ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆಯಲ್ಲಿ ಮೋದಿ ಸಮಾವೇಶ : ಚಿತ್ರಗಳು

|
Google Oneindia Kannada News

ದಾವಣಗೆರೆ, ಮೇ 30 : 'ರೈತರ ಆದಾಯ 2022ರ ವೇಳೆಗೆ ದುಪ್ಪಟ್ಟಾಗಬೇಕು. ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣ ಮಾಡಬೇಕು ಎಂದು ದೇಶದ ಜನರು ನಿರ್ಧರಿಸಿದ್ದಾರೆ. ಒಂದು ದೊಡ್ಡ ಕೆಲಸ ಮಾಡದಿದ್ದರೂ ಪರವಾಗಿಲ್ಲ. ಆದರೆ, ಪಾಪದ ಮಾರ್ಗದಲ್ಲಿ ಹೋಗುವುದಿಲ್ಲ, ದೇಶವನ್ನು ಲೂಟಿ ಹೊಡೆಯುವುದಿಲ್ಲ' ಇವೆಲ್ಲ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತುಗಳು.

ಕೇಂದ್ರ ಸರ್ಕಾರ ಎರಡು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಭಾನುವಾರ 'ವಿಕಾಸ ಪರ್ವ ಸಮಾವೇಶ' ಆಯೋಜಿಸಲಾಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಿದರು. [ಹುಬ್ಬಳ್ಳಿ: ಜನರನ್ನು ಆಕರ್ಷಿಸದ ಪ್ರಧಾನಿ ಮೋದಿ]

narendra modi

'ಕೇಂದ್ರ ಸರ್ಕಾರ ರೈತರು ಮತ್ತು ಗ್ರಾಮೀಣ ಜನರ ಪರವಾಗಿದೆ. ರೈತರಿಗೆ ನೆರವು ನೀಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. 2022ರ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಆಗಲಿದೆ. ಆ ವೇಳೆಗೆ ದೇಶದ ಪ್ರತಿಯೊಬ್ಬ ರೈತನ ಆದಾಯ ದುಪ್ಪಟ್ಟು ಆಗಬೇಕು ಎಂಬುದು ತಮ್ಮ ಕನಸು' ಎಂದು ಮೋದಿ ಹೇಳಿದರು. [ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]

'ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣ ನಮ್ಮ ಉದ್ದೇಶವಲ್ಲ. ದೇಶದ ಜನರೇ ಕಾಂಗ್ರೆಸ್‌ ಮುಕ್ತ ಭಾರತಕ್ಕೆ ನಿರ್ಧರಿಸಿದ್ದಾರೆ. ನಮ್ಮ ಕನಸಿಗೆ, ಅಭಿವೃದ್ಧಿಯ ಕಾರ್ಯಗಳಿಗೆ ಜನರೇ ಪ್ರೇರಣೆ. ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ನಿಮ್ಮ ಪ್ರೋತ್ಸಾಹ, ಆಶೀರ್ವಾದ ಬೇಕು' ಎಂದು ಮೋದಿ ಜನರಲ್ಲಿ ಮನವಿ ಮಾಡಿದರು.

ಮೋದಿ ಭಾಷಣದ ಮುಖ್ಯಾಂಶಗಳು

* ದೆಹಲಿಯಲ್ಲಿ ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ಸಲಹೆ ಕೊಡುವ ಜನರಿಗೆ ಉರಿಬಿಸಿಲಿನ ತಾಪ ಅರ್ಥವಾಗುವುದಿಲ್ಲ. ಈಗ ಯಾವುದೇ ಚುನಾವಣೆ ಇಲ್ಲ. ನಾನು ಯಾವುದೇ ಪ್ರಚಾರದ ಭಾಷಣಕ್ಕೆ ಬಂದಿಲ್ಲ. ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಮಾತು ಆರಂಭಿಸಿದ ಮೋದಿ ಸುಮಾರು 50 ನಿಮಿಷ ಮಾತನಾಡಿದರು. [ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?]

* ರೈತರ ಬೆವರಿನ ಶ್ರಮ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಇದನ್ನು ತಪ್ಪಿಸಲು ದೇಶಾದ್ಯಂತ ಸುಮಾರು 500 ಕೃಷಿ ಮಾರುಕಟ್ಟೆಗಳಲ್ಲಿ ಇ-ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ರೈತರು ಮೊಬೈಲ್ ಮೂಲಕವೇ ದೇಶದ ಯಾವುದೇ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.

