Narendra Modi: ವಿದೇಶದಿಂದ ನೇರವಾಗಿ ಬೆಂಗಳೂರಿಗೆ ಬಂದ ಪ್ರಧಾನಿ ಮೋದಿ; ಇಸ್ರೋ ಕುರಿತು ಹೇಳಿದ್ದೇನು?

ಬೆಂಗಳೂರು, ಆಗಸ್ಟ್‌ 26: ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ ಭೇಟಿಯನ್ನು ಮುಗಿಸಿದ ನಂತರ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದು, ಚಂದ್ರಯಾನ 3 ರ ಯಶಸ್ಸಿ ಕಾರಣರಾದ ಇಸ್ರೋ ತಂಡದ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಲು ರಾಜ್ಯಕ್ಕೆ ಆಗಮಿಸಿದ್ದಾರೆ.

ಹೆಚ್​ಎಎಲ್ ಏರ್​ಪೋರ್ಟ್​​ನಿಂದ ಇಸ್ರೋ ಕೇಂದ್ರಕ್ಕೆ ಹೊರಡುತ್ತಿದ್ದಂತೆಯೇ ಜನರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಇದೇ ವೇಳೆ ಜನ ಜೈ ಮೋದಿ ಎಂಬ ಘೋಷಣೆ ಕೂಗಲು ಮುಂದಾದಾಗ ಅದನ್ನು ತಡೆದು, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂದು ಮೋದಿ ಘೋಷಣೆ ಮಾಡಿದರು. ಈ ವೇಳೆ ಇಸ್ರೋ ವಿಜ್ಞಾನಿಗಳ ಕುರಿತು ಮಾತನಾಡಿ, ವಿಜ್ಞಾನಿಗಳ ಸಾಧನೆ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ನಮ್ಮ ವಿಜ್ಞಾನಿಗಳ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಗಿದೆ. ವಿದೇಶದಲ್ಲಿ ಇರುವಾಗಲೇ ಇಸ್ರೋ ಸಂಸ್ಥೆಗೆ ಭೇಟಿ ನೀಡಲು ನಿರ್ಧರಿಸಿದೆ. ವಿದೇಶದಲ್ಲಿ ಇರುವಾಗಲೇ ಇಸ್ರೋ ಸಂಸ್ಥೆಗೆ ಭೇಟಿ ನೀಡಲು ನಿರ್ಧರಿಸಿದೆ. ಹಾಗಾಗಿ ವಿದೇಶದಿಂದ ನೇರವಾಗಿ ವಿಜ್ಞಾನಿಗಳಿಗೆ ಭೇಟಿಗೆ ಬಂದಿದ್ದೇನೆ ಎಂದು ಮೋದಿ ಹೇಳಿದರು.

Narendra Modi: The Whole World Knows The Strength Of Our Scientists

ಭಾರತದಲ್ಲಿ ಬೆಳಕು ಹರಿದಿದೆ, ಆ ಬೆಳಕಿನಲ್ಲಿ ಬೆಂಗಳೂರಿಗರ ಮುಖ ನೋಡಿದೆ. ವಿದೇಶದಲ್ಲಿದ್ದಾಗ ಅಲ್ಲಿಂದಲೇ ಬೆಂಗಳೂರಿಗೆ ಬರಲು ನಿರ್ಧರಿಸಿದೆ. ಅದಕ್ಕೆ ಶೀಘ್ರದಲ್ಲೇ ವ್ಯವಸ್ಥೆ ಮಾಡಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜ್ಯಪಾಲರಿಗೆ ಧನ್ಯವಾದ ಎಂದು ಮೋದಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+