Nandini vs Amul ಗದ್ದಲವೇ ಬೇರೆ-ಹೈನುಗಾರಿಕೆಯ ಸಮಸ್ಯೆಗಳೇ ಬೇರೆ: ಲಾಭದಾಯಕವಾ ಹೈನುಗಾರಿಕೆ? ತಿಳಿಯಿರಿ
ಬೆಂಗಳೂರು, ಏಪ್ರಿಲ್ 11: ರಾಜ್ಯದಲ್ಲಿ ಒಂದು ಕಡೆ ಅಮುಲ್ ಹಾಗೂ ನಂದಿನಿ ಬ್ರ್ಯಾಂಡ್ ವಿಲೀನ ಕುರಿತು ಚರ್ಚೆ, ಟೀಕೆಗಳು ವ್ಯಕ್ತವಾಗುತ್ತವೆ. ಮತ್ತೊಂದು ಕಡೆ ಕರ್ನಾಟಕದ ರೈತರ ಬೆಂಬಲಕ್ಕಾಗಿ ನಾವು ನಂದಿನಿ ಹಾಲನ್ನೇ ಬಳಸುತ್ತೇವೆ ಎಂಬ ಪ್ರೋತ್ಸಾಹವು ಕಂಡು ಬರುತ್ತಿದೆ. ಆದರೆ ರಾಜ್ಯದ ಹೈನುಗಾರರ/ರೈತರ ಸಮಸ್ಯೆ ಕುರಿತು ಯಾರುಸಹ ಮಾತನಾಡದಿರುವುದು ವಿಷಾದನೀಯ.
ಪ್ರತಿನಿತ್ಯ ಕರ್ನಾಟಕ ರಾಜ್ಯದ ರೈತರು ಲಕ್ಷಾಂತರ ಲೀಟರ್ ಹಾಲನ್ನು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ (KMF) ನೀಡುತ್ತಾರೆ. ಆದರೆ ಅವರಿಗೆ ಎಷ್ಟು ಲಾಭವಾಗುತ್ತಿದೆ, ಬೇಸಿಗೆಕಾಲದಲ್ಲಿ ಅವರು ಅನುಭವಿಸುವ ಸಂಕಷ್ಟಗಳು ಏನು ಎಂಬುದನ್ನು ಇಲ್ಲಿ ತಿಳಿಯೋಣ.

ರಾಜ್ಯದಲ್ಲಿ ಹೈನುಗಾರಿಕೆ ಮಾಡುತ್ತಿರುವವರು ಮೇವಿನ ಕೊರತೆ, ಪಶು ಆಹಾರದ ಬೆಲೆ ಹೆಚ್ಚಳದ ಸಮಸ್ಯೆ, ಹೆಚ್ಚಾಗದ ಹಾಲಿನ ಬೆಲೆ, ಹಸುಗಳನ್ನು ಆಗಿದ್ದಾಗ್ಗೆ ಕಾಡುವ ಕಾಯಿಲೆಗಳು. ಇದೆಲ್ಲವನ್ನು ಎದುರಿಸುವ ರೈತರಿಗೆ ಹೈನುಗಾರಿಕೆಯ ನಿರ್ವಹಣಾ ವೆಚ್ಚವೆ ಅಧಿಕವಾಗಿದೆ. ಹೈನುಗಾರಿಕೆಯಿಂದ ರೈತರಿಗೆ ಲಾಭವಾಗುತ್ತಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ.
ಹಸು ಖರೀದಿ ಸಾಕಾಣಿಕೆ ಆರಂಭದಿಂದ ಹಿಡಿದು ಹಾಲು ಕರೆದು ಕೆಎಂಎಫ್ ಗೆ ನೀಡುವವರೆಗಿನ ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಹಾಲು ಒಕ್ಕೂಟಗಳನ್ನು ನಂಬಿ ಹೈನುಗಾರಿಕೆಯಲ್ಲಿ ತೊಡಗಿರುವ ಜನರ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೈನುಗಾರಿಕೆಯಲ್ಲಿನ ಈ ಪರಿಸ್ಥಿತಿಯಿಂದ ಅವರೆಲ್ಲ ತತ್ತಿಸುತ್ತಿದ್ದಾರೆ. ಹೀಗಾಗಿಯೇ ಇಂದಿನ ದಿನಮಾನಗಳಲ್ಲಿ ಹೈನುಗಾರಿಕೆ ಆರಂಭಿಸುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನಲಾಗಿದೆ.
