ತೆಂಗು ಬೆಳೆಗಾರರಿಗೆ ಉಪಯೋಗವಾಗುವ ಅನೇಕ ಮಾಹಿತಿಗಳು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ, 28: ರೈತರಿಗೆ ಸರ್ಕಾರ ಅದೆಷ್ಟೋ ಯೋಜನೆಗಳನ್ನು ಕೊಡಮಾಡುತ್ತಲೇ ಇರುತ್ತದೆ. ಆದರೆ ಮಾಹಿತಿ ಬೆಳೆಗಾರರವರೆಗೆ ಹರಿದು ಬರುವುದೇ ಇಲ್ಲ. ಇಂಥದ್ದೇ ಯೋಜನೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ.

ಕೇಂದ್ರ ಸರ್ಕಾರ ತೆಂಗು ಬೆಳೆ ಮತ್ತು ತೆಂಗು ತೋಟಗಳ ಪುನಶ್ಚೇತನಕ್ಕೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ರೂಪಿಸಿದೆ. ತೆಂಗಿಗೆ ಅಂಟಿಕೊಂಡ ಕೆಲ ರೋಗಗಳು ಬೆಳೆಗಾರನ ನಿದ್ದೆ ಕೆಡಿಸಿದ್ದವು ಅವಕ್ಕೆ ಪರಿಹಾರ ಹುಡುಕುವ ಕೆಲಸವನ್ನು ಸರ್ಕಾರ ಮಾಡಿರುವುದು ಸ್ವಾಗತಾರ್ಹ.

ಕಲ್ಪವೃಕ್ಷವೆಂದೇ ಪ್ರಸಿದ್ದಿ ಪಡೆದ ತೆಂಗು ಕರಾವಳಿಯ ಪ್ರಮುಖ ತೋಟಗಾರಿಕಾ ಹಾಗೂ ವಾಣಿಜ್ಯ ಬೆಳೆ. ತೆಂಗು ಲಾಭದಾಯಕ ಮಾತ್ರವಲ್ಲ, ನಮ್ಮ ಆರೋಗ್ಯ ಮತ್ತು ಆಹಾರಕ್ಕೆ ಉಪಯುಕ್ತವಾದ ಮರ. ಇದನ್ನು ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮತ್ತು ಕೆಂಪು ಗೋಡು ಮಣ್ಣುಗಳಲ್ಲಿ ಉತ್ತಮವಾಗಿ ಬೆಳೆಯಬಹುದು. ಆದರೆ, ಕೆಲವೊಮ್ಮೆ ನಾನಾ ಸಮಸ್ಯೆಗಳು ತೆಂಗು ಬೆಳೆಗಾರರ ನಿದ್ದೆಗೆಡಿಸುತ್ತದೆ.[ತೆಂಗಿನಕಾಯಿ ಬೆಲೆ ಪ್ರಪಾತಕ್ಕೆ ಕುಸಿಯಲು ಕಾರಣಗಳೇನು?]

karnataka

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಶೇ. 30 ರಿಂದ 40 ರಷ್ಟು ತೆಂಗು ಬೆಳೆಯುವ ಪ್ರದೇಶವು ಕಡಿಮೆ ಮಳೆಯಿಂದ ಹಾಗೂ ಕೀಟ/ ರೋಗ ಬಾಧೆಯಿಂದ ಹಾನಿಗೊಳಗಾಗಿ ಮರಗಳು ಒಣಗುತ್ತಿವೆ ಅಥವಾ ಉತ್ಪಾದನಾ ಶಕ್ತಿಯನ್ನು ಕಳೆದುಕೊಳ್ಳುತ್ತದೆ.

