NEET PG Counselling 2024: ಇಂದಿನಿಂದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ, ವೇಳಾಪಟ್ಟಿ ಪ್ರಕಟ ವಿವರ
ಬೆಂಗಳೂರು, ಅಕ್ಟೋಬರ್ 07: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET 2024) ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ಪರೀಕ್ಷೆ ಬರೆದು, ಸೀಟು ಹಂಚಿಕೆಗಾಗಿ ಕಾಯುತ್ತಿರುವ ನೋಂದಾಯಿತ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗುಡ್ ನ್ಯೂಸ್ ಕೊಟ್ಟಿದೆ. ಇಂದಿನಿಂದ (ಅಕ್ಟೋಬರ್ 07) ಅಕ್ಟೋಬರ್ 18ರವರೆಗೆ ದಾಖಲೆ ಪರಿಶೀಲನೆ ಮತ್ತು ಕೌನ್ಸಿಲಿಂಗ್ (Karnataka NEET PG counselling 2024) ನಡೆಯಲಿದೆ ಎಂದು ತಿಳಿಸಿರುವ ಕೆಇಎ ವೇಳಾಪಟ್ಟಿ ಪ್ರಕಟಿಸಿದೆ.
ಪದವಿ ಮುಗಿಸಿ ಸ್ನಾತಕೋತ್ತರ ಪದವಿ ಪಡೆಯಲು ಇಚ್ಚಿಸಿರುವ ಅಭ್ಯರ್ಥಿಗಳು ನೋಂದಣಿ ಇಂದು ಅ.7ರಂದು ಕೊನೆಗೊಂಡಿದ್ದು, ಇಂದಿನಿಂದಲೇ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ, ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ. ರ‍್ಯಾಂಕಿಂಗ್ ಆಧಾರದಲ್ಲಿ ಯಾವ ದಿನಾಂಕದಂದು ಯಾರು ಯಾರಿಗೆ ಕೌನ್ಸೆಲಿಂಗ್ ನಡೆಯಲಿದೆ ಎಂಬ ಮಾಹಿತಿ, ವೇಳಾಪಟ್ಟಿಯಲ್ಲಿ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್ (https://cetonline.karnataka.gov.in/kea/) ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.

ಯಾರೆಲ್ಲ ಈ ಕೌನ್ಸೆಲಿಂಗ್ ಹಾಜರಾಗಲು ಆನ್‌ಲೈನ್ ನಲ್ಲಿ ಶುಲ್ಕ ಕಟ್ಟಿ ನೋಂದಣಿ ಮಾಡಿಕೊಂಡಿದ್ದಿರೋ ಅವರೆಲ್ಲರೂ ಈ ದಾಖಲಾತಿ ಪರಿಶೀಲನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.
ದಾಖಲಾತಿ ಪರಿಶೀಲನೆ ವೇಳೆ ಅಭ್ಯರ್ಥಿಗಳು ಖುದ್ದು ಹಾಜರಾಗಬೇಕು. ಕೋರ್ಸ್/ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಎಲ್ಲ ಅಸಲಿ (ಓರಿಜಿನಲ್) ದಾಖಲಾತಿಗಳನ್ನು ತರಬೇಕು. ಒಂದೇ ದಿನ ಮೂರು ಸಮಯದಲ್ಲಿ ದಾಖಲಾತಿ ಪರಿಶೀಲನೆ ನಡೆಯುತ್ತದೆ. ಆಯಾ ಸಮಯದಲ್ಲಿ ರ‍್ಯಾಂಕಿಂಗ್ ಹಾಗಾದರೆ ಯಾವ ದಿನಾಂಕದಂದು ಆಯಾ ರ‍್ಯಾಂಕಿಂಗ್ ಅಭ್ಯರ್ಥಿಗಳು ಇದ್ದರೆ ಸಾಕು.
ಕೌನ್ಸೆಲಿಂಗ್ ದಿನಾಂಕ, ಸಮಯ, ರ‍್ಯಾಂಕಿಂಗ್ ವಿವರ
* ಅಕ್ಟೋಬರ್ 7: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ, ರ‍್ಯಾಂಕಿಂಗ್ 1 ರಿಂದ 3500 ಅಭ್ಯರ್ಥಿಗಳು
* ಅಕ್ಟೋಬರ್ 8: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 3501 ರಿಂದ 13200 ಅಭ್ಯರ್ಥಿಗಳು
* ಅಕ್ಟೋಬರ್ 9: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 13201 ರಿಂದ 22200 ಅಭ್ಯರ್ಥಿಗಳು
* ಅಕ್ಟೋಬರ್ 10: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 22201 ರಿಂದ 32200 ಅಭ್ಯರ್ಥಿಗಳು
* ಅಕ್ಟೋಬರ್ 14: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 32201 ರಿಂದ 42200 ಅಭ್ಯರ್ಥಿಗಳು
* ಅಕ್ಟೋಬರ್ 15: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 42201 ರಿಂದ 55200 ಅಭ್ಯರ್ಥಿಗಳು
* ಅಕ್ಟೋಬರ್ 16: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 55201 ರಿಂದ 70500 ಅಭ್ಯರ್ಥಿಗಳು
* ಅಕ್ಟೋಬರ್ 17: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 70501 ರಿಂದ 86000 ಅಭ್ಯರ್ಥಿಗಳು
* ಅಕ್ಟೋಬರ್ 18: ಬೆಳಗ್ಗೆ 9 ಗಂಟೆಯಿಂದ ಮೂರು ಸುತ್ತು ಪರಿಶೀಲನೆ 86001 ರಿಂದ last rank ಅಭ್ಯರ್ಥಿಗಳು












Click it and Unblock the Notifications