* ಈ ಹಿಂದೆ ಆಡಳಿತ ನಡೆಸಿದವರು ಕಾನೂನುಗಳನ್ನು ರಚನೆ ಮಾಡಿದ್ದೇ ಸಾಧನೆ ಎಂದು ಹೇಳುತ್ತಾರೆ. ಕೇವಲ ಕಾನೂನು ರಚನೆಯಿಂದ ಪ್ರಯೋಜನವಾಗಿಲ್ಲ. ಅದಕ್ಕಾಗಿಯೇ ತೀರ ಹಳೆಯದಾದ ಉಪಯೋಗಕ್ಕೆ ಬಾರದ ಸುಮಾರು 1,200 ಕಾನೂನುಗಳನ್ನು ರದ್ದುಪಡಿಸಲಾಗಿದೆ.

* ದೇಶದ 11 ರಾಜ್ಯಗಳಲ್ಲಿ ಭೀರಕ ಬರವಿದೆ. ಬರ ಪೀಡಿತ ರಾಜ್ಯಗಳ ಮುಖ್ಯಮಂತ್ರಿ ಸಭೆ ಕರೆದು ಸುಧೀರ್ಘ ಚರ್ಚೆ ನಡೆಸಿದ್ದೇನೆ. ಸಂಕಷ್ಟದ ಸಂದರ್ಭದಲ್ಲಿ ನೆರವು ನೀಡಲು ಕೇಂದ್ರ ಸಿದ್ಧವಿದೆ ಎಂಬ ವಿಶ್ವಾಸ ತುಂಬಿದ್ದೇನೆ. ಕರ್ನಾಟಕ ಸೇರಿದಂತೆ ಬರ ಪೀಡಿತ ರಾಜ್ಯಗಳಿಗೆ ನೆರವು ನೀಡಿದ್ದೇನೆ.

 karnataka

* ಬರ ಪರಿಸ್ಥಿತಿ ನಿವಾರಣೆ ಮಾಡಲು ನೀರು ಇಂಗಿಸುವ, ಸಂಗ್ರಹಿಸುವ ಕಾರ್ಯ ಆಗಬೇಕು. ಇದಕ್ಕಾಗಿ ಪ್ರಧಾನಮಂತ್ರಿ ಕೃಷಿ ಸಿಂಚನ ಯೋಜನೆ ಜಾರಿಗೊಳಿಸಲಾಗಿದೆ. ಕೃಷಿ ಹೊಂಡ ನಿರ್ಮಾಣ, ಕೆರೆಗಳ ದುರಸ್ತಿಗೆ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಲಾಗಿದೆ. ಭೂ ತಾಯಿ ಆರೋಗ್ಯ ನಿಟ್ಟಿನಲ್ಲಿ ಮಣ್ಣು ಪರೀಕ್ಷೆಗೆ ಕಾರ್ಡ್‌ಗಳ ವ್ಯವಸ್ಥೆ ಮಾಡಲಾಗಿದೆ.

* ಸರ್ಕಾರ ಯಾವ ದೊಡ್ಡ ಕೆಲಸ ಮಾಡಿದೆ ಎಂದು ವಿರೋಧಿಗಳು ಪ್ರಶ್ನಿಸುತ್ತಾರೆ. ಹಿಂದಿನ ಸರ್ಕಾರ ದೊಡ್ಡ-ದೊಡಡ ಜನರಿಗಾಗಿ ದೊಡ್ಡ-ದೊಡ್ಡ ಕೆಲಸ ಮಾಡಿರಬಹುದು. ನಾನು ಅಂತಹ ದೊಡ್ಡ ಕೆಲಸದ ಮೂಲಕ ಪಾಪದ ಮಾರ್ಗ ತುಳಿಯಲೇ ಎಂದು ಮೋದಿ ಜನರನ್ನು ಪ್ರಶ್ನಿಸಿದರು.

English summary
Prime Minister Narendra Modi on Sunday May 29, 2016 address Vikas Parva rally in Davanagere, Karnataka. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X