ಈಗಾಗಲೇ ಕಾಂಡ ಸೋರುವ ರೋಗ , ಸುಳಿ ಕೊಳೆ ರೋಗ, ಗಾಮೋಸಿಸ್, ಮೊಗ್ಗು ಕಳೆರೋಗ, ಕಪ್ಪುತಲೆ , ಕಂಬಳಿ ಹುಳು ಇತ್ಯಾದಿ ಸಮಸ್ಯೆಗಳನ್ನು ಹಾಗೂ ಪ್ರಸ್ತುತ ನೀರಿನ ಕೊರತೆ ಮತ್ತು ಪೋಷಕಾಂಶ ಕೊರತೆ ಬೆಳೆಗಾರರನ್ನು ಮತ್ತಷ್ಟು ಹದಗೆಡಿಸಿದೆ. [ನಮ್ಮ ಶಾಸಕರಿಗೆ ಕೊಚ್ಚಿ ಕಂಪನಿಯಿಂದ ನೀರಾಭಾಗ್ಯ!]

ಇದಲ್ಲದೆ ನಿರಂತರವಾಗಿ ಏರುತ್ತಿರುವ ಬೆಲೆ ಉತ್ಪಾದನಾ ವೆಚ್ಚದಿಂದಾಗಿ ಬಹುತೇಕ ಕೃಷಿಕರು ತೆಂಗು ಬೆಳೆಯಿಂದ ದೂರ ಸರಿಯಲು ಚಿಂತಿಸುತ್ತಿದ್ದಾರೆ. ಹೀಗಾಗಿ, ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹಳೆಯ ಕೀಟ ಮತ್ತು ರೋಗ ಬಾಧಿತ ತೆಂಗಿನ ಮರಗಳಿಗೆ ತಕ್ಷಣ ಆರೈಕೆ ಮಾಡಲು ಮುಂದಾಗಿದೆ.

ಯೋಜನೆ ಉದ್ದೇಶ:
* ಹಳೆಯ ಮತ್ತು ಅನುತ್ಪಾದಕ ತೆಂಗಿನ ತೋಟಗಳ ಪುನಶ್ಚೇತನ[ಟಿಲ್ಲರ್ ಏರಿ ಭತ್ತದ ಗದ್ದೆಗಿಳಿದ ಸಚಿವ ಕೃಷ್ಣ ಬೈರೇಗೌಡ!]
* ಸಮಗ್ರ ಬೇಸಾಯ ಪದ್ದತಿಗಳನ್ನು ಅಳವಡಿಸಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ಉತ್ತೇಜನ
* ಮಿಶ್ರಬೇಳೆ , ಅಂತರ/ ಮಧ್ಯಂತರ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ
* ತೆಂಗಿನ ತೋಟಗಳಲ್ಲಿ ಮಳೆ ನೀರು ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣ
* ತೆಂಗು ಮತ್ತು ವೀಳ್ಯದೆಲೆ ಬೆಳೆಗಾರರ ಆರ್ಥಿಕ ಸ್ಥಿತಿ ಸುಧಾರಣೆ

ಅರ್ಜಿಗೆ ಬೇಕಾದ ದಾಖಲೆ
* ನಿಗದಿತ ನಮೂನೆಯಲ್ಲಿ ಅರ್ಜಿ
* ಪಹಣಿ ( ಆರ್ ಟಿಸಿಯಲ್ಲಿ ಬೆಳೆ ನಮೂದಾಗಿಲ್ಲದಿದ್ದರೆ ಬೆಳೆ ದೃಢೀಕರಣ ಪತ್ರ)
* ಮುಂಗಡ ಹಣ ಸಂದಾಯ ರಶೀದಿ
* ಸ್ವಯಂ ಘೋಷಣೆ ಪತ್ರ
* ಫಲಾನುಭವಿಯೊಂದಿಗೆ ತಾಕಿನ ಫೋಟೋ
* ಬ್ಯಾಂಕ್ ಖಾತೆಯ ಜೆರಾಕ್ಸ್ ಪ್ರತಿ
* ಪರಿಶೀಲನಾಧಿಕಾರಿಗಳ ದೃಢೀಕರಣ

ಸ್ಥಿತಿಗತಿ ಆಧಾರದಲ್ಲಿ ಪುನಶ್ಚೇತನ ಘಟಕ ಕಾರ್ಯವನ್ನು ಅನುಷ್ಠಾನ ಮಾಡಲಾಗುತ್ತದೆ. ಪುನಶ್ಚೇತನ ಘಟಕಕ್ಕೆ ಶೇ. 50 ರಷ್ಟು ಸಹಾಯಧನ ನೀಡಲಾಗುತ್ತದೆ.

