ಕೇಂದ್ರ ಬಜೆಟ್ ಮಂಡನೆ ; ಕರ್ನಾಟಕಕ್ಕೆ ಸಿಹಿ ಸುದ್ದಿ: ಆರ್ ಅಶೋಕ್ ಹೇಳಿದ್ದೇನು?
ಹಾಸನ, ಫೆಬ್ರವರಿ 01: ಕೇಂದ್ರ ಬಜೆಟ್ ಮಂಡನೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಂಡಿಸಲಿದ್ದು, ಕರ್ನಾಟಕದ ಜನೆತೆಗೆ ಸಿಹಿ ಸುದ್ದಿ ನೀಡುವರು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿಶ್ವಾಸವ್ಯಕ್ತಪಡಿಸಿದರು.
ಗುರುವಾರದಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಕನಸು ದೇಶವನ್ನು ವಿಶ್ವಗುರು ಹಾಗೂ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಗುರಿಯಿಟ್ಟುಕೊಂಡು ಕರ್ನಾಟಕದ ಜನತೆಗೆ ಸಿಹಿ ಸುದ್ದಿ ನೀಡಲಿದ್ದಾರೆ. ಈಗಾಗಲೇ ಹಿಂದಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚಿನ ಹಣವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಸ್ತೆ. ರೈಲ್ವೆ ಯೋಜನೆ ಸೇರಿದಂತೆ ಹಲವಾರು ಯೋಜನೆಗಳಿಗೆ ಕರ್ನಾಟಕಕ್ಕೆ ಬಿಡುಗಡೆ ಮಾಡಿದ್ದಾರೆ.

ಮಲೆನಾಡು ಭಾಗದ ಕಾಫಿ ಬೆಳೆಗಾರರ ಬಹಳ ವರ್ಷದ ಬೇಡಿಕೆ ಮೇರೆಗೆ ಕಾಫಿ ಬೆಳೆಗಾರರು ಭೂಮಿ ಒತ್ತುವರಿ ಮಾಡದ್ದಲ್ಲಿ ಅವರು ಬೆಳೆದಿರುವ ಮರಗಳನ್ನು ಉಳಿಸಿಕೊಳ್ಳಲು ನಾನು ಕಂದಾಯ ಸಚಿವನ್ನಾಗಿದ್ದಾಗ ಕಾಫಿ ಬೆಳೆಗಾರರಿಗೆ ಭೂಮಿ ಲೀಜ್ ನೀಡುವ ಬಗ್ಗೆ ನಿರ್ಧಾರ ಮಾಡಿದ್ದೆವು. ನಾವು 30 ವರ್ಷದ ಅವಧಿಗೆ ಲೀಜ್ ಗೆ ನೀಡಿದ್ದೆವು. ಬಿಜೆಪಿ ಕಾಲದಲ್ಲಿ ಯೋಜನೆ ಜಾರಿಯಾಗಿದೆ ಎಂಬ ಕಾರಣಕ್ಕಾಗಿ ಸರ್ಕಾರ ದ್ವೇಷದ ರಾಜಕಾರಣ ಮಾಡಿ ಕಾಫಿ ಬೆಳೆಗಾರರಿಗೆ ಅನ್ಯಾಯವಾಗುವ ರೀತಿಯಲ್ಲಿ ವರ್ತಿನೆ ಮಾಡಿದೆ. ಜಿಲ್ಲಾಧಿಕಾರಿಗಳು ಕಾಫಿ ಬೆಳೆಗಾರರ ಬಳಿಯಲ್ಲಿ ಹಣ ಕಟ್ಟಿಸಿಕೊಳ್ಳುತ್ತಿಲ್ಲ. ಕಾಫಿ ಬೆಳೆಗಾರರು ಈ ಬಗ್ಗೆ ಹೋರಾಟ ಮಾಡಲಿದ್ದು. ನಾವು ಕೂಡ ಈ ಬಗ್ಗೆ ಮುಂದಿನ ವಿಧಾನಸಭೆಯಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದ್ದರು.
