'ನಾನು ಬದುಕಿರುವವರೆಗೂ ಭಾರತವನ್ನು ಹಿಂದೂ ರಾಷ್ಟ್ರವಾಗಲು ಬಿಡಲ್ಲ'
Recommended Video

HD Devegowda says PM Narendra Modi of turning India into a Hindu-Rashtra|Oneindia Kannada
ಯಾದಗಿರಿ, ಸೆಪ್ಟೆಂಬರ್ 16: ರಾಜ್ಯ ಸೇರಿದಂತೆ ಇಡೀ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಹಗಲುಗನಸು ಪ್ರಧಾನಿ ನರೇಂದ್ರ ಮೋದಿ ಕಾಣುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಶಹಾಪುರದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇಡೀ ದೇಶವನ್ನು ಹಾಗೂ ಕರ್ನಾಟಕವನ್ನು ನಾನು ಬದುಕಿರುವವರೆಗೂ ಹಿಂದೂ ರಾಜ್ಯವನ್ನಾಗಲು ಬಿಡುವುದಿಲ್ಲ' ಎಂದು ಹೇಳಿದರು.

'ಕಾರವಾರದ ಬೆಂಕಿಯುಂಡೆಯನ್ನು ಕೇಂದ್ರದ ಸಚಿವರನ್ನಾಗಿ ಮಾಡಿ ಕಳುಹಿಸಿರುವೆ ಎಂಬ ಬಿಜೆಪಿ ಮುಖಂಡರ ಜಂಬದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು'
'ಮಂಗಳೂರಿನಲ್ಲಿ ಕ್ರೈಸ್ತರು ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಕೋಮು ಭಾವನೆ ಕೆರಳಿಸಿ ಸಾಮರಸ್ಯ ಜೀವನಕ್ಕೆ ಧಕ್ಕೆ ತಂದಿರುವುದು ಸರಿಯಲ್ಲ.
ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಇದೆ. ಕೋಮು ಗಲಭೆ ಹತ್ತಿಕ್ಕುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ' ಅವರು ಎಂದು ಆರೋಪಿಸಿದರು.












Click it and Unblock the Notifications