ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಕೇಂದ್ರ ಯೋಜನೆಗಳ ಸಿಗಲ್ಲ ಎಂದ ನಡ್ಡಾ: ಕನ್ನಡಿಗರ ಭಾರೀ ಆಕ್ರೋಶ
ಬೆಂಗಳೂರು, ಮೇ 8: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇಂದ್ರ ಯೋಜನಗೆಗಳಿಗೆ ಬ್ರೇಕ್ ಬೀಳುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿಕೆಗೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕೇಂದ್ರ ಯೋಜನೆಗಳನ್ನು ಜೆಪಿ ನಡ್ಡಾ ಅವರು ಪ್ರಿತ್ರಾರ್ಜಿತ ಆಸ್ತಿಯಲ್ಲ. ಅವರು ತಮ್ಮ ಜೇಬಿನಿಂದ ಈ ಯೋಜನೆಗಳನ್ನು ಕನ್ನಡಿಗರಿಗೆ ಕೊಡುವುದಿಲ್ಲ ಎಂದು ಜನರು ತಿರುಗೇಟು ನೀಡಿದ್ದಾರೆ. ಈ ಹಿಂದಿ ಗೊಡ್ಡುಗಳ ಬೆದರಿಕೆ ಅತಿಯಾಯ್ತು, ಚುನಾವಣಾ ಆಯೋಗ ಏನಾಗಿದೆ. ಅವರ ಈ ಹೇಳಿಕೆ ಕರ್ನಾಟಕದ ಸ್ವಾಭಿಮಾನವನ್ನು ಅಣಕ ಮಾಡುತ್ತಿದೆ ಎಂದು ಶ್ರೀನಿವಾಸ್ ಎಂಬವವರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ರಾಮಕೃಷ್ಣ ಎಂಬ ಬಳಕೆದಾರರು ನಿಮ್ಮ ಯೋಜನೆಗಳೇ ಬೇಡ. ನಮ್ಮ ಜಿಎಸ್‌ಟಿಯನ್ನು ನಿಮಗೆ ಕೊಡುವುದಿಲ್ಲ. ನಮ್ಮ ಕರ್ನಾಟಕ 5 ವರ್ಷದಲ್ಲಿ ಅಭಿವೃದ್ಧಿಯಲ್ಲಿ ನಂ. 1 ರಾಜ್ಯವಾಗಲಿದೆ ಎಂದು ಹೇಳಿದ್ದಾರೆ. ಭಾಗ್ಯ ಸಿಎಚ್ ಎಂಬ ಬಳಕೆದಾರರು ಕೇಂದ್ರದ ಯೋಜನೆಗಳು ಅವರ ಮನೆಯ ಆಸ್ತಿಯಲ್ಲ. ಜನರ ಹಕ್ಕು ಅದು ಎಂದು ಹೇಳಿದ್ದಾರೆ.
ದೊಡ್ಡಬಳ್ಳಾಪುರ ವೆಂಕಿ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು, ನಡ್ಡಾನ ಹೇಳಿಕೆಯಲ್ಲಿ ಮೊಂಡುತನ, ಹುಚ್ಚುತನ ತುಳುಕಾಡುತ್ತಿದೆ. ಕೇಂದ್ರ ಹಾಗೂ ರಾಜ್ಯದ ಸಂಬಂಧವನ್ನು ಹದಗೆಡಿಸುತ್ತದೆ. ಜಿಎಸ್‌ಟಿ ತೆರಿಗೆ ಶ್ರೇಣಿ ನಿರ್ಧಾರದ ಅಧಿಕಾರ ರಾಜ್ಯಗಳು ತೆಗೆದುಕೊಳ್ಳಬಹುದು. ಇಲ್ಲಿ ಕಾಂಗ್ರೆಸ್ ಬಂದರೆ ಕೇಂದ್ರದ ಕುತ್ತಿಗೆಗೆ ಸುಪ್ರೀಂ ಕೋರ್ಟ್ ಕೈ ಹಾಕಿಸಬಹುದು ಚಡ್ಡಾ ಎಂದು ಹೇಳಿದ್ದಾರೆ.

