ಇಂಧನ ಬೆಲೆ ಏರಿಕೆ ಖಂಡಿಸಿ ಜುಲೈ 20ರಿಂದ ಲಾರಿ ಮುಷ್ಕರ

Recommended Video

      ಜುಲೈ 20ರಿಂದ ರಾಷ್ಟ್ರವ್ಯಾಪಿ ಅನಿರ್ಧಿಷ್ಟಾವಧಿ ಲಾರಿ ಮುಷ್ಕರ | Oneindia Kannada

      ಬೆಂಗಳೂರು, ಜುಲೈ 14: ಅವೈಜ್ಞಾನಿಕ ಇಂಧನ ಬೆಲೆ ಏರಿಕೆ ಖಂಡಿಸಿ, ಟ್ರಕ್ ಹಾಗೂ ಲಾರಿ ಮಾಲೀಕರ ಸಂಘಟನೆಗಳು ಜುಲೈ20ರಿಂದ ಅನಿರ್ಧಿಷ್ಟಾವಧಿ ಕಾಲ ಮುಷ್ಕರ ಹೂಡಲು ಕರೆ ನೀಡಿವೆ.

      ಪೆಟ್ರೋಲ್ ಗೆ ರಾಷ್ಟ್ರವ್ಯಾಪಿ ಏಕರೂಪ ದರ ನಿಗದಿ, ತ್ರೈಮಾಸಿಕ ಪರಿಶೀಲನಾ ಪದ್ದತಿ, ಟೋಲ್ ಮುಕ್ತ ಭಾರತಕ್ಕೆ ಆಗ್ರಹಿಸಿ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘದ ವತಿಯಿಂದ ಜುಲೈ 20ರಿಂದ ದೇಶದೆಲ್ಲೆಡೆ ವಾಣಿಜ್ಯ ವಾಹನಗಳನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟ ಅವಧಿ ಮುಷ್ಕರ ಆರಂಭಗೊಳ್ಳಲಿದೆ.

      ಹಾಲು, ಔಷಧಿ, ತರಕಾರಿ, ಪೆಟ್ರೋಲ್, ಇಂಧನ ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ವಾಹನಗಳನ್ನು ದೇಶಾದ್ಯಂತ ಸ್ಥಗಿತಗೊಳಿಸಿ, ಮುಷ್ಕರ ಮಾಡಲಾಗುತ್ತದೆ ಎಂದು ಕರ್ನಾಟಕ ಭಾಗದ ಪದಾಧಿಕಾರಿ ಸೈಯದ್ ಸೈಫುಲ್ಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

      ಥರ್ಡ್ ಪಾರ್ಟಿ ವಿಮಾ ಪಾಲಿಸಿ ದರ ಕಡಿತ ಗೊಳಿಸುವುದು, ಪಾರದರ್ಶಕತೆ ಕಾಯ್ದುಕೊಳ್ಳು ವುದು, ಟಿಡಿಎಸ್ ರದ್ದುಗೊಳಿಸುವುದು, ಪೂರ್ವಭಾವಿ ಆದಾಯ ಕಾಯ್ದೆ ಪರಿವರ್ತಿಸಲು ಆಗ್ರಹಿಸಲಾಗುತ್ತದೆ.

      Nationwide Lorry Trukers indefinite Strike from July 20

      ಈ-ವೇ ಬಿಲ್ ಕುರಿತು ಎದುರಾಗಿರುವ ಸಮಸ್ಯೆ ಪರಿಹರಿಸಬೇಕಾಗಿದೆ. ಪ್ರವಾಸಿ ವಾಹನ ಹಾಗೂ ಬಸ್ ಗಳಿಗೆ ರಾಷ್ಟ್ರೀಯ ಪರವಾನಗಿ ನೀಡಬೇಕು, ಜವಾಹರ ಲಾಲ್ ನೆಹರು ಪೋರ್ಟ್ ಟ್ರಸ್ಟ್ ನೂತನವಾಗಿ ಪ್ರಕಟಿಸಿರುವ ನೇರ ಫೋರ್ಟ್ ಡೆಲಿವರಿ ಪದ್ದತಿ ಯನ್ನ ರದ್ದುಗೊಳಿಸುವುದು, ಬಂದರುಗಳಲ್ಲಿ ಆಗುತ್ತಿರುವ ದಟ್ಟಣೆ ಸುಗಮಗೊಳಿಸಬೇಕೆಂದು ಒತ್ತಾಯಿಸಲಾಗುತ್ತದೆ.

      ಅನಿರ್ಧಿಷ್ಟ ಅವಧಿ ಮುಷ್ಕರದ ಕುರಿತು ಪೂರ್ವಭಾವಿ ಸಭೆ ನಡೆಯುತ್ತಿದ್ದು, ಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಷಣ್ಮುಖಪ್ಪ ಅಧ್ಯಕ್ಷತೆ
      ವಹಿಸುವರು. ಸಭೆಯಲ್ಲಿ ಲಾರಿ, ಟ್ಯಾಕ್ಸಿ, ಟ್ರಕ್, ಮಿನಿಗೂಡ್ಸ್, 3 ಮತ್ತು 4 ಚಕ್ರಗಳ ವಾಹನಗ ಮಾಲೀಕರು ಪಾಲ್ಗೊಳ್ಳುವರು ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+