ಪಶು ಆಹಾರ ಬಲು ದುಬಾರಿ: ರೈತ ಕಂಗಾಲು
ಕೊರೊನಾ ಕಾಲಕ್ಕೂ ಮೊದಲು ಹಸುವಿನ ಆಹಾರವು 50 ಕೆ.ಜಿಯ ಒಂದು ಚೀಲಕ್ಕೆ 650 ರೂಪಾಯಿ ಇದ್ದರೆ, ಅದೀಗ ಸುಮಾರು 1,170ರಿಂದ 1,190ರವರೆಗೆ ಹೆಚ್ಚಾಗಿದೆ. ಬೈಪಾಸ್ ಪಶು ಆಹಾರದ ಬೆಲೆ 50 ಕೆ.ಜಿ ತೂಕದ ಚೀಲಕ್ಕೆ 1,240 ರೂ. ಇದೆ. ಹಸುಗಳು ಹೆಚ್ಚು ಹಾಲು ನೀಡಬೇಕಾದರೆ ಈ ಪಶು ಆಹಾರಗಳನ್ನು ಬಳಕೆ ಮಾಡಿಬೇಕಾಗುತ್ತದೆ. ಆದರೆ ಈ ಆಹಾರದ ದರ ಈ ಮಟ್ಟಿಗೆ ದುಬಾರಿಯಾದರೆ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಪಶು ಆಹಾರದ ಒತೆಗೆ ಖನಿಜ ಮಿಶ್ರಣವನ್ನೂ ಅಲ್ಪ ಪ್ರಮಾಣದಲ್ಲಿ ಮಾಡಬೇಕಿರುತ್ತದೆ. ಮಳೆಗಾಲದಲ್ಲಿ ಹಸಿರು ಮೇವು ಸಿಕ್ಕುತ್ತದೆ. ಆದರೆ ಬೇಸಿಗೆಯಲ್ಲಿ ಅಂತಹ ಮೇವಿನ ಕೊರತೆ ಉಂಟಾಗುತ್ತದೆ. ಕೇವಲ ಒಣ ಮೇವು ಇಲ್ಲವೇ ಹಿಂಡಿ, ಪಶು ಆಹಾರ ಹಸುಗಳಿಗೆ ಗತಿಯಾಗುತ್ತದೆ. ಇದು ಸಹ ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ.
ಹೈನುಗಾರಿಕೆ ಲಾಭದಾಯಕವಾಗಿ ಉಳಿದಿಲ್ಲ?
ಹಿಂಗಾರು ಬಿತ್ತನೆಯಾದ ತೆನೆ ಸಹಿತ ಜೋಳದ ಮೇವು ಟನ್‌ಗೆ ಕನಿಷ್ಠ ಮೂರು ಸಾವಿರ ರೂಪಾಯಿ ಇದೆ. ಹೀಗೆ ಎಲ್ಲದ್ದಕ್ಕೂ ಹಣ ನೀಡಿ ರೈತ ಹಸು ಸಾಕಾಣೆ ಮಾಡಿ ಹಾಲು ಪೂರೈಸುವಷ್ಟರಲ್ಲಿ ಆತನ ದುಡಿಮೆ ತಕ್ಕ ಪ್ರತಿಫಲ ಸಿಗದೇ ನಲುಗುತ್ತಿದ್ದಾನೆ. ಹಾಲು ಕರೆದು ಡೇರಿಗೆ ತಲುಪಿಸಿ ಸುಸ್ತಾಗುವ ರೈತನಿಗೆ ಹದಿನೈದು ಎರಡು ವಾರ ಇಲ್ಲ ಮಾಸಿಕವಾಗಿ ಹಣ ಸಿಗುತ್ತದೆ. ಒಂದು ಲೀಟರ್‌ಗೆ 31ರಿಂದ 34 ರೂಪಾಯಿವರೆಗೆ ದರ ನಿಗದಿಯಾಗಿದೆ. ಕೆಲವು ಹಾಲಿನ ಒಕ್ಕೂಟಗಳು ಲೀಟರ್ ಹಾಲಿಗೆ 29 ರೂ. ನೀಡುತ್ತವೆ. ಸರ್ಕಾರವು ಐದು ರೂಪಾಯಿ ಪ್ರೋತ್ಸಾಹಧನ ನೀಡುತ್ತದೆ. ಹೀಗಿದ್ದರೂ ಹೈನುಗಾರಿಕೆ ಲಾಭದಾಯಕವಾಗಿಲ್ಲ ಎಂದು ರೈತರಿಂದ ತಿಳಿದು ಬಂದಿದೆ.
ಹಸುವಗಳ ಸಗಣಿ ಜಮೀನಿಗೆ ಗೊಬ್ಬರವಾಗಿ ಉಳಿಯುತ್ತದೆ. ಅದನ್ನು ಕೆಲವು ಮಾರುತ್ತಾರೆ. ಜಮೀನಿದ್ದವರು ತಾವೇ ಬಳಸುತ್ತಾರೆ. ಸರ್ಕಾರದ ಪ್ರೋತ್ಸಾಹ ಧನ ಐದು ರೂ. ತ್ರೈಮಾಸಿಕಕ್ಕೋ ಇಲ್ಲ ಆರು ತಿಂಗಳಿಗೋ ಸಿಗುತ್ತದೆ. ಪಶುಗಳಿಗೆ ರೋಗ ಬರದಂತೆ ತಡೆಯಲು ಆಗಾಗ ಔಷಧಿ, ವೈದ್ಯಕೀಯ ತಪಾಸಣೆಗೆ ಸಾವಿರಾರು ರೂ. ಹಣ ಖರ್ಚಾಗುತ್ತದೆ ಎಂಬುದು ರೈತರ ಗೋಳಾಗಿದೆ.
ಕೇವಲ ರಾಜಕೀಯಕ್ಕಾಗಿ ನಂದಿನಿ ಮತ್ತು ಅಮುಲ್ ಕುರಿತು ಆರೋಪ, ಟೀಕೆ, ಯೋಜನೆ ಘೋಷಣೆ ಮಾಡುವ ಬದಲು ವಾಸ್ತವದ ಸಮಸ್ಯೆಗಳನ್ನೂ ಅರಿತು ಎಲ್ಲದ್ದಕ್ಕು ಪರಿಹಾರ ಕಂಡುಕೊಳ್ಳಬೇಕಿದೆ.












Click it and Unblock the Notifications