Buffalo Milk: ಡಿಸೆಂಬರ್ 21, 22ರಿಂದ ನಂದಿನಿ ಎಮ್ಮೆ ಹಾಲು ಮಾರಾಟಕ್ಕೆ ಕೆಎಂಎಫ್ ನಿರ್ಧಾರ: ದರ ಎಷ್ಟು?
ರಾಜ್ಯದಲ್ಲಿ ಎಮ್ಮೆ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಎಮ್ಮೆ ಹಾಲು ಮಾರಾಟ ಮಾಡಲು ಸಿದ್ಧವಾಗಿದೆ. ಡಿಸೆಂಬರ್ 21 ಮತ್ತು 22 ರಿಂದ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ನಂದಿನಿ ಎಮ್ಮೆ ಹಾಲು ಸಿಗಲಿದೆ.
ಹಾಲಿನ ದರಕ್ಕೆ ಹೋಲಿಕೆ ಮಾಡಿದರೆ ಎಮ್ಮೆ ಹಾಲಿನ ದರ ಸ್ವಲ್ಪ ದುಬಾರಿಯಾಗಿದೆ. ನಂದಿನಿ ಎಮ್ಮೆ ಹಾಲಿನ ದರ ಒಂದು ಲೀಟರ್ ಗೆ ಸುಮಾರು 70-75 ರೂಪಾಯಿ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿದ್ದು ಇನ್ನೂ ಅಂತಿಮ ಬೆಲೆ ನಿರ್ಧಾರವಾಗಿಲ್ಲ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಆರಂಭದಲ್ಲಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್ ತಿಳಿಸಿರುವುದಾಗಿ ನ್ಯೂ ಸಂಡೆ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಎರಡು ವರ್ಷಗಳ ಹಿಂದೆ, ಕೆಎಂಎಫ್ ಸುಮಾರು 4,000-5,000 ಲೀಟರ್ ಎಮ್ಮೆ ಹಾಲನ್ನು ಮಾರಾಟ ಮಾಡುತ್ತಿತ್ತು, ಆದರೆ ಪೂರೈಕೆ ಕೊರತೆಯಿಂದಾಗಿ ಸ್ಥಗಿತಗೊಂಡಿತು.
ಮಾರಾಟ ಮತ್ತು ಸರಬರಾಜುಗಳು ಶೀಘ್ರದಲ್ಲೇ ಪ್ರಾರಂಭವಾಗುತ್ತವೆ ಮತ್ತು ಹಸುವಿನ ಹಾಲು ಮತ್ತು ಅದರ ಉತ್ಪನ್ನಗಳೊಂದಿಗೆ ಎಮ್ಮೆ ಹಾಲಿಗೆ ಬೇಡಿಕೆಯು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಎಂಕೆ ಜಗದೀಶ್ ಹೇಳಿದರು.
ಉತ್ತರ ಕರ್ನಾಟಕದಿಂದ ಹಾಲು ಸಂಗ್ರಹ
ಎಲ್ಲಾ ಒಕ್ಕೂಟಗಳಲ್ಲಿ ಹಾಲು ಪೂರೈಸಲು ಸಾಕಷ್ಟು ಎಮ್ಮೆಗಳಿಲ್ಲದ ಕಾರಣ ವಿಜಯಪುರ ಮತ್ತು ಬೆಳಗಾವಿಯ ರೈತರಿಂದ ಹಾಲು ಖರೀದಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಎಮ್ಮೆಗಳಿದ್ದು, ಅಲ್ಲಿಂದಲೇ ಹಾಲು ಸಂಗ್ರಹಿಸಲಾಗುವುದು. ಮಾರುಕಟ್ಟೆ ಮತ್ತು ಬೇಡಿಕೆಗೆ ಅನುಗುಣವಾಗಿ ಸಂಗ್ರಹಣೆ ಹೆಚ್ಚಾಗಲಿದೆ ಎಂದು ಜಗದೀಶ್ ತಿಳಿಸಿದರು
ಹಾಲು ಪೂರೈಕೆಯಲ್ಲಿ ಇತರೆ ಬ್ರಾಂಡ್‌ಗಳಿಂದ ಪೈಪೋಟಿ ಹೆಚ್ಚುತ್ತಿದ್ದು, ನಂದಿನಿ ಮತ್ತು ಕೆಎಂಎಫ್ ಯಾವುದೇ ಉತ್ಪನ್ನದಲ್ಲಿ ಹಿಂದುಳಿಯಲು ಬಯಸುವುದಿಲ್ಲ. ತುಪ್ಪ, ಹಾಲು ಪೂರೈಕೆಗೆ ಈಗಾಗಲೇ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಾಸಗಿ ಮತ್ತು ಧಾರ್ಮಿಕ ಸೇರಿದಂತೆ ಸಂಸ್ಥೆಗಳು ಹಾಲು, ತುಪ್ಪ ಮತ್ತು ಬೆಣ್ಣೆಗಾಗಿ ನಮ್ಮನ್ನು ಸಂಪರ್ಕಿಸುತ್ತವೆ. ನಾವು ತಾಂತ್ರಿಕ ವಿವರಗಳಲ್ಲಿ ಅರ್ಹತೆ ಹೊಂದಿದ್ದೇವೆ, ಆದರೆ ಹಣಕಾಸಿನ ಬಿಡ್‌ಗಳಲ್ಲಿ ಕಳೆದುಕೊಳ್ಳುತ್ತೇವೆ. ಲಡ್ಡೂಗಳಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಬೋರ್ಡ್‌ಗೆ ತುಪ್ಪವನ್ನು ಪೂರೈಸುವ ಬಿಡ್ ಅನ್ನು ನಾವು ಇತ್ತೀಚೆಗೆ ಕಳೆದುಕೊಂಡಿದ್ದೇವೆ, ಎಂದು ಅಧಿಕಾರಿ ಹೇಳಿದ್ದರು. ಕೆಎಂಎಫ್ ಈಗ ಪ್ರತಿದಿನ 46 ಲಕ್ಷ ಲೀಟರ್ ಹಾಲು ಮತ್ತು 10 ಲಕ್ಷ ಲೀಟರ್ ಮೊಸರನ್ನು ರಾಜ್ಯ ಮತ್ತು ಇತರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದೆ.












Click it and Unblock the Notifications