ಭಾರತ ದೇಶ ಇತಿಹಾಸದಲ್ಲಿ ಯಾವುದೇ ದೇಶದ ಮೇಲೆ ಲೂಟಿ ಮಾಡಿದ ಪರಂಪರೆ ಇಲ್ಲ. ಮುಸ್ಲಿಂ ದಾಳಿಕೊರರು ನಮ್ಮ ದೇವಾಲಯ ಹೊಡೆದು ಹಾಕಿ ಅದರ ಮೇಲೆ ಮಸೀದಿ ನಿರ್ಮಾಣ ಮಾಡಿರುವ ಸಾವಿರಾರು ಘಟನೆಗಳ ಇತಿಹಾಸ ಇದೆ. ಶ್ರೀರಂಗಪಟ್ಟಣ ಮಸೀದಿ ಕಂಬಗಳ ಮೇಲೆ ನಾಗರ ಕೆತ್ತನೆ ಇದೆ. ನಾಗರ ಕೆತ್ತನೆಗೂ ಸಾಬರಿಗೂ ಸಂಬಂದ ಏನು? ಜ್ಞಾನವ್ಯಾಪ್ತಿ ದೇವಾಲಯ ವಿಚಾರದಲ್ಲಿ ಕೋರ್ಟ್ ಆದೇಶ ಸ್ವಾಗತ ನಮ್ಮ ಕಾಲದಲ್ಲಿ ಜ್ಞಾನವ್ಯಾಪ್ತಿ ಭವ್ಯ ಮಂದಿರ ನಿರ್ಮಾಣವಾಗಲಿ ಎಂದರು.
ಮಂಡ್ಯ ಜಿಲ್ಲೆಯ ಕೆರಗೊಡು ದೇವಾಲಯ ಕೇಸರಿ ಧ್ವಜ ತೆರವು ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕಳೆದ 15 ವರ್ಷದಿಂದ 20 ಅಡಿ ಎತ್ತರಲ್ಲಿ ಹಾರಿಸಲಾಗುತ್ತಿತ್ತು. ಗ್ರಾಮಸ್ಥರು ಸ್ವಾತಂತ್ರ ದಿನಾಚರಣೆ ಸಮಯದಲ್ಲಿ ರಾಷ್ಟ್ರ ಧ್ವಜ ಹಾರಟ ಮಾಡಿದ್ದಾರೆ. 22 ಹಳ್ಳಿಯ ಜನರು ಹಣ ಸಂಗ್ರಹ ಮಾಡಿ ಕಳೆದ 2 ತಿಂಗಳಿನಿಂದ ಧ್ವಜದ ಕಂಬ ಸಿದ್ದಪಡಿಸಿದ್ದಾರೆ. ಧ್ವಜ ಕಂಬಂದ ಉದ್ಘಾಟನಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟನೆಗೆ ಕರೆಯದ ಕಾರಣ ಸ್ಥಳೀಯ ಶಾಸಕರು ಧ್ವಜ ಹಾರಟ ಮಾಡುವುದರಲ್ಲಿ ವಿರೋಧ ಮಾಡಿರುವುದು ಈ ಘಟನೆಗೆ ಕಾರಣವಾಗಿದೆ ಎಂದರು.
ರಾಷ್ಟ್ರಧ್ವಜಕ್ಕೆ ಕಾಂಗ್ರೆಸ್ ಅವಮಾನ ಮಾಡಿದೆ. ಹನುಮಾನ್ ಧ್ವಜ ತೆಗೆದು ರಾಷ್ಟ್ರಧ್ವಜ ಹಾಕಲು ಯಾವ ಕಾನೂನಿನ ಪುಸ್ತಕದಲ್ಲಿ ಇದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಹನುಮಾನ್ ಧ್ವಜ ತೆಗೆಯಲು ರಾಷ್ಟ್ರಧ್ವಜ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಬಂದ್ ಬೆಂಬಲಕ್ಕೆ ಬಿಜೆಪಿ ವತಿಯಿಂದ ಬೆಂಬಲ ನೀಡುವುದಾಗಿ ತಿಳಿಸಿದರು. ಶ್ರೀನಗರದ ಲಾಲ್ ಚೌಕನಲ್ಲಿ ರಾಷ್ಟ್ರಧ್ವಜ ಹಾರಟ ಮಾಡಲು ದಮ್ಮಿದ್ದರೆ ಬರಲು ಹೇಳಿದರೆ ಕಾಂಗ್ರೆಸ್ ಪಕ್ಷ ಎಕೆ ಬರಲಿಲ್ಲ. ಮುರುಳಿ ಮನೋಹರ ಜೋಷಿ ನೇತೃತ್ವದಲ್ಲಿ ನಾವು 10 ಸಾವಿರ ಜನರು ರಾಷ್ಟ್ರಧ್ವಜ ಹಾರಟ ಮಾಡಿದ್ದೆವು. ಹುಬ್ಬಳ್ಳಿ ಪ್ರಕರಣ ಸೇರಿದಂತೆ ಎಲ್ಲಾ ಘಟನೆಗಳಲ್ಲಿ ರಾಷ್ಟ್ರಧ್ವಜ ಹಾರಾಟ ಮಾಡಲು ಹೋದವರಿಗೆ ಕಾಂಗ್ರೆಸ್ ಗುಂಡೆಟು, ಲಾಠಿ ಎಟು ನೀಡಿದೆ ಎಂದರು.
