್ನೂ ಹೇಳಿಲ್ಲ. ಉತ್ತರ ಭಾರತದ ಅಂಶವನ್ನು ಇದರಲ್ಲಿ ತುರುಕಲಾಗಿದೆ ಎನ್ನುತ್ತಾರೆ. ಅಂತಹ ಯಾವ ಅಂಶ ಈ ಶಿಕ್ಷಣ ನೀಡಿಯಲ್ಲಿದೆ ಎಂಬುವುದನ್ನು ಸಚಿವರು ತೋರಿಸಲಿ ಎಂದು ಅವರು ಸವಾಲು ಹಾಕಿದರು.

nep-cancel-row

ಮಂಗಳೂರಿನ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಮಂಗಳೂರು ವತಿಯಿಂದ ಗುರುವಾರ ನಡೆದ 'ರಾಷ್ಟ್ರೀಯ ಶಿಕ್ಷಣ ನೀತಿ-2020' ಕುರಿತು ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಎನ್‌ಇಪಿ ಸಂಪೂರ್ಣ ಬದಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

NEP ಅನ್ನು SEP (State Education Policy) ಮಾಡಬಹುದೇ ಹೊರತು ಅದರ ಅಂಶಗಳನ್ನು ತೆಗೆಯಲು ಸಾಧ್ಯವಿಲ್ಲ. ಅಷ್ಟು ಸುಲಭವೂ ಅಲ್ಲ. ಯಾಕೆಂದರೆ ಎನ್‌ಇಪಿಯಲ್ಲಿ ಮಕ್ಕಳ, ನಾಡಿನ ಭವಿಷ್ಯ ಅಡಗಿದೆ ಎಂದರು.

ರಾಜಕಾರಣ ಜನಪರವಾಗಿರಬೇಕು: ಬೊಮ್ಮಾಯಿ

ರಾಜಕಾರಣ ಯಾವತ್ತಿಗೂ ಜನಪರವಾಗಿರಬೇಕು. ರಾಜಕಾರಣದಿಂದಾಗಿ ರಾಜ್ಯ ಹಿಂದೆ ಹೋಗಬಾರದು. ಜನಾಂಗವನ್ನು ದೂರ ನೂಕುವಂತಾಗಬಾರದು. ಜನಪರವಾಗಿರದಿದ್ದರೆ ಅಂತಹ ರಾಜಕೀಯ ದೇಶ, ರಾಜ್ಯಕ್ಕೆ ಮಾರಕ ಎಂದು ಅಭಿಪ್ರಾಯ ಪಟ್ಟರು. ಎನ್‌ಇಪಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವಾಗ ಸಾಕಷ್ಟು ತಯಾರಿ ಮಾಡಿದ್ದೆವು.

nep-cancel-row

ಸುದೀರ್ಘ ಕಾಲ ಚಿಂತನೆ ಮಾಡಿ ತಯಾರಿಸಿದ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಸರಕಾರ ಬಂದ 10-15 ದಿನಗಳಲ್ಲಿಯೇ ರದ್ದು ಮಾಡುತ್ತೇವೆ ಎಂದು ಹೇಳಿರುವುದು ರಾಜಕೀಯ ದ್ವೇಷದ ನಿರ್ಧಾರವಾಗಿದೆ. ಯಾವುದೇ ವಿಷಯದಲ್ಲಿ ರಾಜಕಾರಣ ಮಾಡಬಹುದು.

ಶಿಕ್ಷಣದಲ್ಲಿ ರಾಜಕೀಯ ಬೇಡ

ಆದರೆ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು. ಒಂದು ವೇಳೆ ರಾಜಕೀಯ ಮಾಡಿದರೆ ಅದು ಮಕ್ಕಳ ಭವಿಷ್ಯದಲ್ಲಿ ಕಳ್ಳತನ ಮಾಡಿದಂತಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಲ್ಲಿಯವರೆಗೆ ದೇಶದಲ್ಲಿ ಇದ್ದ ಮೆಕಾಲೆ ಶಿಕ್ಷಣದಿಂದ ಅಕ್ಷರ ಓದು ಕಲಿಯಲು ಮಾತ್ರ ಸಾಧ್ಯವಾಗುತ್ತಿತ್ತು. ಆದರೆ, ಎನ್‌ಇಪಿಯಿಂದ ಸ್ವಂತ ಚಿಂತನೆಯ ಮೂಲಕ ಉನ್ನತ ಪರಿಣಾಮ ಕಾಣಲು ಅವಕಾಶವಿದೆ. ಮಕ್ಕಳಲ್ಲಿ ಪ್ರಯೋಗಶೀಲತೆ ಹೆಚ್ಚಲಿದೆ. ಆದರೆ, ಸಿದ್ದರಾಮಯ್ಯ ಅವರಿಗೆ ಪ್ರಯೋಗಶೀಲತೆ ಬೇಕಾಗಿಲ್ಲ. ಮಕ್ಕಳ ಭವಿಷ್ಯಕ್ಕೆ ಇದು ಬೇಕಾಗಿದೆ ಎಂದು ಅವರ ವಿವರಿಸಿದರು.

ಬೆಂಗಳೂರಿನ ಸೆಸ್ ನಿರ್ದೇಶಕ ಗೌರೀಶ್, ಮಾಜಿ ಎಂಎಲ್‌ಸಿ ಅರುಣ್, ಶಾರದಾ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಪ್ರೊ.ಎಂ.ಬಿ.ಪುರಾಣಿಕ್, ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಹೆಚ್ಚುವರಿ ನಿರ್ದೇಶಕ ಪ್ರೊ. ರಾಜಶೇಖರ್ ಹೆಬ್ಬಾರ್, ಮಂಗಳೂರು ವಿವಿ ನಿಕಟಪೂರ್ವ ಸಿಂಡಿಕೇಟ್ ಸದಸ್ಯರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಹಾಗೂ ಶಾಸಕರು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+