ಚಂದ್ರಶೇಖರ್ ಸಿರಿವಂತೆ ಎಂಬುವವರು ಈಗೆಲ್ಲಿ ಬರುತ್ತಿವೆ ಕೇಂದ್ರದ ಯೋಜನೆಗಳು, ಯೋಜನೆಗಳೇ ಇಲ್ಲದ ಸರ್ಕಾರ ತಾನೇ ಇದು ಎಂದಿದ್ದಾರೆ. ಮೋಹನ್ ಮೈಸೂರು ಎಂಬುವರು ಯುದ್ಧಕ್ಕೆ ಮುಂಚೆಯೇ ಸೋಲುತ್ತೀವಿ ಎನ್ನುವ ಭಯ ಶುರುವಾಗಿದೆ ಎಂದು ಹೇಳಿದ್ದಾರೆ.
ಇನ್ನು ನಡ್ಡಾ ಹೇಳಿಕೆಗೆ ಸಹಜವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ನಾಯಕರು ಪ್ರಜಾತಂತ್ರ ವ್ಯವಸ್ಥೆಯನ್ನು ಕಾಲು ಕಸಕ್ಕಿಂತ ಕೀಳಾಗಿ ಕಾಣುತ್ತಿದ್ದಾರೆ ಎನ್ನುವುದನ್ನು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಹೇಳಿಕೆ ಮತ್ತೊಮ್ಮೆ ಸಾಬೀತುಪಡಿಸಿದೆ. ಅಷ್ಟಕ್ಕೂ ಕೇಂದ್ರದ ಯೋಜನೆಗಳು ಬಿಜೆಪಿಯವರ ಪೂರ್ವಜರ ಆಸ್ತಿಯೇ? ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ಅತಿ ಹೆಚ್ಚು ತೆರಿಗೆ ಕಟ್ಟುವ ಕನ್ನಡಿಗರಿಗೆ ಬೆದರಿಕೆಯೊಡ್ಡುವ ಇಂಥ ಪ್ರಯತ್ನ ಸೋಲುವ ನಿಮ್ಮ ಹತಾಶೆಯನ್ನು ತೋರುತ್ತದೆ. ನಡ್ಡಾ ಅವರು ಈ ರೀತಿ ಕನ್ನಡಿಗರಿಗೆ ಬೆದರಿಕೆ ಹಾಕುತ್ತಿರುವುದು ಎರಡನೇ ಬಾರಿ. ಚುನಾವಣಾ ಆಯೋಗ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ದೀಪು ಗೌಡ ಎಂಬ ಬಳಕೆದಾರರು, ಇದನ್ನು ನಡ್ಡಾ ಹೇಳಿರೋದು ನಿಜವಾದರೆ, ಕ್ಷಮೆ ಕೇಳಿದರೆ ಸಾಲದು. ನಡ್ಡಾ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಬೇಕು. ಇಲ್ಲವಾದರೆ ಬಿಜೆಪಿಯನ್ನು ದೇಶದ ಎಲ್ಲಾ ರಾಜ್ಯಗಳ ಜನರು ಬಹಿಷ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ "ಬಿಜೆಪಿ ಸೋತರೆ ಕೇಂದ್ರದ ಯೋಜನೆ ಬಂದ್" - ನಡ್ಡಾ. ಹೌದು, ಬಿಜೆಪಿ ಸೋತು, ಕಾಂಗ್ರೆಸ್ ಗೆದ್ದಾಗ ಬಂದ್ ಆಗಲಿರುವ ಯೋಜನೆ. ಅಮೂಲ್ ಜೊತೆ ನಂದಿನಿಯ ವಿಲೀನದ ಯೋಜನೆ, ಹಿಂದಿ ಹೇರಿಕೆಯ ಯೋಜನೆ, GST ಮೋಸದ ವಂಚನೆ, ರಾಜ್ಯದ ಇಸ್ರೋ ಸ್ಥಳಾಂತರಿಸುವ ಯೋಜನೆ, ಏರ್ ಶೋ ಕಿತ್ತುಕೊಳ್ಳುವ ಯೋಜನೆ, 40% ಕಮಿಷನ್ ಲಪಟಾಯಿಸುವ ಯೋಜನೆ, ಸಿಎಂ ಹುದ್ದೆ ಮಾರಿಕೊಳ್ಳುವ ಯೋಜನೆ ರದ್ದಾಗಲಿದೆ ಎಂದು ತಿರುಗೇಟು ನೀಡಿದೆ.












Click it and Unblock the Notifications