ಸಚಿವ ಜಮೀರ್ ಅಹಮದ್ ಕ್ಷೇತ್ರದಲ್ಲಿ ಚಾಮರಾಜಪೇಟೆಯಲ್ಲಿ ಸ್ವಾತಂತ್ರ್ಯ ಬಂದು 75 ವರ್ಷವಾದರು ರಾಷ್ಟ್ರಧ್ವಜ ಹಾರಿಸಲು ಸಾಧ್ಯವಾಗಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಕಂದಾಯ ಸಚಿವನ್ನಾಗಿದ್ದಾಗ ರಾಷ್ಟ್ರಧ್ವಜ ಹಾರಟ ಮಾಡಿಸಿದ್ದೆವೆ. ಸಂವಿಧಾನದ ಪ್ರಥಮ ಪ್ರಜೆ ದಲಿತ ಹೆಣ್ಣು ಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದು ಸಂವಿಧಾನಕ್ಕೆ ಮಾಡಿದ ಅಪಮಾನ. ಇದು ಕಾಂಗ್ರೆಸ್ ಸಂಸ್ಕೃತಿ ಎಂದು ಜರಿದರು. ಇದೆ ಭರದಲ್ಲಿ ಸಿದ್ದರಾಮಯ್ಯ ಸೋನಿಯಗಾಂಧಿ ಬಗ್ಗೆ ಹೇಳಿದ್ದರೇ, ಮೂರು ದಿನದಲ್ಲಿ ಅಧಿಕಾರದಿಂದ ಇಳಿಯುತ್ತಿದ್ದರು. ರಾಷ್ಟ್ರಪತಿ ಬಗ್ಗೆ ಹಗುರವಾಗಿ ಮಾತನಾಡಿದ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ನೊಟೀಸ್ ಕೊಡಲಿ ಎಂದು ಒತ್ತಾಯಿಸಿದರು.
ಸರ್ಕಾರ ರೈತರಿಗೆ ಹಾಲಿನ ಹಣ ಕೊಡಲಾಗಿಲ್ಲ. ಪತ್ರಿಕೆಯಲ್ಲಿ ರೈತರಿಗೆ ಹಣ ನೀಡುವುದಾಗಿ ಜಾಹೀರಾತು ನೀಡಿ ಒಂದು ರೂಪಾಯಿ ಹಣ ರೈತರಿಗೆ ನೀಡದೆ ರೈತರ ಹೆಸರಿನಲ್ಲಿ ಹಣ ಲೂಟಿ ಮಾಡಿದೆ. ರಾಜ್ಯ ಸರ್ಕಾರ ಪಾಪರ್ ಸರ್ಕಾರ. ಕಳೆದ 8 ತಿಂಗಳ ಅವಧಿಯಲ್ಲಿ ಒಂದೆ ಒಂದು ಹೊಸ ಕಾಮಗಾರಿ ನಡೆಸಿಲ್ಲ. ರಾಜ್ಯ ಸರ್ಕಾರ 5 ಗ್ಯಾರಂಟಿಗೆ ಹಣ ಹೊಂದಿಸಲಾಗದೇ ದಲಿತರಿಗೆ ಮೀಸಲಿಟ್ಟ ಹಣ ಬಳಸಿಕೊಂಡಿದ್ದಾರೆ ಎಂದು ಟೀಕಿಸಿದರು.












Click it and Unblock the Notifications