ಪ್ರತಿ ಹೆಕ್ಟೇರ್‌ಗೆ ಒಟ್ಟೂ ಘಟಕದ ವೆಚ್ಚ 40 ಸಾವಿರ ಇದ್ದು, 20 ಸಾವಿರ( ಶೇ. 50) ರಂತೆ ಸಹಾಯಧನ ಲಭ್ಯವಿದೆ. ಕನಿಷ್ಟ 0.5 ಹೆಕ್ಟೇರ್‌ನಿಂದ ಗರಿಷ್ಟ ಎರಡು ಹೆಕ್ಟೇರ್ ವರೆಗೆ ಮಿತಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಶೇ. 90ರಂತೆ ಗರಿಷ್ಟ 36ಸಾವಿರ ಸಹಾಯಧನ ಲಭ್ಯವಿದೆ. ದ.ಕ ಜಿಲ್ಲೆಗೆ 125 ಹೆಕ್ಟೇರ್ ಪ್ರದೇಶದ ತೆಂಗಿನ ತೋಟಗಳ ಪುನಶ್ಚೇತನದ ಗುರಿಯನ್ನು ನಿಗದಿಪಡಿಸಲಾಗಿದೆ.

ಫಲಾನುಭವಿಗಳ ಅರ್ಹತೆ ಮತ್ತು ಆಯ್ಕೆ:
* ಫಲಾನುಭವಿಗಳ ಹೆಸರಿನಲ್ಲಿ ಜಾಮೀನು ಹೊಂದಿರಬೇಕು. ಜಂಟಿ ಖಾತೆ ಇದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು.
* ಅರ್ಹ ರೈತರು ನಿಗದಿತ ನಮೂನೆಯಲ್ಲಿ ಅರ್ಜಿ ನೀಡಬೇಕು. ಅರ್ಜಿ ಜತೆ ಕಡ್ಡಾಯ ಅರ್ಜಿದಾರರ ಎಪಿಕ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆ ನೀಡಬೇಕು.
* ಫಲಾನುಭವಿಗಳು ಮಣ್ಣಿನ ತೇವಾಂಶ ಸಂರಕ್ಷಣೆ , ಅಂತರ್ಜಲ ಮರುಪೂರಣಗೊಳಿಸುವ ಕಾರ್ಯಕ್ರಮ, ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಳ್ಳಲು ಸಿದ್ದವಿರಬೇಕು.
* ಫಲಾನುಭವಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಘಟಕವನ್ನು ಹಮ್ಮಿಕೊಂಡು ನಂತರ ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ರೈತ ಮಹಿಳೆಯರಿಗೆ ಆದ್ಯತೆ ಮೇರೆಗೆ ಅನುದಾನ ಮೀಸಲಿಡಲಾಗುತ್ತದೆ.

ಎಲ್ಲಿ ಮಾಹಿತಿ ಪಡೆಯಬೇಕು?
ರೈತರು ತಮ್ಮವ್ಯಾಪ್ತಿಯ ಗ್ರಾಮ ಪಂಚಾಯಿತಿ, ತಾಲೂಕು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಯೋಜನೆಯ ಮತ್ತಷ್ಟು ಮಾಹಿತಿಗಳನ್ನು ಪಡೆದುಕೊಳ್ಳಬಹುದು.ಹೆಚ್ಚಿನ ಮಾಹಿತಿಗೆ ಯೋಜನೆಯ ವೆಬ್ ತಾಣಕ್ಕೆ ಭೇಟಿ ನೀಡಬಹುದು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rashtriya Krishi Vikas Yojana is a special Additional Central Assistance Scheme which was launched in August 2007 to orient agricultural development strategies, to reaffirm its commitment to achieve 4 per cent annual growth in the agricultural sector during the 11th plan. How Karnataka farmers can understand, make use of this scheme? Explained.
Please Wait while comments are loading...