Namma Metro's Yellow Line: ವರ್ಷಾಂತ್ಯದಲ್ಲಿ ನಮ್ಮ ಮೆಟ್ರೋದ ಹಳದಿ ಮಾರ್ಗ ಓಪನ್, ಎಷ್ಟು ರೈಲುಗಳು ಓಡಲಿವೆ ತಿಳಿಯಿರಿ
ಬೆಂಗಳೂರು, ಜೂನ್. 14: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆದಿದ್ದು, ಈ ವರ್ಷಾಂತ್ಯಕ್ಕೆ ಸಾರ್ವನಜಿಕ ಸೇವೆಗೆ ಮಾರ್ಗ ಸಿದ್ಧವಾಗಗಿದೆ. ಪ್ರತಿ 20 ನಿಮಿಷಕ್ಕೆ ಐದರಿಂದ ಆರು ರೈಲುಗಳು ಓಡಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
19.15 ಕಿಮೀ ಹಳದಿ ಮಾರ್ಗದಲ್ಲಿ ಸಿವಿಲ್ ಕೆಲಸ ಮತ್ತು ಟ್ರ್ಯಾಕ್-ಲೇಯಿಂಗ್ ಬಹಳ ಹಿಂದೆಯೇ ಪೂರ್ಣಗೊಂಡಿದೆ. ಆದರೆ, ರೈಲುಗಳ ಕೊರತೆಯು ವಾಣಿಜ್ಯ ಕಾರ್ಯಾಚರಣೆಗಳನ್ನು ವಿಳಂಬಗೊಳಿಸಿದೆ. 2019 ರಲ್ಲಿ, ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ 1,578 ಕೋಟಿ ರೂಪಾಯಿಯಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್) 216 ಕೋಚ್‌ಗಳನ್ನು ಪೂರೈಸಲಿದೆ.

ಇನ್ನು, ಹನ್ನೆರಡು ಕೋಚ್‌ಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ. ಉಳಿದವುಗಳನ್ನು ಬಂಗಾಳದಲ್ಲಿ ಸಿಆರ್‌ಆರ್‌ಸಿಯ ಭಾರತದ ಪಾಲುದಾರ ಟಿಟಾಗರ್ ರೈಲ್ ಸಿಸ್ಟಮ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ಜೋಡಿಸುತ್ತಿದೆ. ಬಿಎಂಆರ್‌ಸಿಎಲ್ ಈ ವರ್ಷದ ಫೆಬ್ರವರಿಯಲ್ಲಿ ಚೀನಾದಿಂದ ಮೂಲಮಾದರಿಯ ಆರು ಬೋಗಿಗಳ ರೈಲನ್ನು ಪಡೆದುಕೊಂಡಿದೆ.
ಹೆಬ್ಬಗೋಡಿ ಡಿಪೋದಲ್ಲಿ ಸ್ಥಿರ ಮತ್ತು ವಿದ್ಯುತ್ ಸರ್ಕ್ಯೂಟ್ ಪರೀಕ್ಷೆಯ ನಂತರ, ಬಿಎಂಆರ್‌ಸಿಎಲ್ ಮಾರ್ಚ್ ಆರಂಭದಲ್ಲಿ ಬೊಮ್ಮಸಂದ್ರ ಮತ್ತು ಬೊಮ್ಮನಹಳ್ಳಿ (12.5 ಕಿಮೀ) ನಡುವೆ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಿತು. ಸಂಪೂರ್ಣ ಹಳದಿ ರೇಖೆಗೆ (ಆರ್‌ವಿ ರಸ್ತೆ-ಬೊಮ್ಮಸಂದ್ರ) ಪ್ರಾಯೋಗಿಕ ಚಾಲನೆಯನ್ನು ವಿಸ್ತರಿಸಲು ಇನ್ನೂ ಮೂರು ತಿಂಗಳು ಬೇಕಾಗಿತ್ತು.

ಹೀಗಾಗಿ ಜೂನ್ 13ರ ಗುರುವಾರ, ರೈಲು ಬೊಮ್ಮಸಂದ್ರದಿಂದ ಮಧ್ಯಾಹ್ನ 12.43 ಕ್ಕೆ ಪ್ರಾಯೋಗಿಕ ರನ್‌ಗೆ ಹೊರಟಿತು ಮತ್ತು 14 ಮಧ್ಯಂತರ ನಿಲ್ದಾಣಗಳಲ್ಲಿ ತಲಾ ಎರಡು ನಿಮಿಷಗಳ ಕಾಲ ನಿಲ್ಲಿಸಿ ಆರ್‌ವಿ ರಸ್ತೆಗೆ ಬಂದಿದೆ. ಆರ್.ವಿ.ರಸ್ತೆಯಲ್ಲಿ ಅರ್ಧಗಂಟೆಯ ನಿಲುಗಡೆಯ ನಂತರ ರೈಲು ಬೊಮ್ಮಸಂದ್ರಕ್ಕೆ ವಾಪಸ್ ಹಿಂದಿರುಗುವ ಪ್ರಯಾಣವನ್ನು ಪುನರಾರಂಭಿಸಿತು. ಈ ಪ್ರಾಯೋಗಿಕ ಸಂಚಾರ ಪ್ರಕ್ರಿಯೆಯಲ್ಲಿ ಸಿಗ್ನಲಿಂಗ್ ಮತ್ತು ಟ್ರ್ಯಾಕ್ ಸ್ಥಿತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಯಿತು.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಎಂ "ಇದು ನಡೆಯುತ್ತಲೇ ಇರುತ್ತದೆ ಮತ್ತು ಮೂರರಿಂದ ನಾಲ್ಕು ತಿಂಗಳು ಮುಂದುವರಿಯುತ್ತದೆ. ಎರಡನೇ ಮತ್ತು ಮೂರನೇ ರೈಲುಗಳು ಬಂದಾಗ, ನಾವು ಇತರ ಪರೀಕ್ಷೆಗಳನ್ನು ಮಾಡಿ ಮತ್ತು CMRS ನಿಂದ ಅನುಮೋದನೆ ಪಡೆಯುತ್ತೇವೆ. ಪ್ರಾಯೋಗಿಕ ಚಾಲನೆಯಂತೆ ವೇಗವನ್ನು ಕ್ರಮೇಣ ಹೆಚ್ಚಿಸಲಾಗುವುದು" ಎಂದಿದ್ದಾರೆ.












Click it and Unblock the Notifications