ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ರಾಜು ಆಯ್ಕೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 31: ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ಎನ್ ರಾಜು ಅವರನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಡಿಜಿಪಿಯಾದ ಮೊದಲ ಮಹಿಳಾ ಅಧಿಕಾರಿ ನೀಲಮಣಿ

ಹಾಲಿ ಡಿಜಿಪಿಯಾಗಿರುವ ಆರ್‌.ಕೆ. ದತ್ತ ಅವರ ಅಧಿಕಾರಾವದಿ ಇಂದು (ಅ.31) ಮುಕ್ತಾಯವಾಗಲಿದ್ದು, ಇವರ ಸ್ಥಾನಕ್ಕೆ 1983 ಬ್ಯಾಚಿನ ಐಪಿಎಸ್ ಅಧಿಕಾರಿ ನೀಲಮಣಿ ರಾಜು ಅವರು ನೂತನ ಡಿಜಿಪಿಯಾಗಿ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ.

Neelamani N Raju has been appointed Director of Karnataka State Police

ಹಿರಿಯ ಐಪಿಎಸ್ ಅಧಿಕಾರಿಗಳಾದ ಎಂ.ಎನ್ ರೆಡ್ಡಿ, ಕಿಶೋರ್ ಚಂದ್ರ ಮತ್ತು ನೀಲಮಣಿ ರಾಜು ನಡುವೆ ಡಿಜಿಪಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು. ಆದರೆ, ಅಂತಿಮವಾಗಿ ಹಿರಿತನ ಮತ್ತು ಸೇವಾ ಜೇಷ್ಠತೆಯ ಆಧಾರದ ಮೇಲೆ ನೀಲಮಣಿ ರಾಜು ಅವರನ್ನು ಸರ್ಕಾರ ಆಯ್ಕೆ ಮಾಡಿದೆ.

25 ವರ್ಷಗಳ ಕಾಲ ಕೇಂದ್ರ ಸೇವೆಯಲ್ಲಿದ್ದ ನೀಲಮಣಿ ರಾಜು ಅವರು ಇತ್ತೀಚೆಗೆ ರಾಜ್ಯಕ್ಕೆ ಮರಳಿದ್ದರು. ಇವರು ಆಂತರಿಕ ವಿಭಾಗದ ಭದ್ರತೆಯ ಡಿಜಿಪಿ, ರಾಜ್ಯ ಗೃಹರಕ್ಷಕ, ಅಗ್ನಿಶಾಮಕ ದಳದ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Senior IPS officer Neelamani N Raju has been appointed as Director General / Inspector General of Police by Karnataka government.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